Advertisement

ತನ್ನ ಎಫ್‌ ಡಿ ಬಡ್ಡಿದರಗಳನ್ನು ಪರಿಷ್ಕರಿಸಿದ ಐಸಿಐಸಿಐ ಬ್ಯಾಂಕ್..!  

03:45 PM May 12, 2021 | |

ನವ ದೆಹಲಿ : ಐಸಿಐಸಿಐ ಬ್ಯಾಂಕ್ ತನ್ನ ಎಫ್‌ ಡಿ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ ಡಿಗಳಿಗೆ ಬಡ್ಡಿದರಗಳನ್ನು ಪ್ರಕಟಿಸಿದೆ.

Advertisement

ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ ಡಿಗಳಿಗೆ  ಶೇಕಡಾ 2.5 ರಿಂದ ಶೇಕಡಾ 6.3 ವರೆಗೆ ನೀಡಲಿದ್ದು, ಹೊಸ ಬಡ್ಡಿದರಗಳನ್ನು ಪ್ರಕಟಿಸದೆ.

ಇದನ್ನೂ ಓದಿ :  ಕೋವಿಡ್ ನಿಂದ ಮಹಿಳೆ ಸಾವು ಶಂಕೆ : ಶವ ಸಾಗಿಸಲು 4 ಗಂಟೆಗಳ ವಿಳಂಬ ಜನರ ಆಕ್ರೋಶ

ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 29 ದಿನಗಳ ಠೇವಣಿಗಳ ಮೇಲೆ 2.5% ಬಡ್ಡಿಯನ್ನು ನೀಡುತ್ತಿದೆ.

ಮಾತ್ರವಲ್ಲದೇ, 3 ರಿಂದ 6 ತಿಂಗಳವರೆಗೆ ಎಫ್‌ ಡಿ ಮೇಲೆ 3.5 ಬಡ್ಡಿ ನೀಡಲಾಗುತ್ತಿದೆ. 185 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ ಡಿಗೆ ಶೇಕಡಾ 4.40 ಬಡ್ಡಿ ನೀಡಲಾಗುತ್ತಿದೆ.

Advertisement

ಇನ್ನು, 1 ವರ್ಷದಿಂದ ಒಂದೂವರೆ ವರ್ಷಕ್ಕಿಂತ ಕಡಿಮೆ ಎಫ್‌ ಡಿಗಳು ಶೇಕಡಾ 5.4 ಬಡ್ಡಿಯನ್ನು ಪಡೆಯುತ್ತಿವೆ. ಎಫ್‌ ಡಿಗಳಿಗೆ 2 ವರ್ಷಗಳವರೆಗೆ ಶೇಕಡಾ 5.5 ಬಡ್ಡಿ ನೀಡಲಾಗುತ್ತಿದೆ.

2 ರಿಂದ 3 ವರ್ಷಗಳ ಎಫ್‌ ಡಿಗಳಿಗೆ ಶೇಕಡಾ 5.65 ಬಡ್ಡಿ , 3 ರಿಂದ 5 ವರ್ಷಗಳ ಎಫ್‌ ಡಿ ಮೇಲೆ ಶೇಕಡಾ 5.85 ರಷ್ಟು ಬಡ್ಡಿಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.

ಇದನ್ನೂ ಓದಿ : ಸ್ಟಂಪ್ ಹಿಂದಿನಿಂದ ಧೋನಿ ಸಲಹೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಕುಲದೀಪ್ ಯಾದವ್

Advertisement

Udayavani is now on Telegram. Click here to join our channel and stay updated with the latest news.

Next