Advertisement

ಭಾರತ ಆತಿಥ್ಯದ 2023ರ ವಿಶ್ವಕಪ್‌ ಕ್ರಿಕೆಟ್‌ ಮುಂದೂಡಿಕೆ

09:39 PM Dec 17, 2020 | mahesh |

ದುಬಾೖ: ಭಾರತದ ಆತಿಥ್ಯದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಐಸಿಸಿ 6 ತಿಂಗಳು ಮುಂದೂಡಲು ನಿರ್ಧರಿಸಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಬೇಕಿದ್ದ ಈ ಕೂಟವೀಗ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ.

Advertisement

ಅರ್ಹತಾ ಸುತ್ತಿನ ಸಮಗ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಹಾಗೂ ಈ ಪಂದ್ಯಗಳ ವೇಳಾಪಟ್ಟಿಯನ್ನು ಸಮಗ್ರವಾಗಿ ಪುನರ್‌ ರಚಿಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಐಸಿಸಿ ಈ ನಿರ್ಧಾರಕ್ಕೆ ಬಂದಿದೆ.

ಆತಿಥೇಯ ಭಾರತ ಮತ್ತು ಐಸಿಸಿ ರ್‍ಯಾಂಕಿಂಗ್‌ನ ಅಗ್ರ 7 ತಂಡಗಳು ಈ ಕೂಟಕ್ಕೆ ನೇರ ಪ್ರವೇಶ ಪಡೆಯಲಿವೆ. ರ್‍ಯಾಂಕಿಂಗ್‌ ಯಾದಿಯ ಕೆಳ ಸ್ಥಾನದಲ್ಲಿರುವ 5 ತಂಡಗಳು, ಕ್ರಿಕೆಟ್‌ ವರ್ಲ್ಡ್ ಕಪ್‌ ಲೀಗ್‌ನ 3 ಅಗ್ರ ತಂಡಗಳು, ಕ್ರಿಕೆಟ್‌ ವರ್ಲ್ಡ್ ಕಪ್‌ ಚಾಲೆಂಜ್‌ ಲೀಗ್‌ನ 2 ಅಗ್ರ ತಂಡಗಳು 2022ರ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next