Advertisement

ಮಕ್ಕಳ ಸೃಜನಶೀಲತೆ ಗುರುತಿಸಿ: ಕಾರ್ತಿಕ್‌ ಭಟ್‌

10:29 AM May 19, 2018 | Team Udayavani |

ಪಾವಂಜೆ: ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಿದರೆ ಉತ್ತಮ ವಿನ್ಯಾಸಗಾರನಾಗಿಯೂ ಬೆಳಕಿಗೆ ಬಂದು ಹೊಸತನದ ಆವಿಷ್ಕಾರವನ್ನು ಮಾಡಲು ಸಾಧ್ಯವಿದೆ. ಅವರಲ್ಲಿನ ಆತ್ಮಸ್ಥೈರ್ಯಕ್ಕೆ ಹೆತ್ತವರೇ ಮಹಾ ಪೋಷಕರು ಎಂದು ಪೇಪರ್‌ ಕ್ರಾಫ್ಟ್‌ ವಿನ್ಯಾಸಗಾರ ಕಾರ್ತಿಕ್‌ ಭಟ್‌ ಹೇಳಿದರು.

Advertisement

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ನಡೆಯುತ್ತಿರುವ ಸಂಸ್ಕಾರ ಮತ್ತು ಸಂಸ್ಕೃತಿ ಶಿಬಿರದಲ್ಲಿ ಮಕ್ಕಳಿಗೆ ಪೇಪರ್‌ ಕ್ರಾಫ್ಟ್‌ನ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ರಂಗೋಲಿ, ಮುಖವಾಡ ತಯಾರಿ ಮಾಹಿತಿ
ಈ ಸಂದರ್ಭದಲ್ಲಿ ಶಿಬಿರದಲ್ಲಿ ರಂಗೋಲಿ ಬಿಡಿಸುವ ವಿನ್ಯಾಸವನ್ನು ಕಾತ್ಯಾಯಿನಿ ಕಿನ್ನಿಗೋಳಿ ಹಾಗೂ ಮುಖವಾಡ ತಯಾರಿಯನ್ನು ದಿನಮಣಿ ಶಾಸ್ತ್ರಿ ನಡೆಸಿಕೊಟ್ಟರು. ಸಹ ಶಿಕ್ಷಕರಾಗಿ ಶ್ವೇತಾ, ಸಂಧ್ಯಾ, ವೀಣಾ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಮತಾ ಪ್ರಭು, ಕಾತ್ಯಾಯಿನಿ, ಪರ್ಣಾಳಿ, ಪುಂಡಲೀಕ ಸಹಕರಿಸಿದರು. ಶಿಬಿರದ ನಿರ್ದೇಶಕ ಜಗದೀಶ್‌ ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next