ಯೊಕೊಹಾಮಾ (ಜಪಾನ್): ಭಾರತದ ಪುರುಷರ ಮತ್ತು ವನಿತಾ ರಿಲೇ ತಂಡ ‘ಐಎಎಫ್ ವಿಶ್ವ ರಿಲೇ ಕೂಟದ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಪುರುಷರ ತಂಡ 17ನೇ ಸ್ಥಾನ ಪಡೆದರೇ, ವನಿತಾ ತಂಡ 18ನೇ ಸ್ಥಾನ ಪಡೆದು ಕೂಟವನ್ನು ಕೊನೆಗೊಳಿಸಿದೆ.
ಹೀಟ್ 3ರಲ್ಲಿ ಸ್ಪರ್ಧಿಸಿದ ಭಾರತದ ವನಿತಾ ತಂಡ 3 ನಿಮಿಷ 31.93 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ 5ನೇ ಸ್ಥಾನ ಪಡೆಯಿತು. ಕಳೆದ ತಿಂಗಳು ದೋಹಾದಲ್ಲಿ ನಡೆದ ಏಶ್ಯನ್ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ಗೆದ್ದ ತಂಡದ ಪ್ರದರ್ಶನಕ್ಕಿಂತ ಈ ಕೂಟದಲ್ಲಿ ನೀಡಿದ ಪ್ರದರ್ಶನ ಅತ್ಯುತ್ತಮವಾಗಿದೆ.
ಪುರುಷ ತಂಡಕ್ಕೆ ಕೊನೆಯ ಸ್ಥಾನ
ಪುರುಷರ ಅರ್ಹತಾ ಸುತ್ತಿನ ಹೀಟ್ ಎರಡರಲ್ಲಿ ಸ್ಪರ್ಧೆಗಿಳಿದ ಪುರುಷರ ರಿಲೇ ತಂಡ 3 ನಿಮಿಷ 06.05 ಸೆಕೆಂಡ್‌ಗಳಲ್ಲಿ ಕೊನೆಯ ಸ್ಥಾನದಲ್ಲಿ (6ನೇ) ಓಟ ಮುಗಿಸಿತು. ಪ್ರತಿ ಹೀಟ್‌ನಲ್ಲಿ ಅಗ್ರಸ್ಥಾನ ಪಡೆದ 2 ಸ್ಥಾನಗಳು ಫೈನಲ್ ಪ್ರವೇಶಿಸಲಿವೆ.
21 ತಂಡಗಳ ವನಿತಾ ರಿಲೇಯಲ್ಲಿ ಹಿಮಾ ದಾಸ್, ಎಂ. ಆರ್. ಪೂವಮ್ಮ, ವಿ.ಕೆ. ವಿಸ್ಮಯ, ಸರಿತಾಬೆನ್ ಗಾಯಕ್ವಾಡ್ ಅವರನ್ನೊಳಗೊಂಡ ತಂಡ 18ನೇ ಸ್ಥಾನ ಪಡೆದರೆ, 17 ತಂಡಗಳ ಪುರುಷರ ರಿಲೇಯಲ್ಲಿ ಭಾರತದ ತಂಡ ಕೊನೆಯ ಸ್ಥಾನ ಪಡೆದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಕೇವಲ ಅಗ್ರ 10 ತಂಡಗಳು ಮಾತ್ರ ದೋಹದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿದೆ.
ಭಾರತದ ಪುರುಷರ ತಂಡ ಕೆ. ಮೊಹ್ಮಮದ್, ಜೀತು ಬೇಬಿ, ಜೀವನ್ ಕೆ, ಸುರೇಶ್ ಅವರನ್ನೊಳಗೊಂಡಿತ್ತು.