Advertisement
ಎಲ್ಲರ ಕುತೂಹಲವೂ ಒಂದೇ, ಓವಲ್ ಪಿಚ್ ಹೇಗೆ ವರ್ತಿಸೀತು ಎಂದು. ಏಕೆಂದರೆ 140 ವರ್ಷಗಳ ಇತಿ ಹಾಸವುಳ್ಳ ದಕ್ಷಿಣ ಲಂಡನ್‌ನ ಈ ಓವಲ್ ಅಂಗಳದಲ್ಲಿ ಜೂನ್ ತಿಂಗಳಲ್ಲಿ ಟೆಸ್ಟ್ ಪಂದ್ಯವೊಂದು ನಡೆಯಿತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಇಲ್ಲಿ ಪ್ರವಾಸಿ ತಂಡಗಳಿಗೆ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಇರಿಸುವುದು ವಾಡಿಕೆ. ಇದು ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ನಡೆಯುತ್ತದೆ. ಆಗ ಇಲ್ಲಿನ ಪಿಚ್ ಸಂಪೂರ್ಣ ಒಣಗಿರುತ್ತದೆ. ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ.
ಇದನ್ನು ಗಮನಿಸಿಯೇ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್, ಭಾರತೀಯ ಮೂಲದ ಮಾಂಟಿ ಪನೆಸರ್, ಭಾರತವಿಲ್ಲಿ ಅವಳಿ ಸ್ಪಿನ್ನರ್‌ಗಳನ್ನು ಆಡಿಸುವುದು ಉತ್ತಮ ಎಂದಿದ್ದಾರೆ. ಈ ಸ್ಪಿನ್ನರ್‌ಗಳನ್ನೂ ಅವರಿಲ್ಲಿ ಹೆಸರಿಸಿದ್ದಾರೆ-ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ.
Related Articles
ದಲ್ಲಿ ಹೇಳಿದ್ದಾರೆ.
Advertisement
ಆದರೆ ಎರಡು ವರ್ಷಗಳ ಹಿಂದಿನ ವಿಶ್ವಕಪ್ ಟೆಸ್ಟ್ ಫೈನಲ್‌ನಲ್ಲಿ ಭಾರತದ ಅವಳಿ ಸ್ಪಿನ್ ಪ್ರಯೋಗ ಯಶಸ್ಸು ಕಾಣಲಿಲ್ಲ ಎಂದೂ ಪನೆಸರ್‌ಗೆ ನೆನಪಿಸಲಾಯಿತು. “ಅದು ನಿಜ, ಆದರೆ ಓವಲ್ ವಾತಾವರಣದಲ್ಲಿ ಇದು ಯಶಸ್ವಿಯಾಗಲಿದೆ’ ಎಂದರು.
“ಓವಲ್ ವಾತಾವರಣ ಅತ್ಯಂತ ಬಿಸಿಯಾಗಿದೆ. ಕಳೆದ ಟಿ20 ಬ್ಲಾಸ್ಟ್ ಟೂರ್ನಿಯ ವೇಳೆ ಇಲ್ಲಿ ಚೆಂಡು ತಿರುವು ಪಡೆದುದನ್ನು ಗಮನಿಸಿದ್ದೇವೆ. ಆದರೆ ಈ ಬಾರಿ ಹುಲ್ಲನ್ನು ಕತ್ತರಿಸಿಲ್ಲ. ಬಹುಶಃ ಟೆಸ್ಟ್ ಫೈನಲ್ ನಾಲ್ಕೇ ದಿನದಲ್ಲಿ ಮುಗಿಯಬಾರದು ಎಂಬುದು ಇದರ ಉದ್ದೇಶ ಆಗಿರಬಹುದು’ ಎಂಬುದಾಗಿ ಪನೆಸರ್ ಹೇಳಿದರು.
ಭಾರತದ ಸೀಮ್ ಬೌಲಿಂಗ್ ಕಾಂಬಿನೇಶನ್ ಬಗ್ಗೆ ಮಾತಾಡಿದ ಪನೆಸರ್, ಶಾದೂìಲ್ ಠಾಕೂರ್‌ಗಿಂತ ಉಮೇಶ್ ಯಾದವ್ ಅತ್ಯುತ್ತಮ ಆಯ್ಕೆ ಆಗಬಲ್ಲದು ಎಂದರು. ಜಡೇಜ ಮತ್ತು ಅಶ್ವಿನ್ ಬ್ಯಾಟಿಂಗ್ ಕೂಡ ಮಾಡುವುದರಿಂದ ಠಾಕೂರ್ ಅಗತ್ಯ ಕಂಡುಬರದು. ಇಲ್ಲಿ ಯಾದವ್ ಅವರ ಅನುಭವ ನೆರವಿಗೆ ಬರಲಿದೆ ಎಂದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಉಳಿದಿಬ್ಬರು ವೇಗಿಗಳು.
ಬ್ಯಾಟಿಂಗ್ ಕಾಂಬಿನೇಶನ್ಓವಲ್ ಬ್ಯಾಟಿಂಗ್ ವಿಷಯಕ್ಕೆ ಬರುವುದಾದರೆ, ಇಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ರನ್ 269. ದ್ವಿತೀಯ ಇನ್ನಿಂಗ್ಸ್ ವೇಳೆ ಇದು 280ಕ್ಕೆ ಏರುತ್ತದೆ. 3ನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ 326ಕ್ಕೆ ತಲುಪುತ್ತದೆ. ಇದನ್ನು ಗಮನಿಸುವಾಗ, ದಿನಗಳೆದಂತೆ ಓವಲ್ ಅಂಗಳದಲ್ಲಿ ಬ್ಯಾಟಿಂಗ್ ಸುಲಭ ಎಂಬುದು ಅರಿವಾಗುತ್ತದೆ. “ಭಾರತದ ಟಾಪ್ ಆರ್ಡರ್ ಲೈನಪ್ ಉತ್ತಮ ಫಾರ್ಮ್ನಲ್ಲಿದೆ. ಇಂಗ್ಲೆಂಡ್ ಕೌಂಟಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿರುವ ಚೇತೇಶ್ವರ್ ಪೂಜಾರ ಅವರಿಂದ ಲಾಭ ಖಂಡಿತ. ಇವರು ನಿಂತು ಆಡಿದರೆ, ಉಳಿದವರು ತುಸು ವೇಗದಿಂದ ಬ್ಯಾಟಿಂಗ್ ನಡೆಸಬಹುದಾಗಿದೆ’ ಎಂದು ಪನೆಸರ್ ಅಭಿಪ್ರಾಯಪಟ್ಟರು.