Advertisement

ಸೊಳ್ಳೇದೊಳ್ಳೇ ಐಡಿಯಾ..!

02:10 PM Mar 07, 2018 | Harsha Rao |

ಕರೆಂಟ್‌ ಆಫ್ ಮಾಡಿ, ಕತ್ತಲೆಯಲ್ಲಿ ರೂಮಿನ ಮೂಲೆಯಲ್ಲಿ ಅಡಗಿ ಕುಳಿತು ನೋಡಿ; ನೀವು ಅದ್ಯಾವ ಮೂಲೆಯಲ್ಲಿ ಕದ್ದು ಕುಳಿತಿದ್ದರೂ ಸೊಳ್ಳೆಗಳು ಮ್ಯೂಸಿಕ್ಕು ಹಾಡುತ್ತಾ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಕತ್ತಲಿನಲ್ಲಿ ಮನುಷ್ಯರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ, ಸೊಳ್ಳೆಗಳಿಗೆ ಬೆಳಕಿಲ್ಲದೆಯೂ ಜಗತ್ತು ಕಾಣಿಸುತ್ತದೆ ಇರಬೇಕು ಅಂದುಕೊಂಡಿರಾ? ಉಹೂಂ.. ನಮ್ಮಂತೆಯೇ ಸೊಳ್ಳೆಗಳಿಗೂ ರಾತ್ರಿ ಕಣ್ಣು ಕಾಣಿಸುವುದಿಲ್ಲ! ಆದರೂ, ಅವು ಕತ್ತಲಿನಲ್ಲಿ ನಾವಿದ್ದಲ್ಲಿಗೆ ಬರೋದಾದ್ರೂ ಹೇಗೆ ಅಂತೀರ? ಹಾಗೆ ಬರುವುದಕ್ಕಾಗಿ ಸೊಳ್ಳೆಗಳು ಒಂದು ಐಡಿಯಾ ಮಾಡುತ್ತವೆ.

Advertisement

   ಮನುಷ್ಯನ ದೇಹದ ಉಷ್ಣತೆ ಹಾಗೂ ವಾಸನೆ ಸೊಳ್ಳೆಗಳನ್ನು ಬಹಳ ಬೇಗನೆ ಆಕರ್ಷಿಸುತ್ತವೆ. ನಾವು ಉಸಿರು ಬಿಡುವಾಗ ಹೊರಬರುವ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ನಮ್ಮ ದೇಹದಿಂದ ಹೊರಬರುವ ಬೆವರು (ಮುಖ್ಯವಾಗಿ ಬೆವರಿನಲ್ಲಿರುವ ರಾಸಾಯನಿಕ ಮತ್ತು ಲ್ಯಾಕ್ಟಿಕ್‌ ಆಮ್ಲ) ಸೊಳ್ಳೆಗಳನ್ನು ನಮ್ಮ ಸಮೀಪಕ್ಕೆ ಬರುವಂತೆ ಸೆಳೆಯುವ ಅಂಶಗಳು. ಕತ್ತಲಿನಲ್ಲಿ ನಮಗೆ ಸೊಳ್ಳೆಗಳು ಕಾಣಿಸುವುದಿಲ್ಲ, ಸೊಳ್ಳೆಗಳಿಗೂ ನಾವು ಕಾಣಿಸುವುದಿಲ್ಲ. ಆದರೆ, ಅವುಗಳಿಗೆ ನಮ್ಮನ್ನು ವಾಸನೆ ಮೂಲಕ ಪತ್ತೆಹಚ್ಚುವ ಉಪಾಯ ಗೊತ್ತಿದೆಯಲ್ಲ. ಹಾಗಾಗಿಯೇ ಅವು ಕತ್ತಲಿನಲ್ಲೂ ನಾವಿದ್ದ ಜಾಗಕ್ಕೆ ಹುಡುಕಿಕೊಂಡು ಬರುತ್ತವೆ.

   ಇದು ನಿಜವಾ, ಸುಳ್ಳಾ ಅಂತ ಬೇಕಾದ್ರೆ ನೀವು ಟೆಸ್ಟ್‌ ಮಾಡಬಹುದು. ಆದ್ರೆ ಹಾಗೆ ಪರೀಕ್ಷಿಸುವಾಗ ಸೊಳ್ಳೆಬತ್ತಿ ಅಥವಾ ಮಸ್ಕಿಟೋ ಲಿಕ್ವಿಡ್‌ ಹಚ್ಚಿಟ್ಟು ಸೊಳ್ಳೆಗಳಿಗೆ ಮೋಸ ಮಾಡಬರದು!

-ಸದಾ ಸಕಲೇಶಪುರ

Advertisement

Udayavani is now on Telegram. Click here to join our channel and stay updated with the latest news.

Next