Advertisement

“ಐಎಡಿಯ ಶಾಖೆಗಳು ಎಲ್ಲ ರಾಜ್ಯಗಳಿಗೂ ವ್ಯಾಪಿಸಲಿ’ 

12:30 AM Jan 17, 2019 | Team Udayavani |

ಮಧೂರು: ಲಿಂಪೋಡೆಮಾ ಮತ್ತು ಪೈಲೇರಿಯಾ ರೋಗಗಳ ಮಧ್ಯೆ ಭಿನ್ನತೆಗಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು. ಲಿಂಪೋಡೆಮಾ-ಪೈಲೇರಿಯ ನಿಯಂತ್ರಣ- ಚಿಕಿತ್ಸೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಐಎಡಿಯ ಸಾಧನೆ ಮಹತ್ವದ್ದಾಗಿದ್ದು, ಐಎಡಿಯ ಶಾಖೆಗಳು ರಾಷ್ಟ್ರದ ಎಲ್ಲ ರಾಜ್ಯಗಳಿಗೂ ವ್ಯಾಪಿಸಬೇಕು ಎಂಬ ಅಭಿಪ್ರಾಯಗಳು ಉಳಿಯತ್ತಡ್ಕದ ಇನ್‌ಸ್ಟಿಟ್ಯೂಟ್‌ ಆಫ್‌ ಅಪ್ಲೈಡ್‌ ಡರ್ಮಟೋಲಜಿ (ಐಎಡಿ)ಯಲ್ಲಿ ನಡೆಯುತ್ತಿರುವ ತ್ರಿದಿನಗಳ ವಿಚಾರ ಸಂಕಿರಣದ ವಿಶೇಷ ಚರ್ಚೆಯಲ್ಲಿ ವ್ಯಕ್ತಗೊಂಡವು. 

Advertisement

ವಿಚಾರಗೋಷ್ಠಿಯಲ್ಲಿ ಇಂಗ್ಲೆಂಡ್‌ನ‌ ಆಕ್ಸ್‌ ಫರ್ಡ್‌ ವಿವಿಯ ಚರ್ಮರೋಗ ವಿಭಾಗದ ಉಪನ್ಯಾಸಕ ಪ್ರೊ| ಟೆರೆನ್ಸ್‌ ಜೆ. ರೆಯಾನ್‌ ಹಾಗೂ ಮಂಗಳೂರು ನಿಟ್ಟೆ  ವೈದ್ಯಕೀಯ ವಿವಿಯ ಯುನೆಸ್ಕೋ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಪ್ರೊ| ಇಂದ್ರಾಣಿ  ಕರುಣಾಸಾಗರ್‌ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಗುಜರಾತ್‌ ರಾಜ್ಯದಲ್ಲಿ  ಪೈಲೇರಿಯಾ ಮತ್ತು ಲಿಂಪೋಡೆಮಾ ನಿಯಂತ್ರಣ ಸಾಧನೆಗಳ ಬಗ್ಗೆ ಸೂರತ್‌ ಸರಕಾರಿ ವೈದ್ಯಕೀಯ ಕಾಲೇಜಿನ ಡಾ| ಅಂಜಲಿ ಮೋದಿ ಹಾಗೂ ಲಿಂಪೋಡೆಮಾ ರೋಗ ಹರಡುವಿಕೆ, ಜೀನ್‌ ಹಾಗೂ ಆಪ್ತ ಸಮಾಲೋಚನೆಯ ಬಗ್ಗೆ ಲಂಡನ್‌ ಸೈಂಟ್‌ ಜಾರ್ಜ್‌ ವಿವಿಯ ಪ್ರೊ| ಸಹರ್‌ ಮನ್ಸೂರ್‌ ವಿಚಾರ ಮಂಡನೆ ನಡೆಸಿದರು.

ಇದೇ ಸಂದರ್ಭದಲ್ಲಿ ಐಎಡಿ ಚಿಕಿತ್ಸಾ ಕೇಂದ್ರದಲ್ಲಿ ಲಿಂಪೋಡೆಮಾ ವೈದ್ಯಕೀಯ ಶಿಬಿರ ಮತ್ತು ಅತ್ಯಪೂರ್ವ ಚರ್ಮರೋಗಗಳ ವೈದ್ಯಕೀಯ ಶಿಬಿರ ನಡೆಸಲಾಯಿತು. ರಾಷ್ಟ್ರ ಮಟ್ಟದ ಖ್ಯಾತ ವೈದ್ಯರ ತಂಡ ಸಹಕರಿಸಿತು. ಎರಡನೇ ವಿಚಾರ ಸಂಕಿರಣದಲ್ಲಿ ಲಿಂಪೋಡೆಮಾ ಜಾಗೃತಿ ತರಗತಿ ನಡೆಯಿತು. ಜಪಾನಿನ ಟೋಕಿಯೋ ನ್ಯಾಶನಲ್‌ ಸೆಂಟರ್‌ ಫಾರ್‌ ಗ್ಲೋಬಲ್‌ ಹೆಲ್ತ್‌ ಆ್ಯಂಡ್‌ ಮೆಡಿಸಿನ್‌ ವಿಭಾಗದ ಡಾ| ರಿಯಾ ರೋಸೆಲಿನ್‌ ಯೋಟ್ಸು, ಭಾರತ ಸರಕಾರದ ನಿಕಟಪೂರ್ವ ನೀತಿ ನಿರೂಪಣಾ ಸಮಿತಿ ಉಪಾಧ್ಯಕ್ಷೆ ಡಾ| ನಂದಿನಿ ಕುಮಾರ್‌ ವಿಚಾರ ಮಂಡನೆ ನಡೆಸಿದರು. ಐಎಡಿಯ ಅನೀಶಾ ಎ.ಆರ್‌. ಸಂಯೋಜಕರಾಗಿ ಸಹಕರಿಸಿದರು. ಬಳಿಕ ಲಿಂಪೋಡೆಮಾ ರೋಗಿಗಳೊಂದಿಗೆ ಯೋಗ ಮತ್ತು ಲಿಂಪೋಡೆಮಾ ಚಿಕಿತ್ಸೆಗಳ ಕುರಿತಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. 

ಅಪರಾಹ್ನ ಲಿಂಪೋಡೆಮಾ ಕುರಿತಾದ ಅರಿವು ವಿಚಾರ ಗೋಷ್ಠಿ ನಡೆಯಿತು. ಪ್ರೊ| ಟೆರೆನ್ಸ್‌ ರಿಯಾನ್‌, ಡಾ| ಅಂಜಲಿ ಮೋದಿ ಉಪನ್ಯಾಸ ನೀಡಿದರು. ಐಎಡಿಯ  ರೇಷ್ಮಾ ಡಿ’ಸೋಜಾ ಸಂಯೋಜಕರಾಗಿ ಸಹಕರಿಸಿದರು. ಬಳಿಕ ನಡೆದ ವಿಶೇಷ ಚರ್ಚಾಗೋಷ್ಠಿಯಲ್ಲಿ ಪ್ರೊ| ಟೆರೆನ್ಸ್‌ ರೆಯಾನ್‌ ಅವರು ಚಿಕಿತ್ಸೆ ಮತ್ತು ಮಾನವೀಯತೆಯ ಬಗ್ಗೆ ಮಾತನಾಡಿದರು. 

ಭಾರತ ಸರಕಾರದ ನಿಕಟಪೂರ್ವ ನೀತಿ ಆಯೋಗದ ಉಪಾಧ್ಯಕ್ಷೆ ಡಾ| ನಂದಿನಿ ಕುಮಾರ್‌ ಅವರು ಆಯುಷ್‌ ಚಿಕಿತ್ಸಾ ವಿಭಾಗದಲ್ಲಿ ಜೆನೆಟಿಕ್‌ ಅಧ್ಯಯನ ಮತ್ತು ನಡೆದು ಬರುತ್ತಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 

Advertisement

ಪ್ರೊ| ಇಂದಿರಾ ಕರುಣಾಸಾಗರ್‌ ಮತ್ತು ಜೈಪುರ ಜಾಮ್‌ನಗರದ ಆಯುರ್ವೇದ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ| ಎಂ.ಎಸ್‌. ಬಗೇಲ್‌ ಸಂಯೋಜಕರಾಗಿ ಸಹಕರಿಸಿದರು. ಸಂಜೆ ಆಯುರ್ವೇದದಲ್ಲಿ ರೋಗ ಲಕ್ಷಣದ ಹಿನ್ನೆಲೆಯ ಚಿಕಿತ್ಸೆಯ ಬಗ್ಗೆ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಉಪನ್ಯಾಸಕ ಪ್ರೊ| ಗಿರೀಶ್‌ ಕೆ.ಜೆ. ಅವರು ಉಪನ್ಯಾಸ ನೀಡಿದರು. ಡಾ| ಗುರುಪ್ರಸಾದ್‌ ಅಗ್ಗಿತ್ತಾಯ ಸಂಯೋಜಕರಾಗಿ ಭಾಗವಹಿಸಿದರು. 

ಇಂಗ್ಲೆಂಡ್‌ನ‌ ರೋಯಲ್‌ ಡಬೇì ಆಸ್ಪತ್ರೆಯ ಕಟೇ ರಿಚಸ್‌ ಅವರು ಮೊಲೆ ಕ್ಯಾನ್ಸರ್‌ ಲಿಂಪೋಡೆಮಾದಲ್ಲಿ ಅಧ್ಯಯನ, ಚಿಕಿತ್ಸೆಗಳ ಬಗ್ಗೆ ಉಪನ್ಯಾಸ ನೀಡಿದರು. ಮಂಗಳೂರಿನ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯ ಡಾ| ಸುರೇಶ್‌ ರಾವ್‌ ಸಂಯೋಜಕರಾಗಿ ಭಾಗವಹಿಸಿದರು. ಈ ಸಂದರ್ಭ ನ್ಯೂಯಾರ್ಕ್‌ ಕ್ಯಾನ್ಸರ್‌ ಸೆಂಟರ್‌ಸಹಾಯಕ ಪ್ರಾಧ್ಯಾಪಕ ಡಾ| ಶಾಮ್‌ ಮಾಯಿಲಂಕೋಡಿ ಅವರೊಂದಿಗೆ ಸಂವಾದ ನಡೆಯಿತು. 

ಸೂರತ್‌ ಮುನ್ಸಿಪಲ್‌ ಕಾರ್ಪೋರೇಶನ್‌ಅಧಿಕಾರಿ ಡಾ| ಕೇಶವ್‌ ಜಿ.ವಿಷ್ಣುವ್‌ ಅವರು ಲಿಂಪೋಡೆಮಾ ನಿರ್ವಹಣೆ ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. ಡಾ| ರಿಯಾ ರೊಸೆಲಿನ್‌ ಯೋಟ್ಸು ಸಂಯೋಜಕರಾಗಿ ಸಹಕರಿಸಿದರು. ಡಾ| ನಾರಾಯಣ ಪ್ರದೀಪ್‌, ಐಎಡಿ ನಿರ್ದೇಶಕ ಡಾ| ಎಸ್‌. ಆರ್‌. ನರಹರಿ, ಡಾ| ಪ್ರಸನ್ನಾ ಕೆ.ಎಸ್‌., ಡಾ| ಗುರುಪ್ರಸಾದ್‌ ಅಗ್ಗಿತ್ತಾಯ, ಶ್ರುತಿ ಮೋಳ್‌ ಮೊದಲಾದವರು ಭಾಗವಹಿಸಿ ಚರ್ಚೆ ನಿರ್ವಹಿಸಿದ್ದರು. 

ಐಎಡಿಯ ವಿಚಾರ ಸಂಕಿರಣ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next