Advertisement

ವಾಯುಪಡೆಯ ಮತ್ತೊಂದು ವಿಮಾನ ಅವಘಡ ; ಪೈಲಟ್‌ಗಳಿಬ್ಬರು ಪಾರು 

11:04 AM Oct 05, 2018 | |

ಬಾಗ್‌ಪತ್‌: ಭಾರತೀಯ ವಾಯುಪಡೆಗೆ ಸೇರಿದ ಲಘು ಯುದ್ಧ ವಿಮಾನವೊಂದು ಶುಕ್ರವಾರ ಬೆಳಗ್ಗೆ ಪತನವಾಗಿದ್ದು, ಅದೃಷ್ಟವಷಾತ್‌ ಪೈಲಟ್‌ಗಳಿಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ. 

Advertisement

ವಿಮಾನ ಪತನವಾಗುವುದು ಖಚಿತವಾಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಪೈಲಟ್‌ಗಳು ಜನಸಂದಣಿಯಿರುವ ಪ್ರದೇಶದತ್ತ ತೆರಳದಂತೆ ಮಾಡಿ ಖಾಲಿ ಪ್ರದೇಶತ್ತ ತಿರುಗಿಸಿ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. 

ತರಬೇತಿಗಾಗಿ ಹಾರಾಟ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಯಾವ ಕಾರಣಕ್ಕಾಗಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next