Advertisement

ಮಧ್ಯಪ್ರದೇಶದಲ್ಲಿ ಸುಖೋಯ್-ಮಿರಾಜ್ ಯುದ್ಧ ವಿಮಾನಗಳ ಮುಖಾಮುಖಿ ಢಿಕ್ಕಿ!; ಭಗ್ನಾವಶೇಷ ಪತ್ತೆ

02:00 PM Jan 28, 2023 | Team Udayavani |

ಗ್ವಾಲಿಯರ್: ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಪತನಗೊಂಡ ಘಟನೆ ಶನಿವಾರ (ಜನವರಿ 28) ಬೆಳಗ್ಗೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.

Advertisement

ಸುಖೋಯ್ ಸು-30ಎಂಕೆಐ ಮತ್ತು ಮಿರಾಜ್ 2000 ಯುದ್ಧವಿಮಾನಗಳು ಈ ಪ್ರದೇಶದಲ್ಲಿ ಅಭ್ಯಾಸ ಮಾಡುತ್ತಿದ್ದವು ಎಂದು ವರದಿಯಾಗಿದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಎರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿರುವ ವಾಯುನೆಲೆಯಿಂದ ಟೇಕಾಫ್ ಆಗಿವೆ. ಆದರೆ, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಯ ಸಂಪೂರ್ಣ ಮೌಲ್ಯಮಾಪನದ ನಂತರ ಇನ್ನಷ್ಟು ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಗಳ ಅವಶೇಷಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಇದನ್ನೂ ಓದಿ:ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ: ಸಿಎಂ ಬೊಮ್ಮಾಯಿ

“ಬೆಳಿಗ್ಗೆ 10-10.15 ರ ಸುಮಾರಿಗೆ ವಿಮಾನ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿತು. ಇಲ್ಲಿಗೆ ಬಂದ ನಂತರ ಅದು ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಎಂದು ತಿಳಿಯಿತು. ಇದು ಯುದ್ಧ ವಿಮಾನವೇ ಅಥವಾ ಸಾಮಾನ್ಯ ವಿಮಾನವೇ ಎಂದು ನಿರ್ಣಯಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಪೈಲಟ್‌ಗಳು ಹೊರಬಂದಿದ್ದಾರೆಯೇ ಅಥವಾ ಇನ್ನೂ ಇದ್ದಾರೆಯೇ ಎಂದು ತಿಳಿಯಬೇಕಿದೆ” ಎಂದು ಭರತ್‌ಪುರ ಡಿಎಸ್‌ಪಿ ಎಎನ್‌ಐಗೆ ತಿಳಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next