Advertisement
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ ಸಿಡ್ನಿ ಟೆಸ್ಟ್ ಹಾಗೂ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಕೇಪ್‌ಟೌನ್ ಟೆಸ್ಟ್ ಪಂದ್ಯದ ಬಳಿಕ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಗಿದೆ. ಇದರಂತೆ ವಿರಾಟ್ ಕೊಹ್ಲಿ 928 ಅಂಕ ಹೊಂದಿದ್ದರೆ, ಅನಂತರದ ಸ್ಥಾನದಲ್ಲಿರುವ ಸ್ಟೀವನ್ ಸ್ಮಿತ್ ಬಳಿ 911 ಅಂಕ ಇದೆ. ಆಸ್ಟ್ರೇಲಿಯದ ರನ್‌ಯಂತ್ರ ಮಾರ್ನಸ್ ಲಬುಶೇನ್ ಜೀವನಶ್ರೇಷ್ಠ 3ನೇ ಸ್ಥಾನಕ್ಕೆ ನೆಗೆದುದರಿಂದ ಉಳಿದ ಕೆಲವರು ಒಂದೊಂದು ಸಾªನ ಕೆಳಗಿಳಿಯಬೇಕಾಯಿತು. ಇದರಲ್ಲಿ ಪೂಜಾರ ಮತ್ತು ರಹಾನೆ ಕೂಡ ಸೇರಿದ್ದಾರೆ.
ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ (19), ಐಡನ್ ಮಾರ್ಕ್‌ರಮ್ (22) ಅವರ ರ್‍ಯಾಂಕಿಂಗ್‌ನಲ್ಲೂ ಸಣ್ಣ ಮಟ್ಟದ ಪ್ರಗತಿಯಾಗಿದೆ. ಕಮಿನ್ಸ್ ಟಾಪ್ ಬೌಲರ್
ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವವರು ನ್ಯೂಜಿಲ್ಯಾಂಡಿನ ನೀಲ್ ವ್ಯಾಗ್ನರ್. ಆದರೆ ಇಬ್ಬರ ನಡುವೆ 52 ಅಂಕಗಳ ವ್ಯತ್ಯಾಸವಿರುವುದು ಗಮನಾರ್ಹ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಟಾಪ್-10 ಯಾದಿಗೆ ಮರಳಿದ್ದಾರೆ. ಹರಿಣಗಳ ನಾಡಿನ ಅನ್ರಿಚ್ ನೋರ್ಜೆ 34 ಸ್ಥಾನ ನೆಗೆದಿರುವುದು ವಿಶೇಷ (62).
Related Articles
ಆಲ್‌ರೌಂಡರ್‌ಗಳ ಯಾದಿಯಲ್ಲಿ ಮೊದಲ 3 ಸ್ಥಾನದಲ್ಲಿರುವವರೆಂದರೆ ಜಾಸನ್ ಹೋಲ್ಡರ್ (473), ಜಡೇಜ (406) ಮತ್ತು ಬೆನ್ ಸ್ಟೋಕ್ಸ್ (396).
Advertisement