Advertisement

ಎಫ್-16 ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ನೀಡಿದ ವಾಯುಪಡೆ

03:12 AM Apr 09, 2019 | mahesh |

ಹೊಸದಿಲ್ಲಿ: ಬಾಲಕೋಟ್‌ನಲ್ಲಿ ವಾಯುಪಡೆ ದಾಳಿ ನಡೆಸಿದ ಮರುದಿನ ಫೆ. 27ರಂದು ನಾವು ಪಾಕಿ ಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆ ದುರು ಳಿಸಿದ್ದೇವೆ ಎಂದು ಭಾರತೀಯ ವಾಯುಪಡೆ ಮತ್ತೂಮ್ಮ ಸ್ಪಷ್ಟಪಡಿಸಿದ್ದು, ಇದಕ್ಕೆ ಸಾಕ್ಷ್ಯವನ್ನೂ ಒದಗಿಸಿದೆ. ಎಫ್16ಗೆ ಸಂಬಂಧಿಸಿದ ರಾಡಾರ್‌ ಇಮೇಜ್‌ಗಳನ್ನು ಮಾಧ್ಯಮ ಗಳಿಗೆ ವಾಯುಪಡೆ ಪ್ರದರ್ಶಿಸಿದೆ.

Advertisement

ಸುದ್ದಿಗೋಷ್ಠಿ ನಡೆಸಿದ ವಾಯುಪಡೆ ವೈಸ್‌ ಮಾರ್ಶಲ್‌ ಆರ್‌.ಜಿ. ಕಪೂರ್‌, ಪಾಕಿಸ್ಥಾನ ಭಾರತದ ಗಡಿಯಲ್ಲಿ ಎಫ್ 16 ಯುದ್ಧ ವಿಮಾನವನ್ನು ಬಳಸಿದೆ ಎಂಬುದಕ್ಕೆ ನಿರಾಕರಿಸಲಾಗದ ಸಾಕ್ಷ್ಯ ನಮ್ಮ ಬಳಿ ಇದೆ. ಅಷ್ಟೇ ಅಲ್ಲ, ನಮ್ಮ ಮಿಗ್‌ ವಿಮಾನದಿಂದ ಎಫ್-16 ಹೊಡೆದುರುಳಿಸಿದ್ದಕ್ಕೂ ಸಾಕ್ಷ್ಯವಿದೆ ಎಂದಿದ್ದಾರೆ.

ಪಾಕಿಸ್ಥಾನಕ್ಕೆ ಅಮೆರಿಕ ನೀಡಿರುವ ಎಲ್ಲ ಎಫ್16 ಯುದ್ಧ ವಿಮಾನಗಳನ್ನೂ ಅಮೆರಿಕ ಲೆಕ್ಕ ಮಾಡಿದ್ದು, ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ವಿದೇಶಿ ಮಾಧ್ಯಮ ದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಎಫ್16 ಹೊಡೆದುರುಳಿಸಿ ರುವುದರ ಬಗ್ಗೆ ಶುಕ್ರವಾರ ವಾಯುಪಡೆ ಅಧಿಕಾ ರಿಗಳು ಸಮರ್ಥನೆ ನೀಡಿದ್ದರು. ಅಲ್ಲದೆ, ಸೋಮವಾರ ಈ ಬಗ್ಗೆ ಮಾತನಾಡಿದ ಕಪೂರ್‌, ಏರ್‌ಬೋರ್ನ್ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಂನಿಂದ ಲಭ್ಯ ವಾದ ಹಲವು ಚಿತ್ರಗಳನ್ನು ಪ್ರದರ್ಶಿಸಿದರು. ಇದಕ್ಕೂ ಹೆಚ್ಚು ಸ್ಪಷ್ಟವಾದ ಮಾಹಿತಿ ಮತ್ತು ಸಾಕ್ಷ್ಯ ನಮ್ಮ ಬಳಿ ಇವೆ. ಆದರೆ ಭದ್ರತೆ ಕಾರಣದಿಂದ ಬಿಡುಗಡೆ ಮಾಡುತ್ತಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next