ಯುಪಿಎಸ್‌ಸಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದ್ದು, ಒಂದೇ ಬಾರಿಗೆ 34 ಕನ್ನಡಿಗ ಅಧಿಕಾರಿಗಳು ಐಎಎಸ್ ಶ್ರೇಣಿಗೆ
ಬಡ್ತಿ ಹೊಂದಲಿದ್ದಾರೆ.
Advertisement
ಡಾ. ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ಕಾರ್ಯದರ್ಶಿ ಎಚ್. ಬಸವರಾಜೇಂದ್ರ, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಆಪ್ತ ಕಾರ್ಯದರ್ಶಿ ಡಾ. ಗೋಪಾಲ ಹೆಚ್. ಎನ್. ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ ಎನ್. ಸಚಿವ ತನ್ವಿರ್ ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್ ಎಂ.ಆರ್. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಆಪ್ತ ಕಾರ್ಯದರ್ಶಿ ವೈ.ಎಸ್. ಪಾಟೀಲ್ ಐಎಎಸ್ ಗೆ ಬಡ್ತಿ ಪಡೆದ ಪ್ರಮುಖ ಅಧಿಕಾರಿಗಳು.
ಭಾರತದ ಐಎಎಸ್ ಅಧಿಕಾರಿಗಳ ಲಾಬಿಯಿಂದಾಗಿ ಕನ್ನಡಿಗ ಅಧಿಕಾರಿಗಳು ಐಎಎಸ್‌ಗೆ ಬಡ್ತಿ ಪಡೆಯಲು ನಿರಂತರ
ಹೋರಾಟ ನಡೆಸಬೇಕಾಯಿತು. ಅವರ ಹೋರಾಟದ ಫಲವಾಗಿ ನಾಲ್ಕು ವರ್ಷಗಳ ನಂತರ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ಎನ್ನುವಂತೆ 34 ಜನ ಹಿರಿಯ ಕೆಎಎಸ್ ಅಧಿಕಾರಿಗಳು ಐಎಎಸ್ ಶ್ರೇಣಿಗೇರುವಂತಾಗಿದೆ.
Related Articles
ಬಿಡಿಎ ಅಧಿಕಾರಿಯಾಗಿದ್ದ ರಾಜಮ್ಮ ಎ. ಚೌಡರೆಡ್ಡಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿರುವುದರಿಂದ ಅವರಿಗೆ ದೊರೆಯಬೇಕಿದ್ದ ಬಡ್ತಿಯನ್ನು ತಡೆ ಹಿಡಿಯಲಾಗಿದೆ. ಕ್ಯಾಪ್ಟನ್ ಡಾ. ರಾಜೇಂದ್ರ ಅವರಿಗೆ ಕೋರ್ಟ್ ಆದೇಶದ ಮೂಲಕವೇ ಐಎಎಸ್ ಬಡ್ತಿ ನೀಡಲಾಗಿತ್ತು. ಉಳಿದ ಅಧಿಕಾರಿಗಳ ಬಡ್ತಿಗೆ ಇನ್ನೂ ಅರ್ಹತೆ ಪಡೆದಿಲ್ಲ ಎನ್ನಲಾಗಿದೆ.
Advertisement
ಕುರುಬರೇ ಇಲ್ವಲ್ಲಾ ?ಹಿರಿಯ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಐಎಎಸ್ ಶ್ರೇಣಿಗೆ ಬಡ್ತಿ ನೀಡಲು ಶಿಫಾರಸು ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಪಟ್ಟಿಯನ್ನು ತೋರಿಸಲಾಗಿತ್ತು. ಆ ಪಟ್ಟಿ ನೋಡಿ ಇದರಲ್ಲಿ ಕುರುಬರು ಎಷ್ಟಿದ್ದಾರೆ ಎಂದು ಹಾಸ್ಯದ ಧಾಟಿಯಲ್ಲಿ ವಿವರ ಕೇಳಿ, ಕುರುಬ ಅಧಿಕಾರಿಗಳೇ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದರಂತೆ. ಮುಖ್ಯಮಂತ್ರಿಗಳ ತಮಾಶೆಯ
ಮಾತನ್ನು ಸರಿಯಾಗಿ ಗ್ರಹಿಸದ ಅಧಿಕಾರಿಗಳು, ಸೇವಾ ಹಿರಿತನದ ಮೇಲೆ ಐಎಎಸ್ ಶ್ರೇಣಿಗೆ ಬಡ್ತಿ ಸಿಗುತ್ತದೆ. ಹೀಗಾಗಿ ಹಿರಿತನದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದರಂತೆ ಎಂದು ಮೂಲಗಳು ತಿಳಿಸಿವೆ.