Advertisement

ಸೇನೆಗೆ ಸಲಾಂ, 21 ನಿಮಿಷಗಳ ಕಾರ್ಯಾಚರಣೆ; ಪಾಕ್ 300 ಉಗ್ರರು ಫಿನಿಶ್

04:49 AM Feb 26, 2019 | Team Udayavani |

ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಎ ಮಹಮ್ಮದ್ ಉಗ್ರ ಆತ್ಮಾಹುತಿ ದಾಳಿ ನಡೆಸಿದ್ದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕ್ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಮಂಗಳವಾರ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದಾರೆ.

Advertisement

ಇಂದು ಮುಂಜಾನೆ ಪಾಕಿಸ್ತಾನದ ಎಲ್ ಒಸಿಯೊಳಗೆ ಭಾರತೀಯ ಸೇನೆ ನುಗ್ಗಿ ಬರೋಬ್ಬರಿ ಒಂದು ಸಾವಿರ ಕೆಜಿ ತೂಕದ ಬಾಂಬ್ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಲ್ ಒಸಿ ಬಳಿ ಅಡಗಿದ್ದ 200-300 ಉಗ್ರರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.

ಪಾಕಿಸ್ತಾನದ 24 ಕಿಲೋ ಮೀಟರ್ ಒಳಗೆ ನುಗ್ಗಿ ಈ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಉಗ್ರರು ಹತ್ಯೆಗೈದ ಎರಡು ವಾರಗಳ ಬಳಿಕ ಭಾರತ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ತುರ್ತು ಸಭೆ:

Advertisement

ಭಾರತೀಯ ವಾಯುಪಡೆ ಎಲ್ ಒಸಿ ಒಳಗೆ ನುಗ್ಗಿ ಉಗ್ರರ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯುತ್ತಿದೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿದ್ದಾರೆ.

ಕಾರವಾರದ ನೌಕಾನೆಲೆ ಕದಂಬದಲ್ಲಿ ಹೈಅಲರ್ಟ್ ಘೋಷಣೆ:

ಕಾರವಾರದಲ್ಲಿರುವ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭಾರತದ ದಾಳಿ ಬಗ್ಗೆ ಚರ್ಚೆ ನಡೆಸುತ್ತಿರುವ ಪಾಕಿಸ್ತಾನ:

ಗಡಿನಿಯಂತ್ರಣ ರೇಖೆ ನುಗ್ಗಿ ಭಾರತೀಯ ವಾಯುಸೇನೆ ಪಾಕ್ ಉಗ್ರರ ಮೇಲೆ ದಾಳಿ ನಡೆಸಿದ ಘಟನೆ ಬೆನ್ನಲ್ಲೇ ಪಾಕಿಸ್ತಾನ ವಿದೇಶಾಂಗ ಸಚಿವ, ಅಧ್ಯಕ್ಷ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯುತ್ತಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಭಾರತೀಯ ಸೇನೆಯ ದಾಳಿಯ ಹೈಲೈಟ್ಸ್:

ಶತ್ರು ದೇಶವಾದ ಪಾಕಿಸ್ತಾನದ ರೆಡಾರ್ ಕಣ್ತಪ್ಪಿಸಿ ವಾಯುಪಡೆ ದಾಳಿ

ಕೇವಲ 21 ನಿಮಿಷಗಳ ಕಾರ್ಯಾಚರಣೆ

1000 ಕೆಜಿಯ 10 ಬಾಂಬ್ ಹಾಕಿ ಉಗ್ರರ ಅಡಗು ತಾಣಗಳ ಧ್ವಂಸಗೊಳಿಸಿದ ಸೇನೆ

ಚಾಕೋಟಿ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ ಈ ದಾಳಿ ನಡೆದಿದೆ.

ಬಾಲಾಕೋಟ್, ಮುಜಾಫರ್ ಬಾದ್ ಕ್ಯಾಂಪ್ ಮೇಲೆ 3.48ಕ್ಕೆ ದಾಳಿ ನಡೆಸಿತ್ತು

Advertisement

Udayavani is now on Telegram. Click here to join our channel and stay updated with the latest news.

Next