Advertisement
ಆಗಿದ್ದಿಷ್ಟೇ… ಬೌಲರ್ ಒಬ್ಬ ಓಡಿ ಬಂದು ಚೆಂಡು ಎಸೆಯುತ್ತಾನೆ. ಬ್ಯಾಟ್ಸ್‌ಮನ್ ಆ ಎಸೆತವನ್ನು ಬಾರಿಸುತ್ತಾನೆ. ಬ್ಯಾಟ್‌ಗೆ ತಾಗಿ ಸ್ವಲ್ಪ ಮುಂದೆ ಹೋದ ಚೆಂಡು ಜೋರಾದ ಗಾಳಿಯಿಂದ ಹಿಂದಕ್ಕೆ ಬರುತ್ತದೆ. ಬ್ಯಾಟ್ಸ್ ಮನ್ ಚೆಂಡನ್ನು ಬ್ಯಾಟ್‌ನಿಂದ ತಡೆಯಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಚೆಂಡು ಆತನ ಕಾಲಿನಡಿಯಿಂದ ನುಸುಳಿಕೊಂಡು ಸ್ಟಂಪ್‌ಗೆ ಬಡಿದಿದೆ. ಇದರಿಂದ ತಬ್ಬಿಬ್ಟಾದ ಬ್ಯಾಟ್ಸ್‌ಮನ್ ಸ್ವಲ್ಪ ವಾದ ಮಾಡಿದರೂ ಅನಂತರ ಔಟಾದುದನ್ನು ಒಪ್ಪಿಕೊಳ್ಳುತ್ತಾನೆ. ಗಾಳಿಯ ಕಾರಣ ಚೆಂಡು ಹಿಂದಕ್ಕೆ ಚಲಿಸಿದ್ದರಿಂದ ಈ ಔಟ್ ಸಿಂಧುವೋ, ಅಸಿಂಧುವೋ ಎಂಬ ಪ್ರಶ್ನೆ ಉದ್ಭವಿಸಿತ್ತು. ನಿಯಮಗಳ ಪ್ರಕಾರ ಇದು ಔಟ್ ಎಂದು ಐಸಿಸಿ ತೀರ್ಪು ನೀಡಿದೆ. Advertisement
ಪಾಕ್ ಹಳ್ಳಿ ಕ್ರಿಕೆಟಿನ ಔಟ್ ಗೊಂದಲಕ್ಕೆ ಐಸಿಸಿ ಪರಿಹಾರ!
06:00 AM May 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.