Advertisement

ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌: ಐಸಿಸಿ ಗಂಭೀರ ಪ್ರಯತ್ನ

10:14 PM Aug 10, 2021 | Team Udayavani |

ದುಬಾೖ: ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಪದಕ ಸ್ಪರ್ಧೆಯಾಗಿ ಕಾಣಿಸಿಕೊಳ್ಳಲಿದೆಯೇ? ಐಸಿಸಿಯ ಪ್ರಯತ್ನವನ್ನು ಗಮನಿಸಿದಾಗ ಇಂಥದೊಂದು ಸಾಧ್ಯತೆ ದಟ್ಟವಾಗಿದೆ.

Advertisement

ಒಲಿಂಪಿಕ್ಸ್‌ಗೆ ಕ್ರಿಕೆಟನ್ನೂ ಸೇರ್ಪಡೆಗೊಳಿಸಲು ಐಸಿಸಿಯ ಪ್ರಯತ್ನ ಹೆಚ್ಚು ಬಿರುಸು ಪಡೆದಿದೆ. ಇದು ಯಶಸ್ವಿಯಾದದ್ದೇ ಆದಲ್ಲಿ 128 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಪ್ರತ್ಯಕ್ಷವಾಗಲಿದೆ.

1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಹಾಗೂ ಏಕೈಕ ಸಲ ಕ್ರಿಕೆಟ್‌ ಸ್ಪರ್ಧೆ ನಡೆದಿತ್ತು. ಅಂದು ಪಾಲ್ಗೊಂಡ ದೇಶಗಳು ಕೇವಲ ಎರಡು. ಒಂದು ಗ್ರೇಟ್‌ ಬ್ರಿಟನ್‌, ಮತ್ತೂಂದು ಆತಿಥೇಯ ಫ್ರಾನ್ಸ್‌.

ಒಲಿಂಪಿಕ್ಸ್‌ಗೆ ರಹದಾರಿ:

2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ಕೂಡ ಪದಕ ಸ್ಪರ್ಧೆಯಾಗಿರುವುದು ಒಲಿಂಪಿಕ್ಸ್‌ಗೆ ರಹದಾರಿಯಾಗಲಿದೆ ಎಂಬ ನಂಬಿಕೆ ಐಸಿಸಿಯದ್ದು. ಇದರಿಂದ ಕ್ರೀಡೆ ಮತ್ತು ಕ್ರಿಕೆಟ್‌ ಎರಡಕ್ಕೂ ಲಾಭವಾಗಲಿದೆ ಎಂಬುದು ಐಸಿಸಿ ಅಧ್ಯಕ್ಷ ಗ್ರೆಗ್‌ ಬಾರ್ಕ್ಲೆ ಅಭಿಪ್ರಾಯ.

Advertisement

“ಕ್ರಿಕೆಟ್‌ ಸೇರ್ಪಡೆಗೆ ಸಂಬಂಧಿಸಿದಂತೆ ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನ ಸಾಗಲಿದೆ. ಕ್ರಿಕೆಟಿಗೆ ಜಗತ್ತಿನಾದ್ಯಂತ ಒಂದು ಬಿಲಿಯಮ್‌ಗಿಂತಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಇವರಲ್ಲಿ ಶೇ. 90ರಷ್ಟು ಮಂದಿ ಕ್ರಿಕೆಟ್‌ ಸ್ಪರ್ಧೆಯನ್ನು ಒಲಿಂಪಿಕ್ಸ್‌ನಲ್ಲಿ ಕಾಣಬಯಸುತ್ತಾರೆ’ ಎಂದು ಬಾರ್ಕ್ಲೆ ಹೇಳಿದರು.

ಐಸಿಸಿ ಒಲಿಂಪಿಕ್‌ ವರ್ಕಿಂಗ್‌ ಗ್ರೂಪ್‌ನ ಅಧ್ಯಕ್ಷರಾಗಿರುವ ಇಯಾನ್‌ ವಾಟ್‌ಮೋರ್‌, ಯುಎಸ್‌ಎ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಪರಾಗ್‌ ಮರಾಠೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಅಮೆರಿಕದಲ್ಲೂ ಈಗ ಕ್ರಿಕೆಟ್‌ ಕ್ರೇಜ್‌ ಹೆಚ್ಚುತ್ತಿದೆ. ಹೀಗಾಗಿ ಲಾಸ್‌ ಏಂಜಲೀಸ್‌ನಲ್ಲೇ ಕ್ರಿಕೆಟನ್ನು ಒಲಿಂಪಿಕ್ಸ್‌ ಕ್ರೀಡೆಯಾಗಿ ಮರು ಸೇರ್ಪಡೆಗೊಳಿಸುವುದು ಅತ್ಯಂತ ಪ್ರಶಸ್ತ’ ಎಂದಿದ್ದಾರೆ ಪರಾಗ್‌ ಮರಾಠೆ.

Advertisement

Udayavani is now on Telegram. Click here to join our channel and stay updated with the latest news.

Next