Advertisement

ಉಚಿತ ಚಿಕಿತ್ಸೆಗೆ ಗುರುತಿನ ಕಾರ್ಡ್‌ ಸಾಕು: ಕೋಟ

09:41 AM Jul 25, 2020 | mahesh |

ಮಂಗಳೂರು: ವೆನ್ಲಾಕ್‌ ಹಾಗೂ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌ ತಪಾಸಣ ಲ್ಯಾಬ್‌ ವ್ಯವಸ್ಥೆಯಿದ್ದು, ಉಳಿದ ನಾಲ್ಕು  ಸ್ಪತ್ರೆಗಳಲ್ಲಿಯೂ 15 ದಿನದೊಳಗೆ ಕೋವಿಡ್‌ ತಪಾಸಣ ಲ್ಯಾಬ್‌ ನಡೆಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಅಂತಹ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿ. ಪಂ.ನ ವಿಶೇಷ ಸಭೆಯಲ್ಲಿ ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಜಿ.ಪಂ. ಸದಸ್ಯರು ಭಾಗವಹಿಸಿ ಕೋವಿಡ್‌ ನಿಯಂತ್ರಣ ಕುರಿತಂತೆ ಚರ್ಚಿಸಿದರು.

Advertisement

ಗುರುತಿನ ಚೀಟಿ ಸಾಕು
ಸರಕಾರ ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಆಧಾರ್‌ ಕಾರ್ಡ್‌ ಕೂಡ ಬೇಕಾಗಿಲ್ಲ. ಯಾವುದಾದರೂ ಗುರುತಿನ ಚೀಟಿ ಇದ್ದರೂ ಸಾಕಾಗುತ್ತದೆ. ಹುಟ್ಟಿದ 10 ತಿಂಗಳೊಳಗಿನ ಮಗುವಾಗಿದ್ದಲ್ಲಿ ತಾಯಿಕಾರ್ಡ್‌ ಇದ್ದರೂ ಸಾಕು. ವೆನ್ಲಾಕ್‌ ಆಸ್ಪತ್ರೆಯಲ್ಲಿ ಈಗಾಗಲೇ ಹೊರರೋಗಿ ವಿಭಾಗವನ್ನು ಆರಂಭಿಸಲಾಗಿದ್ದು ಖಾಸಗಿ ಆಸ್ಪತ್ರೆಗಳಲ್ಲೂ ಹೊರರೋಗಿ ವಿಭಾಗ ಆರಂಭಿಸಲು ತಿಳಿಸಲಾಗಿದೆ ಎಂದರು. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಹೆಸರಿನಲ್ಲಿ ಹಣ ದೋಚಲಾಗುತ್ತದೆ ಹಾಗೂ ಉಚಿತ ಚಿಕಿತ್ಸೆಯ ಬಗ್ಗೆ ಗೊಂದಲಗಳಿವೆ ಎಂದು ಜಿ.ಪಂ. ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ಸೋಂಕು ಲಕ್ಷಣವಿಲ್ಲದಿದ್ದರೆ ಹೋಂ ಕ್ವಾರಂಟೈನ್‌
ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ| ರತ್ನಾಕರ್‌ ಅವರು ಮಾತನಾಡಿ, ಸರಕಾರ ನಿಗದಿಪಡಿಸಿದ 8 ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಕೋವಿಡ್‌ಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಗಂಟಲ ದ್ರವ ಪರೀಕ್ಷೆವರೆಗಿನ ವೆಚ್ಚವನ್ನು ರೋಗಿ ಭರಿಸಬೇಕು. ಸೋಂಕಿನ ಗುಣಲಕ್ಷಣಗಳಿಲ್ಲದವರಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆಗಳಿದ್ದಲ್ಲಿ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ. ಆದರೆ 10 ವರ್ಷದ ಕೆಳಗಿನ, 60 ವರ್ಷ
ಮೇಲ್ಪಟ್ಟ ಹಾಗೂ ಗರ್ಭಿಣಿಯರಿಗೆ ಸೋಂಕು ತಗಲಿದ್ದಲ್ಲಿ ನಿಬಂಧನೆಗಳನು ಸಾರ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಐಸೊಲೇಶನ್‌ ಮಾಡಲಾಗುತ್ತದೆ. ಗುಣ
ಲಕ್ಷಣ ಇರುವ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಜನರಲ್‌ ವಾರ್ಡ್‌ಗೆ ದಿನಕ್ಕೆ 5,000 ರೂ.ನಂತೆ 10 ದಿನಗಳ ಚಿಕಿತ್ಸೆ ಒದಗಿಸಲಾಗುತ್ತದೆ. ಐಸಿಯು ವೆಂಟಿಲೇಶನ್‌ ವ್ಯವಸ್ಥೆಯಡಿ ಚಿಕಿತ್ಸೆಗೆ ದಿನಕ್ಕೆ ಈ ಯೋಜನೆಯಡಿ 25,000 ರೂ.ನಂತೆ 10 ದಿನಗಳ ಚಿಕಿತ್ಸಾ ವೆಚ್ಚ ಭರಿ
ಸಲಾಗುತ್ತದೆ ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ “ಆರೋಗ್ಯ ಮಿತ್ರರು’ ಸ್ಪಂದಿಸುವುದಿಲ್ಲ ಎಂಬ ಸದಸ್ಯರ ಆರೋಪಕ್ಕೆ, ಸರಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಕರೆಯನ್ನು ಕಡ್ಡಾಯವಾಗಿ ಸ್ವೀಕರಿಸಿ ಸ್ಪಂದಿಸಬೇಕು. ಇಲ್ಲವಾದರೆ ಕ್ರಮ ಜರಗಿಸಲಾಗುವುದು ಎಂದು ಸಚಿವ ಕೋಟ ಉತ್ತರಿಸಿದರು. ಶಾಸಕರಾದ ಯು.ಟಿ.ಖಾದರ್‌, ಸಂಜೀವ ಮಠಂದೂರು, ರಾಜೇಶ್‌ ನಾೖಕ್‌, ಹರೀಶ್‌ ಪೂಂಜ, ಉಮಾನಾಥ ಕೋಟ್ಯಾನ್‌, ಡಿ. ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ
ಪ್ರತಾಪ್‌ ಸಿಂಹ ನಾಯಕ್‌ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ,
ರವೀಂದ್ರ ಕಂಬಳಿ, ಧನಲಕ್ಷ್ಮೀ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಜಿ.ಪಂ. ಸಿಇಒ ಆರ್‌.ಸೆಲ್ವಮಣಿ ಉಪಸ್ಥಿತರಿದ್ದರು.

ಶೇ.85 ಮಂದಿಗೆ ರೋಗ ಲಕ್ಷಣಗಳೇ ಇಲ್ಲ !
ದ.ಕ. ಜಿಲ್ಲೆಯಲ್ಲಿ ಈವರೆಗೆ ಶೇ. 85ರಷ್ಟು ಕೊರೊನಾ ಸೋಂಕಿತರಿಗೆ  ರೋಗ ಲಕ್ಷಣಗಳಿಲ್ಲ. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೊನಾ ತಪಾಸಣೆಗಾಗಿ ಈಗಾಗಲೇ 3,000 ರ್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ಗಳಿದ್ದು, ಮತ್ತೆ 10,000 ಕಿಟ್‌ಗಳು ಬಂದಿವೆ. ಮಂಗಳೂರು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆಗಳಿಗೆ ತೆರಳಿ ಪಲ್ಸ್‌ ಆಕ್ಸಿಮೀಟರ್‌ಗಳಲ್ಲಿ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಹೇಳಿದ್ದಾರೆ.

Advertisement

ಮನೆಯವರಿಗೆ ಅವಕಾಶ ನೀಡಿ
ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ ಮಾತನಾಡಿ, ಕೋವಿಡ್ ಸೋಂಕಿತರು ಮೃತಪಟ್ಟಾಗ, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಮೃತರ ಮನೆಯವರಿಗೆ ಅವಕಾಶ ನೀಡಿದರೆ ಉತ್ತಮ ಎಂದರು. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಉತ್ತರಿಸಿ, ಈಗಾಗಲೇ ಈ ಕಾರ್ಯ ಮಾಡಲಾಗುತ್ತಿದೆ. “ಡಿ’ ಗ್ರೂಪ್‌ ನೌಕರರು ಅಂತ್ಯ ಸಂಸ್ಕಾರದ ವೇಳೆ ಮೃತರ ಮನೆಯವರ ಜತೆಗಿರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next