Advertisement

ಲೆಜೆಂಡ್ರಿ ಆಲ್‌ರೌಂಡರ್‌ ಬೋಥಂಗೆ ಬ್ರಿಟಿಷ್‌ ಪಾರ್ಲಿಮೆಂಟ್‌ ಗೌರವ

09:29 PM Aug 01, 2020 | sudhir |

ಲಂಡನ್: ಲೆಜೆಂಡ್ರಿ ಆಲ್‌ರೌಂಡರ್‌ ಇಯಾಮ್‌ ಬೋಥಂ ಅವರಿಗೆ ಬ್ರಿಟಿಷ್‌ ಪಾರ್ಲಿಮೆಂಟ್‌ನ “ಹೌಸ್‌ ಆಫ್ ಲಾರ್ಡ್ಸ್‌’ ಸದಸ್ಯತ್ವ ನೀಡಿ ಗೌರವಿಸಲಾಗಿದೆ.

Advertisement

64 ವರ್ಷದ, ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕನೂ ಆಗಿರುವ ಇಯಾನ್‌ ಬೋಥಂ ಬ್ರಿಟಿಷ್‌ ಪಾರ್ಲಿಮೆಂಟ್‌ಗೆ ಆಯ್ಕೆಯಾದ 36 ನೂತನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇಂಗ್ಲೆಂಡ್‌ ಪರ 102 ಟೆಸ್ಟ್‌ ಪಂದ್ಯಗಳನ್ನಾಡಿರುವ ಬೋಥಂ, ನಿವೃತ್ತಿ ಬಳಿಕ ಸಹಾಯಾರ್ಥ ಅಭಿಯಾನಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಬೋಥಂ 2011ರ ಬಳಿಕ ಈ ಗೌರವ ಪಡೆದ ಮೊದಲ ಕ್ರಿಕೆಟಿಗ. ಅಂದು ವನಿತಾ ತಂಡದ ನಾಯಕಿ ರಶೆಲ್‌ ಹೇಯೊ ಫ್ಲಿಂಟ್‌ ಈ ಗೌರವಕ್ಕೆ ಪಾತ್ರರಾಗಿದ್ದರು. ಹೌಸ್‌ ಆಫ್ ಲಾರ್ಡ್ಸ್‌ಗೆ ಆಯ್ಕೆಯಾಗಿದ್ದ ಇತರ ಕ್ರಿಕೆಟಿಗರೆಂದರೆ ಕಾಲಿನ್‌ ಕೌಡ್ರಿ, ಲಿಯರಿ ಕಾನ್‌ಸ್ಟಂಟೈನ್‌ ಮತ್ತು ಡೇವಿಡ್‌ ಶೆಫ‌ರ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next