Advertisement

ಮಾರ್ಗನ್‌ ಬಳಗದ ಮಾರ್ಗವೀಗ ದುರ್ಗಮ

12:12 AM Jun 27, 2019 | Team Udayavani |

ಲಂಡನ್‌: ಈ ಕೂಟದ ನೆಚ್ಚಿನ ತಂಡವಾಗಿರುವ ಆತಿಥೇಯ ಇಂಗ್ಲೆಂಡ್‌ ನಿಧಾನವಾಗಿ ಜಾರತೊಡಗಿದೆ. ಆಸ್ಟ್ರೇಲಿಯ ವಿರುದ್ಧದ ಸೋಲು ಮಾರ್ಗನ್‌ ಬಳಗದ ಮಾರ್ಗವನ್ನು ದುರ್ಗಮಗೊಳಿಸುವ ಸೂಚನೆಯೊಂದನ್ನು ರವಾನಿಸಿದೆ.

Advertisement

ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಇಂಗ್ಲೆಂಡ್‌ ಸುಲಭದಲ್ಲಿ ಸೆಮಿಫೈನಲ್‌ ತಲುಪಲಿದೆ ಎಂಬು ದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಇಲ್ಲಿ ಬ್ಯಾಟಿಂಗ್‌ ಒಂದೇ ನಡೆಯದು ಎಂಬ ಪಾಠ ಇಂಗ್ಲೆಂಡಿಗೆ ಚೆನ್ನಾಗಿಯೇ ಅರ್ಥವಾಗಿದೆ. ಇದರ ಫ‌ಲವೇ 3 ಸೋಲು. ಲಂಕಾ ಹಾಗೂ ಆಸೀಸ್‌ ವಿರುದ್ಧ ಸತತ ಪಂದ್ಯಗಳಲ್ಲಿ ಆಘಾತ.
ಇಂಗ್ಲೆಂಡ್‌ 7 ಪಂದ್ಯಗಳಿಂದ 8 ಅಂಕ ಗಳಿಸಿ ಸದ್ಯ 4ನೇ ಸ್ಥಾನದಲ್ಲಿದೆ. ಮುಂದಿರುವುದು ಭಾರತ, ನ್ಯೂಜಿಲ್ಯಾಂಡ್‌ ತಂಡಗಳ ಕಠಿನ ಸವಾಲು. ಸೆಮಿಫೈನಲ್‌ ತಲುಪಬೇಕಾದರೆ ಇಂಗ್ಲೆಂಡ್‌ ಈ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲ, ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಗೆಲ್ಲಬಾರದು!

ಸೆಮಿಫೈನಲ್‌ ಲೆಕ್ಕಾಚಾರ ಜಟಿಲವಾಗುತ್ತಿದ್ದಂತೆ ವಿಶ್ವಕಪ್‌ ಕುತೂಹಲವೂ ತೀವ್ರಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next