Advertisement
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ಗಳು, ವೆಂಟಿಲೇಟರ್ ಹಾಗೂ ಐಸಿಯು ಬೆಡ್‌ಗಳು ಬಹುತೇಕ ಭರ್ತಿಯಾಗುತ್ತಿವೆ. ಜಿಲ್ಲಾಡಳಿತವು ಅಗತ್ಯವಾಗಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಲೇಬೇಕಿದೆ.
Related Articles
Advertisement
ಐಸಿಯು ಬೆಡ್ ಗಳ ಲೆಕ್ಕಾಚಾರದಲ್ಲಿ ಒಟ್ಟಾರೆ 55 ಬೆಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 55 ಬೆಡ್‌ಕೋವಿಡ್‌ಗೆ ಕಾಯ್ದಿರಿಸಲಾಗಿದೆ. ಈ ಪೈಕಿ 44 ಬೆಡ್‌ಗಳು ಭರ್ತಿಯಾಗಿ 9 ಬೆಡ್‌ಗಳು ಖಾಲಿಯಿವೆ. ಜೊತೆಗೆ ವೆಂಟಿಲೇಟರ್ ಜೊತೆಗೆ ಐಸಿಯು ಬೆಡ್‌ಗಳ ಲೆಕ್ಕಾಚಾರದಲ್ಲಿ ಒಟ್ಟಾರೆ 49 ಬೆಡ್ ಕೋವಿಡ್‌ಗೆ ಕಾಯ್ದಿರಿಸಿದೆ. ಈ ಪೈಕಿ 39 ಭರ್ತಿಯಾಗಿ, 5 ಬೆಡ್‌ಗಳು ಮಾತ್ರ ಖಾಲಿಯಿವೆ. ಅಂದರೆ, ಜಿಲ್ಲೆಯಲ್ಲಿ ಸಾಮಾನ್ಯ ಬೆಡ್‌ಗಳನ್ನು ಹೊರತುಪಡಿಸಿ ಆಕ್ಸಿಜನ್ ಬೆಡ್, ಐಸಿಯು, ಎಚ್‌ಡಿಯು, ವೆಂಟಿಲೇಟರ್ ಬೆಡ್ ಜೊತೆ ಐಸಿಯು ಬೆಡ್‌ಗಳು ಒಟ್ಟಾರೆ 315 ಬೆಡ್‌ಗಳು ಮಾತ್ರ ಇವೆ. ಇವುಗಳಲ್ಲಿ 276 ಬೆಡ್‌ಗಳು ಬುಧವಾರದ ಅಂತ್ಯದವರೆಗೂ ಭರ್ತಿಯಾಗಿವೆ.
ಜಿಲ್ಲಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 39 ಬೆಡ್‌ಗಳು ಮಾತ್ರ ಖಾಲಿಯಿವೆ. ಆಸ್ಪತ್ರೆಗೆ ಸೋಂಕಿತರು ಕೊನೆಯ ಹಂತಕ್ಕೆ ಆಗಮಿಸುತ್ತಿರುವುದರಿಂದ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಆಕ್ಸಿಜನ್, ವೆಂಟಿಲೇಟರ್ ಇಲ್ಲವೇ ಐಸಿಯು ಬೆಡ್‌ಗಳ ಅಗತ್ಯವಿರುತ್ತದೆ. ಆದರೆ ಜಿಲ್ಲೆಯಲ್ಲಿ ಇರುವ 315 ಬೆಡ್‌ಗಳ ಪೈಕಿ ಬಹುಪಾಲು ಭರ್ತಿಯಾಗಿವೆ. ಉಳಿದ 39 ಬೆಡ್‌ಗಳು ಇನ್ನು ಒಂದೆರಡು ದಿನದಲ್ಲಿ ಭರ್ತಿಯಾದರೂ ಅಚ್ಚರಿಪಡಬೇಕಿಲ್ಲ. ಜಿಲ್ಲಾಡಳಿತ ಈಗಲೇ ಹೆಚ್ಚುವರಿ ಐಸಿಯು, ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್‌ಗಳನ್ನು ಮುಂಜಾಗೃತೆಯಿಂದ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮವಾಗಲಿದೆ.