Advertisement

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

01:35 AM Jun 28, 2024 | Team Udayavani |

ಜಾರ್ಜ್‌ಟೌನ್‌ (ಗಯಾನ): ಮಳೆಯಿಂದಾಗಿ ವಿಳಂಬವಾದ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 68 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ಜೂನ್ 29 ರಂದು ಬಾರ್ಬಡೋಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

Advertisement

ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡವು ಮೊದಲು ಫೀಲ್ಡಿಂಗ್‌ ನಡೆಸಲು ನಿರ್ಧರಿಸಿತು. ನಾಯಕ ರೋಹಿತ್‌ ಶರ್ಮ ಮತ್ತು ಸೂರ್ಯ ಕುಮಾರ್‌ ಯಾದವ್‌ ಅವರ ಉಪಯುಕ್ತ ಬ್ಯಾಟಿಂಗ್‌ನಿಂದಾಗಿ 7 ವಿಕೆಟಿಗೆ 171 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 16.4 ಓವರ್ ಗಳಲ್ಲಿ 103 ರನ್ ಗಳಿಗೆ ಸರ್ವ ಪತನ ಕಂಡು ಸೋಲಿಗೆ ಶರಣಾಯಿತು.

ಭಾರತ ಬಿಗಿ ಬೌಲಿಂಗ್ ದಾಳಿ

23 ಜೋಸ್ ಬಟ್ಲರ್ ಅವರನ್ನು ಅಕ್ಷರ್ ಪಟೇಲ್ ಅವರು ಎಸೆದ ಮೊದಲ ಚೆಂಡಿನಲ್ಲೇ ಮೋಡಿ ಮಾಡಿ ವಿಕೆಟ್ ಕೀಪರ್ ಪಂತ್ ಕೈಗೆ ಕ್ಯಾಚಿತ್ತು ನಿರ್ಗಮಿಸುವಂತೆ ಮಾಡಿದರು. ಫಿಲಿಪ್ ಸಾಲ್ಟ್ 5 ರನ್ ಗಳಿಸಿ ಔಟಾದರು, ಬುಮ್ರಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಎರಡನೇ ಆಘಾತ ನೀಡಿದರು. ಮೊಯಿನ್ ಅಲಿ ಅವರು ಅಕ್ಷರ್ ಪಟೇಲ್ ಎಸೆದ ಎಸೆತದಲ್ಲಿ ಪಂತ್ ಅವರು ಸ್ಟಂಪ್ ಔಟ್ ಮಾಡಿದರು. ಅಲಿ 8 ರನ್ ಗಳಿಸಿದ್ದರು. ಆಬಳಿಕ ಆಂಗ್ಲರು ಭಾರತದ ಬಿಗಿ ದಾಳಿಗೆ ನಲುಗುತ್ತಾ ಹೋದರು. ಜಾನಿ ಬೈರ್ಸ್ಟೋವ್ ಅವರನ್ನು ಅಕ್ಷರ್ ಪಟೇಲ್ ಶೂನ್ಯಕ್ಕೆ ಪೆವಿಲಿಯನ್ ಗೆ ಕಳುಹಿಸಿದರು. 25 ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಅವರನ್ನು ಕುಲದೀಪ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು. ಸ್ಯಾಮ್ ಕರ್ರನ್ ಅವರನ್ನೂ ಕುಲದೀಪ್ ಯಾದವ್ ಅವರು ಎಲ್ಬಿಡಬ್ಲ್ಯೂ ಬಲೆಗೆ ಕಡವಿದರು. 11 ರನ್ ಗಳಿಸಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ರನ್ ಔಟ್ ಆದರು. ಜೋಫ್ರಾ ಆರ್ಚರ್ 21 ರನ್ ಗಳಿಸಿ ಔಟಾದರು.

ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಕಿತ್ತರೆ ವೇಗಿ ಬುಮ್ರಾ 2 ವಿಕೆಟ್ ಕಿತ್ತು ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.

Advertisement

ಭಾರೀ ಮಳೆಯಿಂದ ಪಿಚ್‌ ಮತ್ತು ಹೊರಮೈದಾನ ಒದ್ದೆಯಾಗಿದ್ದರಿಂದ ಒಂದೂವರೆ ಗಂಟೆ ತಡವಾಗಿ ಪಂದ್ಯ ಆರಂಭಗೊಂಡಿತ್ತು. 8 ಓವರ್‌ ಮುಗಿದಾಗ ಮತ್ತೆ ಭಾರೀ ಮಳೆ ಸುರಿದ ಕಾರಣ ಸ್ವಲ್ಪ ಹೊತ್ತು ಆಟ ಸ್ಥಗಿತಗೊಂಡಿತು. ಈ ವೇಳೆ ಭಾರತ ಎರಡು ವಿಕೆಟಿಗೆ 65 ರನ್‌ ಗಳಿಸಿತ್ತು.

ಆಬಳಿಕ ಆಟ ಮುಂದುವರಿದ ಬಳಿಕ ರೋಹಿತ್‌ ಮತ್ತು ಸೂರ್ಯಕುಮಾರ್‌ ಯಾದವ್‌ ತಮ್ಮ ಉತ್ತಮ ಬ್ಯಾಟಿಂಗ್‌ ಮುಂದುವರಿಸಿದ್ದು ತಂಡದ ಮೊತ್ತ 113 ರನ್‌ ತಲುಪಿದಾಗ ಬೇರ್ಪಟ್ಟರು. ಈ ಹಂತದಲ್ಲಿ 57 ರನ್‌ ಗಳಿಸಿದ ರೋಹಿತ್‌ ರಶೀದ್‌ಗೆ ವಿಕೆಟ್‌ ಒಪ್ಪಿಸಿದರು. 39 ಎಸೆತ ಎದುರಿಸಿದ ಅವರು ಆರು ಬೌಂಡರಿ ಮತ್ತು 2 ಸಿಕ್ಸರ್‌ ಹೊಡೆದರು.

ರೋಹಿತ್‌ ಶರ್ಮ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು ಮಾತ್ರವಲ್ಲದೇ ಆಗಾಗ್ಗೆ ವಿಕೆಟ್‌ ಉರುಳುತ್ತ ಹೋಯಿತು. ಅಂತಿಮವಾಗಿ ತಂಡ 7 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತ್ತು. ಸೂರ್ಯಕುಮಾರ್‌ 47 ರನ್‌ ಗಳಿಸಿದರೆ ಹಾರ್ದಿಕ್‌ ಪಾಂಡ್ಯ 23 ರನ್‌ ಹೊಡೆದರು. ರವೀಂದ್ರ ಜಡೇಜ 17 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಬಿಗು ದಾಳಿ ಸಂಘಟಿಸಿದ ಕ್ರಿಸ್‌ ಜೋರ್ಡಾನ್‌ ತನ್ನ 3 ಓವರ್‌ಗಳ ದಾಳಿಯಲ್ಲಿ 37 ರನ್‌ ನೀಡಿ ಮೂರು ವಿಕೆಟ್‌ ಕಿತ್ತರು. ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ ಮಹತ್ವದ ಈ ಪಂದ್ಯ ದಲ್ಲೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ ದರು.ಅವರು 9 ಎಸೆತ ಎದುರಿಸಿ ಒಂದು ಸಿಕ್ಸರ್‌ ನೆರವಿನಿಂದ 9 ರನ್‌ ಹೊಡೆದು ಔಟಾದರು. ರಿಷಭ್‌ ಪಂತ್‌ ಕೂಡ ಹೆಚ್ಚು ಹೊತ್ತು ನಿಲ್ಲಲು ಅಸಮರ್ಥರಾದರು.

ಭಾರೀ ಮಳೆ
ಭಾರೀ ಮಳೆ ಸುರಿದ ಕಾರಣ ಪಿಚ್‌ ಮತ್ತು ಹೊರಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ನಿಗದಿತ ಸಮಯದಲ್ಲಿ ಆರಂಭವಾಗಿಲ್ಲ. ಅಂಪಾಯರ್ ಪಿಚ್‌ ಪರಿಶೀಲಿಸಿದ ಬಳಿಕ ಒಂದೂವರೆ ತಾಸು ತಡವಾಗಿ ಪಂದ್ಯ ಆರಂಭಿಸಲು ನಿರ್ಧರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next