ಬೆಂಗಳೂರು: ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಐಎಸ್‌ಸಿಇ) 12ನೇ ತರಗತಿಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ 15 ವಿದ್ಯಾರ್ಥಿಗಳು ಟಾಪ್ 3ನೇ ಸ್ಥಾನವನ್ನು ಪಡೆದಿದ್ದಾರೆ.
ದೇಶದಲ್ಲಿ 154 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಮೂರನೇ ಸ್ಥಾನ ಪಡೆದಿದ್ದು, ಇದರಲ್ಲಿ ಕರ್ನಾಟಕದ 15 ವಿದ್ಯಾರ್ಥಿಗಳಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಶಾಲೆಯ ಸನ ಜೋಸ್, ಕ್ರೈಸ್ಟ್ ಅಕಾಡೆಮಿಯ ನಿವೇದಿತಾ ಎಸ್.ವಾರಿಯರ್, ಸೇಂಟ್ ಫ್ರಾನ್ಸಿಸ್ ಶಾಲೆಯ ಸ್ನೇಹಾ ಎನ್. ಶಾಸ್ತ್ರಿ ಅವರು ಶೇ.99.50 ಅಂಕ ಪಡೆದಿದ್ದಾರೆ. ಉಳಿದ 8 ವಿದ್ಯಾರ್ಥಿಗಳಾದ ಆದಿತ್ಯ ಚಂದನ, ಕಾರ್ತಿಕ ಕಣ್ಣನ್, ಸಯ್ಯದ್ ವಜೀದ್ ಹುಸೇನ್, ಜೈವೀರ್ ಸಂದೀಪ್ ಚಾಬ್ರಿಯಾ, ವೇದಾ ಮೆನನ್, ಸುರಭಿ, ಹಿತಾ ಚಿಟೂÉರು, ಆದಿತ್ಯ ನಿಶಾಂತ್ ಅವರು ವಿದ್ಯಾರ್ಥಿಗಳು ಶೇ.99.25 ಅಂಕ ಗಳಿಸಿದ್ದಾರೆ. ಮೃತಿಕಾ ಭಾಸ್ಕರ್, ಟಿ.ಜಿ. ನವ್ಯ, ಮಾನಸ ನಿಲೇಶ್, ಅಕ್ಷರ್ ಧೃವ್ ಕೃಷ್ಣನ್ ಶೇ.99 ಅಂಕ ಗಳಿಸಿದ್ದಾರೆ.
ರಾಜ್ಯದಿಂದ 2,169 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ಅನುತ್ತೀಣರಾಗಿ ಶೇ.99.72 ಫಲಿತಾಂಶ ದೊರೆತಿದೆ. ಬಾಲಕಿಯರು ಶೇ.99.83 ಮತ್ತು ಬಾಲಕರು ಶೇ.99.60 ಫಲಿತಾಂಶ ಗಳಿಸಿದ್ದಾರೆ.