Advertisement
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ 204ನೇ ರ್‍ಯಾಂಕ್ ಪಡೆದವರು ಸಿರಿವೆನ್ನಲ. 2017ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು 560ನೇ ರ್‍ಯಾಂಕ್ ಪಡೆದಿದ್ದರು ಎಂಬುದು ಗಮನಾರ್ಹ. ಪ್ರಸ್ತುತ, ಇಂಡಿಯನ್ ಡಿಫೆನ್ಸ್ ಅಕೌಂಟ್ಸ್‌ನಲ್ಲಿ ಅಧಿಕಾರಿಯಾಗಿರುವ ಸಿರಿವೆನ್ನಲ, ಹಿರಿಯ ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ಮಗ. ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುವವರು ಮಾಡಿಕೊಳ್ಳ ಬೇಕಾದ ಸಿದ್ಧತೆಗಳೇನು? ವಹಿಸಬೇಕಾದ ಎಚ್ಚರಿಕೆಗಳೇನು? ದಿನಕ್ಕೆ ಎಷ್ಟು ಗಂಟೆಗಳ ಕಾಲ ಓದಬೇಕು? ಹೇಗೆ, ಯಾವ್ಯಾವ ವಿಷಯಗಳನ್ನು ಓದಬೇಕು? ಟ್ಯೂಶನ್‌ಗೆ ಹೋಗಲೇಬೇಕಾ? ಯುಪಿಎಸ್ಸಿಗೆ ಓದುವವರು ಪುಸ್ತಕದ ಹುಳುಗಳಾಗಿಯೇ ಇರಬೇಕಾ?- ಇಂಥ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳನ್ನು ಅವರ ಮಾತುಗಳಲ್ಲೇ ಕೇಳಿ.
ನಾವು ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿಯಲ್ಲಿ ಓದುವ ಕ್ರಮಕ್ಕಿಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಕ್ರಮ ಮತ್ತು ವಿಧಾನಗಳು ಬೇರೆಯದಾಗಿಯೇ ಇರುತ್ತವೆ ಮತ್ತು ಇರಬೇಕು ಕೂಡಾ. ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿಗಳಲ್ಲಿ ರ್‍ಯಾಂಕ್ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣದೆ ಹೋಗಬಹುದು. ಅಂತೆಯೇ ಡಿಗ್ರಿ ತರಗತಿಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಾಗಿ ದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವುದು ಅಪರೂಪವೇನಲ್ಲ. ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಷಯಗಳ ವ್ಯಾಪ್ತಿ ತುಂಬಾ ವಿಸ್ತಾರವಾಗಿರುತ್ತದೆ. ಪ್ರಬಂಧ, ಸಾಮಾನ್ಯ ಜ್ಞಾನ ವಿಷಯಗಳಂತೂ ತುಂಬಾ ವ್ಯಾಪ್ತಿಯನ್ನು ಪಡೆದು ಕೊಂಡಿವೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ಓದಿ ಯಶಸ್ಸು ಗಳಿಸಬಹುದೆಂಬ ನಿರೀಕ್ಷೆಯನ್ನು ಯುಪಿಎಸ್ಸಿ ಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಯುಪಿಎಸ್ಸಿ ಪರೀಕ್ಷೆ ತಯಾರಿಕೆಗೆ ಇಂದಿನ ತಂತ್ರಜ್ಞಾನದ ನೆರವು ಅಪಾರವಾಗಿದೆ. ಯಾವುದೇ ವಿಷಯದ ಬಗ್ಗೆ ವಿವರಗಳು ಬೇಕೆಂದರೂ ಗೂಗಲ್‌ನಲ್ಲಿ ಅಪಾರವಾದ ಮಾಹಿತಿಗಳು ಲಭ್ಯವಿವೆ. Google, inline tyari, Clear IAS, Unacademy ಮುಂತಾದ ವೆಬ್‌ಸೈ ಟ್‌ಗಳು ಇವೆ. ನಾನು ಹೆಚ್ಚು ಅವಲಂಬಿಸಿದ್ದು ಪ್ರಸ್ ಇನ್ಫರ್ಮೇಶನ್ ಬ್ಯೂರೋ ಮತ್ತು ಗೂಗಲ್ ವೆಬ್‌ಸೈ ಟ್‌ಗಳನ್ನು. ಪತ್ರಿಕೆಗಳನ್ನು ನಿರಂತರವಾಗಿ ಓದುವುದು ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಲು ಹೆಚ್ಚು ಸಹಾಯಕವಾಗುತ್ತದೆ.
Advertisement
ಅಪಾರ ಓದು ಮುಖ್ಯಇನ್ನು ಯುಪಿಎಸ್ಸಿಗೆ ತಯಾರಾಗಲು ಇಂಥದ್ದೇ ವಿಷಯ ದಲ್ಲಿ ಪದವಿ ಓದಿರಬೇಕು, ಇದರಿಂದ ಸುಲಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ, ಕಲೆ, ವಾಣಿಜ್ಯ, ವಿಜ್ಞಾನ ವಿಷಯಗಳಲ್ಲಿ ಆಯಾ ಅಭ್ಯರ್ಥಿಗಳಿಗೆ ಯಾವ ವಿಷಯ ಸುಲಭ ವಾಗಿ ಕಾಣುತ್ತವೋ ಅವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುತ್ತಿರುವುದನ್ನು ಕಾಣಬಹುದು. ವಿಜ್ಞಾನ ವಿದ್ಯಾರ್ಥಿಗಳು ಇತಿಹಾಸ, ಸಮಾಜ ಶಾಸ್ತ್ರ, ರಾಜ್ಯ ಶಾಸ್ತ್ರ, ಐಚ್ಛಿಕ ಕನ್ನಡ ಇತ್ಯಾದಿ ವಿಜ್ಞಾನೇತರ ವಿಷಯಗಳನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ನಾನು ಡಿಗ್ರಿಯಲ್ಲಿ ಓದಿದ್ದ zoology ವಿಷಯವನ್ನೇ ಆರಿಸಿಕೊಂಡಿದ್ದೆ. ಐಚ್ಛಿಕ ವಿಷಯಗಳು ಎರಡೇ ಪತ್ರಿಕೆ ( paper) ಇರುವುದು. ಮಿಕ್ಕಂತೆ ಪ್ರಬಂಧ ಮತ್ತು ಸಾಮಾನ್ಯ ವಿಷಯಗಳದ್ದು ಅಷ್ಟೇ ಪ್ರಾಮುಖ್ಯತೆ ಇರುತ್ತದೆ. ಅರ್ಥಶಾಸ್ತ್ರ, ನೀತಿಶಾಸ್ತ್ರ, ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳು, ಅಂತಾರಾಷ್ಟ್ರೀಯ ವಿಷಯ ಮತ್ತು ವಿದ್ಯಮಾನಗಳು, ಎಥಿಕ್ಸ್ ಮುಂತಾದ ವಿಷಯಗಳ ಅಗಾಧತೆಯನ್ನು ಅರಿಯುವುದು ನಮ್ಮ ಓದಿನ ಅಪಾರವಾದ ವ್ಯಾಪ್ತಿಯನ್ನು ಬಯಸುತ್ತದೆ. ವೀಡಿಯೋ ಗೇಮ್ ಆಡುತ್ತಿದ್ದೆ!
ನಾನು ದಿನಕ್ಕೆ 7ರಿಂದ 8 ಗಂಟೆಗಳ ಕಾಲ ಓದುತ್ತಿದ್ದೆ. ಮಿಕ್ಕಂತೆ ಒಂದರ್ಧ ಗಂಟೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದೆ. ಒಂದು ಗಂಟೆ ವೀಡಿಯೋ ಗೇಮ್ ಆಡುತ್ತಿದ್ದೆ. ಐಪಿಎಲ್, ಇನ್ನಿತರ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿದ್ದೆ. ಬೆಳಿಗ್ಗೆ ತಪ್ಪದೆ ಅರ್ಧ ಗಂಟೆ ವ್ಯಾಯ ಮವನ್ನೂ ಮಾಡುತ್ತಿದ್ದೆ. ಅಂದರೆ ನಾನೇನೂ ತ್ಯಾಗ ಮಾಡಿದವನಲ್ಲ. ಅಮ್ಮ ಹೊತ್ತೂತ್ತಿಗೆ ಸರಿಯಾಗಿ ಊಟ-ತಿಂಡಿ ನೋಡಿಕೊಳ್ಳುತ್ತಿ ದ್ದಳು. Healthy mind in a healthy body and also healthy body in a healthy mind ಎಂಬುದರಲ್ಲಿ ನನ್ನ ನಂಬಿಕೆ. ಆದರೆ ಎಲ್ಲ ಮನುಷ್ಯರಲ್ಲೂ ಒಂದೇ ರೀತಿಯ ಭಾವನೆ ಇರ ಬೇಕೆಂದಿಲ್ಲ. ಸ್ವಭಾವತಃ ಎಲ್ಲ ವ್ಯಕ್ತಿಗಳೂ ಭಿನ್ನವಾಗಿರುತ್ತಾರಲ್ಲ. ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ ಪರೀಕ್ಷೆ ಬರೆವಾಗ ಗೊಂದಲ ಬೇಡ
ಯುಪಿಎಸ್ಸಿ ಸಿಲಬಸ್‌ನಲ್ಲಿ ವಿಷಯಗಳ ವ್ಯಾಪ್ತಿ ತುಂಬಾ ವಿಸ್ತಾರವಾಗಿರುತ್ತದೆ. ಆದ್ದರಿಂದ ಪ್ರಶ್ನೆಗಳಿಗೆ ಒಂದು ಸ್ಪಷ್ಟ ಉತ್ತರ ಬರೆಯಬೇಕಾದಾಗ ಗೊಂದಲವುಂಟಾಗುವುದು ಸಹಜ. ಸಮಯದ ಮಿತಿಯೂ ಇರುವುದರಿಂದ ಉತ್ತರಗಳ ಬಗ್ಗೆ ಹೆಚ್ಚು ತರ್ಕ ಮಾಡಲು ಬರುವುದಿಲ್ಲ. ಹಾಗಾಗಿಯೇ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಹೆಚ್ಚು ಸ್ಕೋರ್ ಮಾಡಲು ಆಗುವುದಿಲ್ಲ. ಪ್ರಶ್ನೆಗಳು. ಕೋಚಿಂಗ್ ಮುಖ್ಯ
ಯುಪಿಎಸ್ಸಿ ಬರೆಯುವವರಿಗೆ ತರಬೇತಿ ನೀಡಲು ಇಂದು ಅನೇಕ ಟ್ಯುಟೋರಿಯಲ್‌ಗಳು ಇವೆ. ಅದೊಂದು ದೊಡ್ಡ ವ್ಯಾಪಾರವೇ ಆಗಿದೆಯೆಂದು ಹೇಳಬಹುದು. ಅಭ್ಯರ್ಥಿಯೊಬ್ಬ ಮೊದಲ ಬಾರಿಗೆ ಟ್ಯುಟೋರಿಯಲ್‌ಗೆ ಹೋಗುವುದು ಸೂಕ್ತವಾ ದದ್ದೆ. ಸಿಲಿಬಸ್ ಬಗ್ಗೆ, ಓದುವ ಕ್ರಮದ ಬಗ್ಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳವೇ ಅನುಕೂಲವಾಗುತ್ತದೆ. ಆದರೆ ಪ್ರತಿಸಾರಿಯೂ ಟ್ಯೂಶನ್‌ಗೆ ಹೋಗಲು ಸಾಧ್ಯವಾಗು ವುದಿಲ್ಲ. ಏಕೆಂದರೆ ಸಿಲಿಬಸ್ ಕವರ್ ಮಾಡುವುದು ಕಷ್ಟವಾಗು ತ್ತದೆ. ನಾನು ಮೊದಲು ಆರು ತಿಂಗಳ ಕಾಲ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿರುವ ಯೂನಿವರ್ಸಲ್ ಕೋಚಿಂಗ್ ಸೆಂಟರ್‌ಗೆ ಹೋದೆ. ಆ ಅನಂತರ ಮನೆಯಲ್ಲೇ ತಯಾರಿ ನಡೆಸಿದೆ. ಹತಾಶೆ ಬೇಡ
ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಐಎಎಸ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸಾವಿರ ಹುದ್ದೆಗಳಿದ್ದರೆ, ಸಾವಿರ ರ್‍ಯಾಂಕ್‌ಗಳಿರುತ್ತವೆ. ಅಷ್ಟು ರ್‍ಯಾಂಕ್ ಗಳಿಗೆ ಅಪ್ಲಿಕೇಶನ್ ಹಾಕುವವರ ಸಂಖ್ಯೆಯೇ ಹತ್ತು ಲಕ್ಷದಷ್ಟಿರುತ್ತದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೊಂಬತ್ತು ಪರ್ಸೆಂಟ್ ಫಿಲ್ಟರ್ ಆಗ್ತಾರೆ. ಮೈನ್ಸ್ ಪರೀಕ್ಷೆಗೆ ಹತ್ತೆನ್ನೆರಡು ಸಾವಿರ ಅಭ್ಯರ್ಥಿಗಳು ಅರ್ಹತೆ ಪಡೆದು ಇಂಟರ್ವ್ಯೂ ವೇಳೆಗೆ ಆ ಸಂಖ್ಯೆ ಎರಡೂವರೆಯಿಂದ ಮೂರು ಸಾವಿರಕ್ಕಿಳಿಯುತ್ತದೆ. ಪರೀಕ್ಷೆಯಲ್ಲಿ ಯಶಸ್ಸು ಕಾಣದಿದ್ದರೆ ನಿರಾಸೆ ಯಾಗುವುದಂತೂ ಸಹಜ. ಆದರೆ ಅದೇ ಹತಾಶೆಗೆ ಕಾರಣ ವಾಗಬಾರದು. ಪ್ರಯತ್ನ ಮಾಡುವುದು ಧರ್ಮ. ಯಾವ ಯಾವುದೋ ಕಾರಣಗಳಿಂದಾಗಿ ಯಶಸ್ಸು ಸಿಗದಿದ್ದರೆ ಬದುಕಿ ಗಾಗಿ ಅದಕ್ಕಿಂತಲೂ ಉತ್ತಮ ಮಾರ್ಗಗಳು ತೆರೆದುಕೊಂಡಿ ರುತ್ತವೆ. ಪರೀಕ್ಷೆಗೆ ಇಳಿಯುವ ಮೊದಲೇ ಅಭ್ಯರ್ಥಿಗಳು ಆ ಮನೋಧರ್ಮವನ್ನು ಇಟ್ಟುಕೊಂಡಿರಬೇಕು. ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸು ಮಾಡು ವುದು ಭಿನ್ನವಾದ ಪ್ರಕ್ರಿಯೆ. ಪ್ರತಿಭೆ, ಓದುವ ವಿಧಾನ ಮತ್ತು ತಾವು ಓದಿದ್ದು ಪರೀಕ್ಷೆಯಲ್ಲಿ ಬರುವ ಅದೃಷ್ಟ ಈ ಎಲ್ಲ ಅಂಶಗಳೂ ಗಣನೆಗೆ ಬರುತ್ತವೆ. ಇಲ್ಲಿ ಎಲ್ಲರೂ ಮೊದಲ ಪ್ರಯತ್ನದಲ್ಲಿ ಪಾಸು ಮಾಡಲೆಂದೇ ಸ್ಪರ್ಧೆಗೆ ಇಳಿಯುವುದು. ಆದರೆ ಫಲಿತಾಂಶ ಮಾತ್ರ ಭಿನ್ನವಾಗಿರುತ್ತದೆ.