Advertisement

ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ : ಆಸ್ಟ್ರೇಲಿಯ-ಪಾಕಿಸ್ಥಾನ ಸೆಮಿಫೈನಲ್‌ ಸೆಣಸಾಟ

12:42 AM Feb 08, 2024 | Team Udayavani |

ಬೆನೋನಿ: ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸೆಮಿಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ಬೆನೋನಿಯ “ವಿಲೋಮೂರ್‌
ಪಾರ್ಕ್‌’ ನಲ್ಲಿ ಸೆಣಸಲಿವೆ. “ಬೆನೋನಿ ಥ್ರಿಲ್ಲರ್‌’ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಮಣಿಸಿದ ಭಾರತದ ಎದುರಾಳಿ ಯಾರೆಂಬ ಕಾರಣಕ್ಕೆ ಈ ಪಂದ್ಯದ ಕುತೂಹಲ ತೀವ್ರಗೊಂಡಿದೆ.
ಭಾರತದಂತೆ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ಕೂಡ ಈ ಕೂಟದ ಅಜೇಯ ತಂಡಗಳೆಂಬುದನ್ನು ಮರೆಯು ವಂತಿಲ್ಲ. ಎರಡೂ ತಂಡ ಗಳು ಲೀಗ್‌ ಹಂತದ ಮೂರೂ ಪಂದ್ಯಗಳನ್ನು ಗೆದ್ದಿವೆ. ಸೂಪರ್‌ ಸಿಕ್ಸ್‌ ಗ್ರೂಪ್‌ ಒಂದರಲ್ಲೂ ಪಾಕಿಸ್ಥಾನ ಅಜೇಯವಾಗಿತ್ತು. ಆದರೆ ರನ್‌ರೇಟ್‌ನಲ್ಲಿ ಭಾರತಕ್ಕಿಂತ ಹಿಂದುಳಿದ ಕಾರಣ ದ್ವಿತೀಯ ಸ್ಥಾನಿಯಾಯಿತು.

Advertisement

ಪಾಕ್‌ ಬಲಿಷ್ಠ
ಸಾದ್‌ ಬೇಗ್‌ ನಾಯಕತ್ವದ ಪಾಕಿ ಸ್ಥಾನ ಲೀಗ್‌ ಹಂತದಲ್ಲಿ ಅಫ್ಘಾನಿಸ್ಥಾನ, ನೇಪಾಲ ಮತ್ತು ನ್ಯೂಜಿಲ್ಯಾಂಡ್‌ಗೆ ಸೋಲುಣಿಸಿತ್ತು. ಸೂಪರ್‌ ಸಿಕ್ಸ್‌ನಲ್ಲಿ ಐರ್ಲೆಂಡ್‌ ಹಾಗೂ ಬಾಂಗ್ಲಾದೇಶವನ್ನು ಮಣಿಸಿತು. ಇದರಲ್ಲಿ ಬಾಂಗ್ಲಾ ಎದುರಿನ ಮುಖಾಮುಖೀ ಅತ್ಯಂತ ರೋಚಕವಾಗಿತ್ತು. ಇದನ್ನು ಪಾಕ್‌ ಹುಡುಗರು ಕೇವಲ 5 ರನ್ನಿನಿಂದ ಜಯಿಸಿದ್ದರು.

ಸೀನಿಯರ್‌ ತಂಡದ ಕ್ರಿಕೆಟಿಗ ನಸೀಮ್‌ ಶಾ ಅವರ ಸಹೋದರ ನಾಗಿರುವ ಉಬೇದ್‌ ಶಾ ಪಾಕಿಸ್ಥಾನದ ಪ್ರಮುಖ ಬೌಲರ್‌. ಈಗಾಗಲೇ 17 ವಿಕೆಟ್‌ ಕೆಡವಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಶಾಜೇಬ್‌ ಖಾನ್‌ ಬ್ಯಾಟಿಂಗ್‌ ವಿಭಾಗದ ಬೆನ್ನೆಲು ಬಾಗಿದ್ದು, ಸರ್ವಾಧಿಕ 260 ರನ್‌ ಮಾಡಿದ್ದಾರೆ.

ಒಂದು ಪಂದ್ಯ ರದ್ದು
ಆಸ್ಟ್ರೇಲಿಯ ಕೂಡ ಸೋಲಿನ ಮುಖ ಕಂಡಿಲ್ಲ. ಲೀಗ್‌ನಲ್ಲಿ ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾವನ್ನು ಕೆಡವಿತ್ತು. ಆದರೆ ಕಿಂಬರ್ಲಿಯಲ್ಲಿ ನಡೆದ ವೆಸ್ಟ್‌ ಇಂಡೀಸ್‌ ಎದುರಿನ ಸೂಪರ್‌ ಸಿಕ್ಸ್‌ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇಂಗ್ಲೆಂಡ್‌ ಎದುರು ಡಿಎಲ್‌ಎಸ್‌ ನಿಯಮದಂತೆ ಗೆದ್ದು ಬಂದಿತ್ತು.
ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿ ಯಲ್ಲಿ ನಾಯಕ ಹ್ಯೂ ವೀಬೆjನ್‌ (252 ರನ್‌) ಮತ್ತು ಬೌಲಿಂಗ್‌ ವಿಭಾಗದಲ್ಲಿ ಕಾಲಂ ವಿಡ್ಲರ್‌ (11 ವಿಕೆಟ್‌) ಉತ್ತಮ ಸಾಧನೆಗೈದಿದ್ದಾರೆ.

ಮಾಜಿ ಚಾಂಪಿಯನ್ಸ್‌
ಎರಡೂ ತಂಡಗಳು ಮಾಜಿ ಚಾಂಪಿಯನ್‌ ಎಂಬುದನ್ನು ಮರೆಯು ವಂತಿಲ್ಲ. ಆಸ್ಟ್ರೇಲಿಯ ಈವರೆಗೆ 3 ಸಲ ಚಾಂಪಿಯನ್‌ ಆಗಿದೆ (1988, 2002 ಮತ್ತು 2010). ಪಾಕಿಸ್ಥಾನ 2 ಸಲ ಪ್ರಶಸ್ತಿ ಎತ್ತಿದೆ (2004, 2006). ಎರಡೂ ಪ್ರಬಲ ತಂಡಗಳಾದ ಕಾರಣ ಪೈಪೋಟಿ ತೀವ್ರಗೊಳ್ಳುವ ಎಲ್ಲ ಸಾಧ್ಯತೆ ಇದೆ.

Advertisement

ಆರಂಭ: ಅ. 1.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next