Advertisement

ICSE 10, 12 ಪರೀಕ್ಷಾ ಫ‌ಲಿತಾಂಶ ಪ್ರಕಟ; ಇಬ್ಬರು ವಿದ್ಯಾರ್ಥಿಗಳಿಗೆ ಶೇ.ನೂರು ಅಂಕ

10:04 AM May 08, 2019 | Team Udayavani |

ಹೊಸದಿಲ್ಲಿ : ICSE 10 ಮತ್ತು 12ನೇ ತರಗತಿಯ ಪರೀಕ್ಷಾ ಫ‌ಲಿತಾಂಶಗಳು ಇಂದು ಬಹಿರಂಗವಾಗಿವೆ; ಇಬ್ಬರು ವಿದ್ಯಾರ್ಥಿಗಳು 100 ಪರ್ಸೆಂಟ್‌ ಅಂಕ ಪಡೆದಿದ್ದಾರೆ. ಎರಡೂ ತರಗತಿಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

Advertisement

ಐಎಸ್‌ಸಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು 100 ಪರ್ಸೆಂಟ್‌ ಅಂಕ ಪಡೆದಿರುವುದು ವಿಶೇಷವಾಗಿದೆ.

ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಶನ್‌ (ಸಿಐಎಸ್‌ಸಿಇ) ಚೀಫ್ ಎಕ್ಸಿಕ್ಯೂಟಿವ್‌ ಮತ್ತು ಕಾರ್ಯದರ್ಶಿ ಜೆರ್ರಿ ಆ್ಯರಥೂನ್‌ ಅವರಿಂದ ಐಸಿಎಸ್‌ಇ 10 ಮತ್ತು ಐಎಸ್‌ಸಿ 12 ನೇ ತರಗತಿಯ ಫ‌ಲಿತಾಂಶ ಪ್ರಕಟಿಸಿದರು.

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಹುಡುಗಿಯರು ಶೇ.99.05 ತೇರ್ಗಡೆಯನ್ನು ಸಾಧಿಸಿದ್ದಾರೆ. ಹುಡುಗರ ತೇರ್ಗಡೆ ಪ್ರಮಾಣ ಶೇ.98.12.

12ನೇ ತರಗತಿ ಪರೀಕ್ಷೆಯಲ್ಲಿ ಹುಡುಗಿಯರ ತೇರ್ಗಡೆ ಶೇ.97.84, ಹುಡುಗರ ತೇರ್ಗಡೆ ಪ್ರಮಾಣ ಶೇ.95.40.

Advertisement
Advertisement

Udayavani is now on Telegram. Click here to join our channel and stay updated with the latest news.

Next