Advertisement

ಟಿ20 ರ್‍ಯಾಂಕಿಂಗ್‌: ಒಂದು ಸ್ಥಾನ ಕುಸಿದ ರಾಹುಲ್‌

05:37 PM Nov 17, 2021 | Team Udayavani |

ದುಬಾೖ: ಬುಧವಾರ ಬಿಡುಗಡೆಗೊಂಡ ನೂತನ ಐಸಿಸಿ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಆರಂಭಕಾರ ಕೆ.ಎಲ್‌. ರಾಹುಲ್‌ ಒಂದು ಸ್ಥಾನ ಕುಸಿತ ಕಂಡಿದ್ದಾರೆ.

Advertisement

ಸದ್ಯ ಟಿ20ಯಿಂದ ದೂರ ಉಳಿದಿರುವ ವಿರಾಟ್‌ ಕೊಹ್ಲಿ 8ನೇ ಸ್ಥಾನದಲ್ಲೇ ಉಳಿದಿದ್ದಾರೆ. ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ಅಗ್ರಸ್ಥಾನಲ್ಲಿ ಮುಂದುವರಿದಿದ್ದಾರೆ.

ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಂಡ ಪ್ರಮುಖ ಆಟಗಾರನೆಂದರೆ ಮಿಚೆಲ್‌ ಮಾರ್ಷ್‌. ಟಿ20 ವಿಶ್ವಕಪ್‌ ಫೈನಲ್‌ನ ಪಂದ್ಯಶ್ರೇಷ್ಠ ಆಟಗಾರನಾಗಿ ಮೂಡಿಬಂದ ಮಾರ್ಷ್‌ 6 ಸ್ಥಾನಗಳ ಜಿಗಿತದೊಂದಿಗೆ 13ನೇ ಸ್ಥಾನಕ್ಕೆ ಬಂದಿದ್ದಾರೆ. ಸರಣಿ ಶ್ರೇಷ್ಠ ಆಟಗಾರ ಡೇವಿಡ್‌ ವಾರ್ನರ್‌ ಅವರದು 8 ಸ್ಥಾನಗಳ ಪ್ರಗತಿ. ಈಗ ಅವರು 33ನೇ ಸ್ಥಾನದಲ್ಲಿದ್ದಾರೆ.ಡೇವನ್‌ ಕಾನ್ವೆ 3 ಸ್ಥಾನ ಮೇಲೇರಿ 4ಕ್ಕೆ ಬಂದರೆ, ಟಿ20 ವಿಶ್ವಕಪ್‌ ವಿಜೇತ ತಂಡದ ನಾಯಕ ಆರನ್‌ ಫಿಂಚ್‌ 3 ಸ್ಥಾನ ಕೆಳಗಿಳಿದಿದ್ದಾರೆ (ನಂ. 7).

ಇದನ್ನೂ ಓದಿ:ಗೋವಾ ಟ್ಯಾಕ್ಸಿ ಚಾಲಕರಿಗೆ 4 ವಿಶೇಷ ಯೋಜನೆ ಘೋಷಿಸಿದ ಕೇಜ್ರಿವಾಲ್

ಹಸರಂಗ ನಂ.1
ಬೌಲಿಂಗ್‌ ವಿಭಾಗದಲ್ಲಿ ಆ್ಯಡಂ ಝಂಪ (3) ಮತ್ತು ಜೋಶ್‌ ಹ್ಯಾಝಲ್‌ವುಡ್‌ 2 ಸ್ಥಾನ ಮೇಲೇರಿದ್ದಾರೆ (6). ವನಿಂದು ಹಸರಂಗ ನಂ.1 ಬೌಲರ್‌ ಆಗಿ ಮುಂದುವರಿದಿದ್ದಾರೆ. ಟಾಪ್‌-10 ಬೌಲಿಂಗ್‌ ಯಾದಿಯಲ್ಲಿ ಭಾರತದ ಯಾವುದೇ ಬೌಲರ್‌ಗಳಿಲ್ಲ.

Advertisement

ಟಿ20 ಆಲ್‌ರೌಂಡರ್‌ಗಳಲ್ಲಿ ಇಂಗ್ಲೆಂಡಿನ ಲಿಯಮ್‌ ಲಿವಿಂಗ್‌ಸ್ಟೋನ್‌ 7 ಸ್ಥಾನ ಮೇಲೇರಿದರೆ, ಮೊಯಿನ್‌ ಅಲಿ 3 ಸ್ಥಾನಗಳ ಪ್ರಗತಿ ಕಂಡರು. ಇವರಿಬ್ಬರು ಕ್ರಮವಾಗಿ 3ನೇ ಹಾಗೂ 8ನೇ ಸ್ಥಾನದಲ್ಲಿದ್ದಾರೆ.

ಟಾಪ್‌-10 ಬ್ಯಾಟ್ಸ್‌ಮನ್‌
1. ಬಾಬರ್‌ ಆಜಂ 839
2. ಡೇವಿಡ್‌ ಮಲಾನ್‌ 805
3. ಐಡನ್‌ ಮಾರ್ಕ್‌ರಮ್‌ 796
4. ಡೇವನ್‌ ಕಾನ್ವೆ 747
5. ಮೊಹಮ್ಮದ್‌ ರಿಜ್ವಾನ್‌ 742
6. ಕೆ.ಎಲ್‌. ರಾಹುಲ್‌ 727
7. ಆರನ್‌ ಫಿಂಚ್‌ 709
8. ವಿರಾಟ್‌ ಕೊಹ್ಲಿ 698
9. ಜಾಸ್‌ ಬಟ್ಲರ್‌ 674
10. ರಸ್ಸಿ ಡುಸೆನ್‌ 669

ಟಾಪ್‌-10 ಬೌಲರ್
1. ವನಿಂದು ಹಸರಂಗ 797
2. ತಬ್ರೇಜ್‌ ಶಮಿÕ 784
3. ಆ್ಯಂಡಂ ಝಂಪ 725
4. ಆದಿಲ್‌ ರಶೀದ್‌ 719
5. ರಶೀದ್‌ ಖಾನ್‌ 710
6. ಜೋಶ್‌ ಹ್ಯಾಝಲ್‌ವುಡ್‌ 705
7. ಮುಜೀಬ್‌ ಉರ್‌ ರೆಹಮಾನ್‌ 679
8. ಅನ್ರಿಚ್‌ ನೋರ್ಜೆ 655
9. ಟಿಮ್‌ ಸೌಥಿ 629
10. ಕ್ರಿಸ್‌ ಜೋರ್ಡನ್‌ 619

Advertisement

Udayavani is now on Telegram. Click here to join our channel and stay updated with the latest news.

Next