Advertisement
2009ರಿಂದ 2013ನೇ ಸಾಲಿನಲ್ಲಿ ಈ ಪ್ರಕರಣ ನಡೆದಿದೆ. ಲೀಸ್ ಬಗ್ಗೆ ನಕಲಿ ದಾಖಲೆಗಳನ್ನು ಒದಗಿಸಿ ಈ ವಂಚನೆ ಎಸಗಲಾಗಿದೆ. ಮೀನು ಸಾಕಣೆ ವ್ಯಾಪಾರ ನಡೆಸುವುದಾಗಿ ಹೇಳಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿತ್ತು ಎಂದು ಆರೋಪಿಸ ಲಾಗಿದೆ.
ವಜ್ರೋದ್ಯಮಿ ನೀರವ್ ಮೋದಿ ಪಿಎನ್‌ಬಿಗೆ 12,000 ಕೋಟಿ ವಂಚಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ ರಾತ್ರಿ ಮೊದಲ ಬಂಧನ ಮಾಡಿದೆ. ನೀರವ್ ಮೋದಿ ಸಂಸ್ಥೆಯ ಉಪಾಧ್ಯಕ್ಷ, ಆತನ ಆಪ್ತ ಹಾಗೂ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದ ಶ್ಯಾಮ್ ಸುಂದರ್ ವಾಧ್ವಾನನ್ನು ಇಡಿ ಹಣ ಅಕ್ರಮ ತಡೆ ಕಾಯ್ದೆ ಅಡಿ ಬಂಧಿಸಿದೆ.