– 9 ವಿಕೆಟ್ ಅಂತರದಿಂದ ಭಾರತ ಜಯಭೇರಿ
– ರೋಹಿತ್ ಶರ್ಮ-ಕೊಹ್ಲಿ 178 ರನ್ನುಗಳ ಜತೆಯಾಟ
– ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ 11ನೇ ಶತಕ
– ಏಳು ವಿಕೆಟಿಗೆ 264 ರನ್ ಪೇರಿಸಿದ ಬಾಂಗ್ಲಾ ದೇಶ
Advertisement
ಬರ್ಮಿಂಗಂ: ರೋಹಿತ್ ಶರ್ಮ ಅವರ ಆಕರ್ಷಕ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಆಟದಿಂದಾಗಿ ಹಾಲಿ ಚಾಂಪಿಯನ್ ಭಾರತ ತಂಡವು ಗುರುವಾರ ನಡೆದ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಅಂತಿಮ ನಾಲ್ಕರ ಸುತ್ತಿಗೇರಿದ್ದ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಹಂತಕ್ಕೇರಿತು. ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಭಾರತವು ತನ್ನ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಪಾಕಿಸ್ಥಾನ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.
ಭರ್ಜರಿ ಆಟವಾಡಿದ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿ ಸಂಭ್ರಮಿಸಿದರೆ ಕೊಹ್ಲಿ 8 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. 129 ಎಸೆತ ಎದುರಿಸಿದ ರೋಹಿತ್ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 123 ರನ್ ಗಳಿಸಿ ಅಜೇಯರಾಗಿ ಉಳಿದರು. ರೋಹಿತ್‌ಗೆ ಸರಿಸಮಾನ ರೀತಿಯಲ್ಲಿ ಆಡಿದ ಕೊಹ್ಲಿ 78 ಎಸೆತ ಎದುರಿಸಿ 96 ರನ್ ಗಳಿಸಿದರು. ಕೇವಲ 4 ರನ್ನಿನಿಂದ ಶತಕ ವಂಚಿತರಾದರು. 13 ಬೌಂಡರಿ ಬಾರಿಸಿ ಮಿಂಚಿದ್ದರು. ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ನೀಡಲು ಬಾಂಗ್ಲಾ ಸಕಲ ಪ್ರಯತ್ನ ನಡೆಸಿತ್ತು. ಎಂಟು ಬೌಲರ್‌ಗಳೊಂದಿಗೆ ದಾಳಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
Related Articles
Advertisement
ಭುವನೇಶ್ವರ್ ಕುಮಾರ್ ಕಪ್ತಾನನ ನಿರ್ಧಾರವನ್ನು ಚೆನ್ನಾಗಿಯೇ ಸಮರ್ಥಿಸ ತೊಡಗಿದರು. ಮೊದಲ ಓವರಿನಲ್ಲೇ ಆರಂಭಕಾರ ಸೌಮ್ಯ ಸರ್ಕಾರ್ (0) ಅವರನ್ನು ಬೌಲ್ಡ್ ಮಾಡಿದರು; ಬಳಿಕ 7ನೇ ಓವರಿನಲ್ಲಿ ಶಬ್ಬೀರ್ ರೆಹಮಾನ್ (19) ಅವರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಆಗ ಬಾಂಗ್ಲಾ ಸ್ಕೋರ್ ಕೇವಲ 31 ರನ್. ಮೊದಲ 10 ಓವರ್‌ಗಳಲ್ಲಿ 46 ರನ್ ಬಂತು. ಇದು ಲೀಗ್ ಪಂದ್ಯಗಳಿಗೆ ಹೋಲಿಸಿದರೆ ಬಾಂಗ್ಲಾ ಗಳಿಸಿದ ಅತ್ಯಧಿಕ ಮೊತ್ತವೇ ಆಗಿತ್ತು. ಅಲ್ಲಿನ ಪಂದ್ಯಗಳ ಮೊದಲ 10 ಓವರ್‌ಗಳಲ್ಲಿ ಬಾಂಗ್ಲಾ ಗಳಿಕೆ ಕ್ರಮವಾಗಿ 36, 37 ಮತ್ತು 24 ರನ್ ಮಾತ್ರ. ತಮಿಮ್ – ರಹೀಂ ಅಮೋಘ ಆಟ
3ನೇ ವಿಕೆಟಿಗೆ ಜತೆಗೂಡಿದ ಆರಂಭಕಾರ ತಮಿಮ್ ಇಕ್ಬಾಲ್ ಮತ್ತು ಕೀಪರ್ ಮುಶ್ಫಿಕರ್ ರಹೀಂ ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಸಾಗಿದರು; ಬಾಂಗ್ಲಾ ಸರದಿಯನ್ನು ಬಹಳ ವೇಗವಾಗಿ ಬೆಳೆಸತೊಡಗಿದರು. ಇವರಿಂದ 21.1 ಓವರ್‌ಗಳಲ್ಲಿ 123 ರನ್ ಒಟ್ಟುಗೂಡಿತು. ಈ ಹಂತದಲ್ಲಿ ಭಾರತದ ಯಾವುದೇ ಬೌಲರ್‌ಗಳ ಮ್ಯಾಜಿಕ್ ನಡೆಯಲಿಲ್ಲ. ಬಾಂಗ್ಲಾ ಮೊತ್ತ ಮುನ್ನೂರರಾಚೆ ಬೆಳೆಯುವ ಎಲ್ಲ ಸೂಚನೆ ಲಭಿಸಿತು. ಕೊನೆಯ ಪ್ರಯತ್ನವೆಂಬಂತೆ ಕೊಹ್ಲಿ ಪಾರ್ಟ್‌ಟೈಮ್ ಬೌಲರ್ ಕೇದಾರ್ ಜಾಧವ್ ಕೈಗೆ ಚೆಂಡಿತ್ತರು. ಇದು ಫಲ ಕೊಟ್ಟಿತು. ಬೇರೂರಿ ನಿಂತಿದ್ದ ತಮಿಮ್ ಮತ್ತು ರಹೀಂ ಅವರನ್ನು ಜಾಧವ್ ಪೆವಿಲಿಯನ್ನಿಗೆ ಅಟ್ಟಿದರು. ಇವರಿಬ್ಬರ ನಡುವೆ ಅಪಾಯಕಾರಿ ಶಕಿಬ್ ಅಲ್ ಹಸನ್ (15) ವಿಕೆಟನ್ನು ಜಡೇಜ ಹಾರಿಸಿದರು. 2ಕ್ಕೆ 154 ರನ್ ಬಾರಿಸಿ ದೌಡಾಯಿಸುತ್ತಿದ್ದ ಬಾಂಗ್ಲಾ 5ಕ್ಕೆ 179 ಎಂಬ ಸ್ಥಿತಿಗೆ ಮುಟ್ಟಿತು. ಕೊನೆಯ 2 ವಿಕೆಟ್ ಬುಮ್ರಾ ಬುಟ್ಟಿಗೆ ಬಿತ್ತು. ಇದರಲ್ಲಿ ಮತ್ತೂಬ್ಬ ಡೇಂಜರಸ್ ಬ್ಯಾಟ್ಸ್‌ಮನ್ ಮಹಮದುಲ್ಲ (21) ಕೂಡ ಸೇರಿದ್ದರು. ಹೀಗಾಗಿ 3ನೇ ಪವರ್-ಪ್ಲೇ ಅವಧಿಯಲ್ಲಿ (41-50ನೇ ಓವರ್) ಬಾಂಗ್ಲಾಕ್ಕೆ ಪೇರಿಸಲು ಸಾಧ್ಯವಾದದ್ದು 62 ರನ್ ಮಾತ್ರ. ಇದರಲ್ಲಿ 30 ರನ್ ಮಾಜಿ ನಾಯಕ ಮೊರ್ತಜ ಅವರೊಬ್ಬರಿಂದಲೇ ಬಂದಿತ್ತು. ಭಾರತದ ಪರ ಜಾಧವ್ 22ಕ್ಕೆ 2, ಬುಮ್ರಾ 39ಕ್ಕೆ 2, ಭುವನೇಶ್ವರ್ 53ಕ್ಕೆ 2 ವಿಕೆಟ್ ಹಾರಿಸಿದರು.
ಸ್ಕೋರ್‌ಪಟ್ಟಿ
ಬಾಂಗ್ಲಾದೇಶ
ತಮಿಮ್ ಇಕ್ಬಾಲ್ ಬಿ ಜಾಧವ್ 70
ಸೌಮ್ಯ ಸರ್ಕಾರ್ ಬಿ ಭುವನೇಶ್ವರ್ 0
ಶಬ್ಬೀರ್ ರೆಹಮಾನ್ ಸಿ ಜಾಧವ್ ಬಿ ಭುವನೇಶ್ವರ್ 19
ಮುಷ್ಫಿಕರ್ ರಹೀಂ ಸಿ ಕೊಹ್ಲಿ ಬಿ ಜಾಧವ್ 61
ಶಕಿಬ್ ಅಲ್ ಹಸನ್ ಸಿ ಧೋನಿ ಬಿ ಜಡೇಜ 15
ಮಹಮದುಲ್ಲ ಬಿ ಬುಮ್ರಾ 21
ಮೊಸದೆಕ್ ಹೊಸೇನ್ ಸಿ ಮತ್ತು ಬಿ ಬುಮ್ರಾ 15
ಮಶ್ರಫೆ ಮೊರ್ತಜ ಔಟಾಗದೆ 30
ತಸ್ಕಿನ್ ಅಹ್ಮದ್ ಔಟಾಗದೆ 10 ಇತರ 23
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 264 ವಿಕೆಟ್ ಪತನ: 1-1, 2-31, 3-154, 4-177, 5-179, 6-218, 7-229. ಬೌಲಿಂಗ್:
ಭುವನೇಶ್ವರ್ ಕುಮಾರ್ 10-1-53-2
ಜಸ್‌ಪ್ರೀತ್ ಬುಮ್ರಾ 10-1-39-2
ಆರ್. ಅಶ್ವಿನ್ 10-0-54-0
ಹಾರ್ದಿಕ್ ಪಾಂಡ್ಯ 4-0-34-0
ರವೀಂದ್ರ ಜಡೇಜ 10-0-48-1
ಕೇದಾರ್ ಜಾಧವ್ 6-0-22-2 ಭಾರತ
ರೋಹಿತ್ ಶರ್ಮ ಔಟಾಗದೆ 123
ಶಿಖರ್ ಧವನ್ ಸಿ ಮೊಸಡೆಕ್ ಬಿ ಮೊರ್ತಜ 46
ವಿರಾಟ್ ಕೊಹ್ಲಿ ಔಟಾಗದೆ 96
ಇತರ: 0 ಒಟ್ಟು (40.1 ಓವರ್‌ಗಳಲ್ಲಿ 1 ವಿಕೆಟಿಗೆ) 265 ವಿಕೆಟ್ ಪತನ: 1-87 ಬೌಲಿಂಗ್:
ಮುಶ್ರಫೆ ಮೊರ್ತಜ 8-0-29-1
ಮುಸ್ತಾಫಿಜುರ್ ರೆಹಮಾನ್ 6-0-53-0
ತಸ್ಕಿನ್ ಅಹ್ಮದ್ 7-0-49-0
ರುಬೆಲ್ ಹೊಸೇನ್ 6-0-46-0
ಶಕಿಬ್ ಅಲ್ ಹಸನ್ 9-0-54-0
ಮೊಸಡೆಕ್ ಹೊಸೇನ್ 2-0-13-0
ಮಹಮುದುಲ್ಲ 1-0-10-0
ಶಬ್ಬೀರ್ ರೆಹಮಾನ್ 1.1-0-11-0 ಪಂದ್ಯಶ್ರೇಷ್ಠ: ರೋಹಿತ್ ಶರ್ಮ