Advertisement

ಉಗ್ರರ ಶವ ಎಣಿಕೆ ಮಾಡೋದು ನಮ್ಮ ಕೆಲಸವಲ್ಲ; BSF ಮೊದಲ ಪತ್ರಿಕಾಗೋಷ್ಠಿ

08:14 AM Mar 04, 2019 | Sharanya Alva |

ಕೊಯಮತ್ತೂರು: ಭಾರತ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ಗೆ ನುಗ್ಗಿ ಜೈಶ್ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿ ಬಗ್ಗೆ ಮೊದಲ ಬಾರಿಗೆ ಐಎಎಫ್ ವರಿಷ್ಠ ಬಿಎಸ್ ಧನೋವಾ ಅವರು ಸೋಮವಾರ ಮಾಹಿತಿ ನೀಡಿದ್ದು, ನಾವು ಅಂದುಕೊಂಡಂತೆ ನಮ್ಮ ಗುರಿಯನ್ನು ಮುಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ವಾಯುಪಡೆ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯನ್ನು ಖಚಿತಪಡಿಸಿ, ವಿವರಗಳನ್ನು ನೀಡಿದ್ದಾರೆ.

ಉಗ್ರರ ಶವಗಳನ್ನು ಎಣಿಕೆ ಮಾಡೋದು ಸೇನೆಯ ಕೆಲಸವಲ್ಲ:

ಪಾಕಿಸ್ತಾನ ಮೂಲದ ಉಗ್ರರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೇನೆಯ ಕೆಲಸ ಉಗ್ರರ ಶಿಬಿರಗಳನ್ನು ನಾಶ ಮಾಡೋದು, ಉಗ್ರರ ಶವ ಎಣಿಕೆ ಮಾಡುವುದು ನಮ್ಮ ಕೆಲಸವಲ್ಲ ಎಂದು ಹೇಳಿದರು.

ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಸಂಖ್ಯೆಯ ಬಗ್ಗೆ ಭಾರತೀಯ ವಾಯುಪಡೆ ಸ್ಪಷ್ಟನೆ ಕೊಡೋದಿಲ್ಲ, ಅದರ ಬಗ್ಗೆ ಸರ್ಕಾರ ಮಾಹಿತಿ ನೀಡುತ್ತದೆ. ನಾವು ಸಾವನ್ನಪ್ಪಿರುವ ಉಗ್ರರ ಶವಗಳ ಲೆಕ್ಕ ಹಾಕುವುದಿಲ್ಲ, ನಮಗೆ ನಮ್ಮ ಗುರಿ ಮಾತ್ರ ಮುಖ್ಯ..ನಾವು ನಮ್ಮ ಗುರಿ ತಲುಪಿದ್ದೇವಾ ಅಥವಾ ಇಲ್ಲವಾ ಎಂಬುದು ಮುಖ್ಯ ಎಂದರು.

Advertisement

ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಶ್ ಉಗ್ರರ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಭಾರತೀಯ ವಾಯುಪಡೆ ದಾಳಿ ನಡೆಸಿ ಧ್ವಂಸ ಮಾಡಿತ್ತು. ಏತನ್ಮಧ್ಯೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದಾಳಿ ನಡೆಸಿದ ಬಗ್ಗೆ, ಸಾವನ್ನಪ್ಪಿರುವ ಉಗ್ರರ ಸಂಖ್ಯೆ ಎಷ್ಟು ಈ ಬಗ್ಗೆ ಸಾಕ್ಷ್ಯ ಕೊಡಿ ಎಂದು ಪ್ರಶ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಭಾರತದ ವಾಯುಪಡೆ ಒಂದು ವೇಳೆ ಏರ್ ಸ್ಟ್ರೈಕ್ ನಡೆಸದೇ ಇದ್ದಿದ್ದರೆ, ಪಾಕಿಸ್ತಾನ ಸೇನೆ ಯಾಕೆ ಪ್ರತಿ ದಾಳಿ ನಡೆಸಿದೆ ಎಂದು ಐಎಎಫ್ ಮುಖ್ಯಸ್ಥ ಧನೋವಾ ಅವರು ಪ್ರಶ್ನಿಸಿದ್ದಾರೆ. ಮಿಗ್ 21 ಉತ್ತಮವಾದ ಯುದ್ಧ ವಿಮಾನ ಅದನ್ನು ಎಫ್ 16 ವಿರುದ್ಧ ಬಳಸಿದ್ದು ಯಾಕೆ ಎಂಬ ಟೀಕೆಯನ್ನು ಕೂಡಾ ಅವರು ಅಲ್ಲಗಳೆದಿದ್ದಾರೆ. ಪ್ರತಿದಾಳಿಯ ಸಂದರ್ಭದಲ್ಲಿ ಪೂರ್ವ ಯೋಜಿತವಾಗಿಯೇ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಮಿಗ್ 21 ವಿಮಾನವನ್ನು ಮೇಲ್ದರ್ಜೆಗೇರಿಸಲಾಗಿದೆ. ಶತ್ರುಗಳ ವಿರುದ್ಧ ಹೋರಾಡಲು ನಮ್ಮ ಎಲ್ಲಾ ಯುದ್ಧ ವಿಮಾನಗಳು ಸಮರ್ಥವಾಗಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next