Advertisement
ಸದ್ಯ ಒಟ್ಟು 15 ಹೆಲಿಕಾಪ್ಟರ್‌ಗಳನ್ನು ನೀಡಲಾಗಿದ್ದು, ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವುಗಳಿಗೆ “ಪ್ರಚಂಡ’ ಎಂದು ಹೆಸರನ್ನೂ ಇರಿಸಿದ್ದಾರೆ.
Related Articles
“ಭಾರತದ ಸಾರ್ವಭೌಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ವಾಯು ಪಡೆ ಪ್ರಮುಖ ಪಾತ್ರವನ್ನು ವಹಿಸಿದೆ. “ಪ್ರಚಂಡ’ ಹೆಲಿಕಾಫ್ಟರ್‌ಗಳ ಸೇರ್ಪಡೆಯಿಂದ ಅದರ ಬಲ ಮತ್ತಷ್ಟು ಹೆಚ್ಚಲಿದೆ,’ ಎಂದರು. ಚೀನ ಜತೆಗೆ ಗಡಿ ತಂಟೆ ಹೊಂದಿರುವ ಲಡಾಖ್ ಪ್ರದೇಶದಲ್ಲಿ ಮತ್ತು ಪಾಕಿಸ್ಥಾನ ಗಡಿ ಪ್ರದೇಶದಲ್ಲಿ ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ.
Advertisement
ದೇಶಿಯ ತಂತ್ರಜ್ಞಾನ: “ಪ್ರಚಂಡ’ ಹೆಲಿಕಾಫ್ಟರ್‌ಗಳನ್ನು ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ದೇಶಿಯವಾಗಿ ನಿರ್ಮಿಸಿದೆ. ಎರಡು ಎಂಜಿನ್‌ಗಳನ್ನು ಹೊಂದಿರುವ ಎಲ್‌ಸಿಎಚ್, 5.8 ಟನ್ ತೂಕವಿದೆ. ಇದರಲ್ಲಿ ಮಿಸೈಲ್‌ಗಳು, 20ಎಂಎಂ ಟುರ್ರೆಟ್ ಗನ್, ರಾಕೆಟ್ ವ್ಯವಸ್ಥೆ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ. ಇವು ರಾತ್ರಿ ಸಮಯದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.ಹಂತ-ಹಂತವಾಗಿ: 95 ಹೆಲಿಕಾಫ್ಟರ್‌ಗಳು ಭೂಸೇನೆಗೆ, 65 ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹಂತ-ಹಂತವಾಗಿ ಇವುಗಳನ್ನು ಎಚ್‌ಎಎಲ್ ಪೂರೈಸಲಿದೆ. ಜೋಧಪುರದಲ್ಲಿ ನಡೆದ ಸಮಾರಂಭದಲ್ಲಿ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ, ರಕ್ಷಣ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಸೇರಿದಂತೆ ಹಿರಿಯ ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು. ಏನೇನು ವಿಶೇಷಗಳು
ರಾತ್ರಿ ಸಮಯದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ
ಎಲ್‌ಸಿಎಚ್‌ಗಳಲ್ಲಿ ಮಿಸೈಲ್‌ಗಳು, 20ಎಂಎಂ ಟುರ್ರೆಟ್ ಗನ್, ರಾಕೆಟ್ ವ್ಯವಸ್ಥೆ ಅಳವಡಿಕೆ.
ಅತೀ ಎತ್ತರದ ಪ್ರದೇಶದದಲ್ಲಿ ಶತ್ರುಗಳ ಸೇನಾ ಬಲ ಕುಗ್ಗಿಸುವ ಸಾಮರ್ಥ್ಯ ಹೊಂದಿದೆ. ಎಲ್ಲಿ ನಿಯೋಜನೆ?
ವಿಶೇಷವಾಗಿ ಚೀನ ಜತೆ ಗಡಿತಂಟೆ ಹೊಂದಿರುವ ಲಡಾಖ್‌ನಲ್ಲಿ
ಪಾಕಿಸ್ಥಾನ ಜತೆಗಿನ ಗಡಿ ಪ್ರದೇಶದಲ್ಲಿ