ದುಬೈ: ಶ್ರೀಲಂಕಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಭಾರತದ ತಂಡ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಟಿ ಟ್ವೆಂಟಿ ರಾಂಕಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದ್ದು, ಕೊಹ್ಲಿ ಧವನ್ ನೆಗೆತ ಕಂಡಿದ್ದಾರೆ.
ಲಂಕಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆ ಎಲ್ ರಾಹುಲ್ 26 ಅಂಕಗಳನ್ನು ಪಡೆದರಾದರೂ ಆರನೆ ಸ್ಥಾನದಲ್ಲಿಯೇ ಉಳಿದಿದ್ದಾರೆ. ಭಾರತದ ಮಟ್ಟಿಗೆ ಕೆ ಎಲ್ ರಾಹುಲ್ ಅಗ್ರ ಸ್ಥಾನಿಯಾಗಿದ್ದಾರೆ.
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಕೊಹ್ಲಿ 9ನೇ ಸ್ಥಾನದಲ್ಲಿದ್ದರೆ, ಉತ್ತಮ ಕಮ್ ಬ್ಯಾಕ್ ಮಾಡಿರುವ ಶಿಖರ್ ಧವನ್ 15ನೇ ಸ್ಥಾನಕ್ಕೆ ನೆಗೆದಿದ್ದಾರೆ. ಪಾಕಿಸ್ಥಾನದ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ತೃತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಲಂಕಾದ ಧನಂಜತ್ ಡಿ ಸಿಲ್ವ ಬರೋಬ್ಬರಿ 72 ಸ್ಥಾನಗಳನ್ನು ಮೇಲೇರಿ 115ನೇ ಸ್ಥಾನ ಪಡೆದಿದ್ದಾರೆ.
ಬೌಲರ್ ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ 39ನೇ ಸ್ಥಾನದಲ್ಲಿದ್ದು, ಶಾರ್ದೂಲ್ ಠಾಕೂರ್ 92ನೇ ಸ್ಥಾನಕ್ಕೇರಿದ್ದಾರೆ.