Advertisement

ಟೆಸ್ಟ್‌ ರ್‍ಯಾಂಕಿಂಗ್‌: ರಾಹುಲ್‌, ಸಿರಾಜ್‌ ಭರ್ಜರಿ ಪ್ರಗತಿ

09:44 PM Aug 18, 2021 | Team Udayavani |

ದುಬೈ: ಫೇಮಸ್‌ ಲಾರ್ಡ್ಸ್‌ ಟೆಸ್ಟ್‌ ವಿನ್‌’ ವೇಳೆ ಮಿಂಚಿದ ಆರಂಭಕಾರ ಕೆ.ಎಲ್‌. ರಾಹುಲ್‌ ಮತ್ತು ವೇಗಿ ಮೊಹಮ್ಮದ್‌ ಸಿರಾಜ್‌ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಪ್ರಗತಿ ಸಾಧಿಸಿದ್ದಾರೆ. ರಾಹುಲ್‌ 19, ಸಿರಾಜ್‌ 18 ಸ್ಥಾನ ಮೇಲೇರಿದ್ದಾರೆ.

Advertisement

ಬ್ಯಾಟಿಂಗ್‌ ವಿಭಾಗದಲ್ಲಿ ಶತಕವೀರ, ಪಂದ್ಯಶ್ರೇಷ್ಠ ಕೆ.ಎಲ್‌. ರಾಹುಲ್‌ ಅವರದು 19 ಸ್ಥಾನಗಳ ನೆಗೆತ. ಅವರೀಗ 37ನೇ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ 5ನೇ, ರೋಹಿತ್‌ ಶರ್ಮ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರಿಷಭ್‌ ಪಂತ್‌ 7ನೇ ಸ್ಥಾನಿಯಾಗಿದ್ದಾರೆ.

ಬೌಲಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಸಿರಾಜ್‌ 38ನೇ ಸ್ಥಾನಕ್ಕೆ ಬಂದಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಿರಾಜ್‌ ತಲಾ 4 ವಿಕೆಟ್‌ (126ಕ್ಕೆ 8) ಕಿತ್ತು ಭಾರತದ ಐತಿಹಾಸಿಕ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೇ ವೇಳೆ ಜಸ್‌ಪ್ರೀತ್‌ ಬುಮ್ರಾ ಒಂದು ಸ್ಥಾನ ಕೆಳಗಿಳಿದಿದ್ದಾರೆ (10). ನಾಟಿಂಗ್‌ಹ್ಯಾಮ್‌ನ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್‌ ಉಡಾಯಿಸಿದ್ದ ಬುಮ್ರಾ 19ರಿಂದ 9ನೇ ಸ್ಥಾನಕ್ಕೆ ಏರಿದ್ದರು.

ರವಿಚಂದ್ರನ್‌ ಅಶ್ವಿ‌ನ್‌ ನಂ.2:

ಮೊದಲೆರಡೂ ಟೆಸ್ಟ್‌ ಪಂದ್ಯಗಳಲ್ಲಿ ಅವಕಾಶ ಪಡೆಯದ ಆರ್‌.ಅಶ್ವಿ‌ನ್‌ 2ನೇ ಸ್ಥಾನದಲ್ಲಿ ಮುಂದುವರಿದಿದ್ದು, ಭಾರತದ ಅಗ್ರಮಾನ್ಯ ಬೌಲರ್‌ ಆಗಿದ್ದಾರೆ.

Advertisement

ಟೆಸ್ಟ್‌ ಆಲ್‌ರೌಂಡರ್‌ಗಳ ಯಾದಿಯಲ್ಲಿ ರವೀಂದ್ರ ಜಡೇಜ 3ನೇ, ಆರ್‌. ಅಶ್ವಿ‌ನ್‌ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಟಾಪ್‌-10 ಬ್ಯಾಟ್ಸ್‌ಮನ್‌ :

  1. ಕೇನ್‌ ವಿಲಿಯಮ್ಸನ್‌ 901
  2. ಜೋ ರೂಟ್‌ 893
  3. ಸ್ಟೀವನ್‌ ಸ್ಮಿತ್‌ 891
  4. ಮಾರ್ನಸ್‌ ಲಬುಶೇನ್‌ 878
  5. ವಿರಾಟ್‌ ಕೊಹ್ಲಿ 776
  6. ರೋಹಿತ್‌ ಶರ್ಮ 773
  7. ರಿಷಭ್‌ ಪಂತ್‌ 736
  8. ಬಾಬರ್‌ ಆಜಂ 725
  9. ಡೇವಿಡ್‌ ವಾರ್ನರ್‌ 724
  10. ಕ್ವಿಂಟನ್‌ ಡಿ ಕಾಕ್‌ 717

 ಟಾಪ್‌-10 ಬೌಲರ್ :

  1. ಪ್ಯಾಟ್‌ ಕಮಿನ್ಸ್‌ 908
  2. ಆರ್‌. ಅಶ್ವಿ‌ನ್‌ 848
  3. ಟಿಮ್‌ ಸೌಥಿ 824
  4. ಜೋಶ್‌ ಹ್ಯಾಝಲ್‌ವುಡ್‌ 816
  5. ನೀಲ್‌ ವ್ಯಾಗ್ನರ್‌ 810
  6. ಜೇಮ್ಸ್‌ ಆ್ಯಂಡರ್ಸನ್‌ 800
  7. ಕಾಗಿಸೊ ರಬಾಡ 798
  8. ಸ್ಟುವರ್ಟ್‌ ಬ್ರಾಡ್‌ 764
  9. ಜಾಸನ್‌ ಹೋಲ್ಡರ್‌ 756
  10. ಜಸ್‌ಪ್ರೀತ್‌ ಬುಮ್ರಾ 754
Advertisement

Udayavani is now on Telegram. Click here to join our channel and stay updated with the latest news.

Next