Advertisement

ಏ.20ರೊಳಗಾಗಿ ವಿಶ್ವಕಪ್‌ ಕ್ರಿಕೆಟ್‌ಗೆ ಭಾರತ ತಂಡ ಪ್ರಕಟ

10:18 PM Apr 01, 2019 | Team Udayavani |

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೆ ಏ.20ರೊಳಗಾಗಿ ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ತಿಳಿಸಿದ್ದಾರೆ.

Advertisement

ವಿಶ್ವಕಪ್‌ಗೆ ಒಳ್ಳೆಯ ತಂಡವನ್ನು ರೂಪಿಸಲು ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ಎಲ್ಲ ಆಟಗಾರರು ನಿರಂತರವಾಗಿ ಗಮನಿಸುತ್ತಿದ್ದೇವೆ. ಒಂದೊಳ್ಳೆಯ ತಂಡವನ್ನು ವಿಶ್ವಕಪ್‌ಗೆ ಸಿದ್ಧಪಡಿಸುವ ಗುರಿ ನಮ್ಮ ಮುಂದೆ ಇದೆ. ಏ.20ರ ಒಳಗಾಗಿ ತಂಡವನ್ನು ಪ್ರಕಟಿಸಲಿದ್ದೇವೆ ಎಂದು ಎಂಎಸ್‌ಕೆ ಪ್ರಸಾದ್‌ ತಿಳಿಸಿದ್ದಾರೆ. ಮೇ30ರಿಂದ ವಿಶ್ವಕಪ್‌ ಆರಂಭವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next