ದುಬೈ: ಅಬುಧಾಬಿ ಟಿ 10 ಲೀಗ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳು ತೀರಾ ಕನಿಷ್ಠ ಮಟ್ಟವನ್ನು ತಲುಪಿರುವುದಕ್ಕೆ ಸಾಕ್ಷಿ ಎಂಬಂತೆ ಇಂಗ್ಲೆಂಡ್ ಮೂಲದ ಕ್ಲಬ್ ಕ್ರಿಕೆಟಿಗ ರಿಜ್ವಾನ್ ಜಾವೇದ್ ಅವರು 17. 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ.
ಆಟಗಾರರಿಗಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಭ್ರಷ್ಟಾಚಾರ-ವಿರೋಧಿ ಕೋಡ್ ಅನ್ನು ಹಲವಾರು ಬಾರಿ ಉಲ್ಲಂಘಿಸಿದ್ದಕ್ಕಾಗಿ ನಿಷೇಧ ಹೇರಲಾಗಿದೆ.
ಟೂರ್ನಮೆಂಟ್‌ನ 2021 ಆವೃತ್ತಿಯಲ್ಲಿ ನಡೆದ ಭ್ರಷ್ಟಾಚಾರಕ್ಕಾಗಿ 2023 ಸೆಪ್ಟೆಂಬರ್ ನಲ್ಲಿ ಆರೋಪ ಹೊರಿಸಲಾದ ಎಂಟು ಆಟಗಾರರು ಮತ್ತು ಅಧಿಕಾರಿಗಳ ಪೈಕಿ ಜಾವೇದ್ ಒಬ್ಬರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ, ಬಾಂಗ್ಲಾದೇಶ ಕ್ರಿಕೆಟಿಗ ನಾಸಿರ್ ಹೊಸೈನ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪ ಹೊತ್ತ ನಂತರ ಐಸಿಸಿ ಎರಡು ವರ್ಷಗಳ ಕಾಲ ಎಲ್ಲಾ ಕ್ರಿಕೆಟ್ ಆಡದಂತೆ ನಿಷೇಧಿಸಿತ್ತು.
ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಲು ಜಾವೇದ್ ರ ನಿರಂತರ ನಿರಾಸಕ್ತಿ, ಆರೋಪದ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರುವ ಕಾರಣ ನಿಷ್ಕ್ರಿಯತೆಯು ಸಮಿತಿಯ ಅಧ್ಯಕ್ಷ ಮೈಕೆಲ್ ಜೆ ಬೆಲೋಫ್ ಕೆಸಿ ಅವರು ತೆಗೆದುಕೊಂಡ ಈ ನಿರ್ಧಾರವನ್ನು ಸಮಿತಿಗೆ ಬಂದಿದೆ.
2023 ರ ಸೆಪ್ಟೆಂಬರ್ 19 ರಂದು ಜಾವೇದ್ ಅವರ ವಿರುದ್ಧ ಮೊದಲ ಬಾರಿಗೆ ಆರೋಪ ಹೊರಿಸಿದಾಗ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.