Advertisement
ಇದೀಗ ಪಾಕಿಸ್ಥಾನದ ಕ್ರೀಡಾಪಟುಗಳು ಭಾರತದಲ್ಲಿ ನಡೆ ಯುವ ಖೋ ಖೋಲೀಗ್‌ನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದರೂ ವೀಸಾ ಸಮಸ್ಯೆ ಎದುರಾಗಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾ ಗುವುದು ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.
ಪಾಕಿಸ್ಥಾನದ ನಾಲ್ಕೈದು ಮಂದಿ, ಈ ವರ್ಷ ನವೆಂಬರ್‌ನಲ್ಲಿ ನಡೆಯ ಲಿರುವ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಪಾಲ್ಗೊಳ್ಳುವ ಆಸಕ್ತಿ ಹೊಂದಿದ್ದಾರೆ. ಆದರೆ ವೀಸಾ ಸಮಸ್ಯೆಯಾಗಿದೆ. ಕೇಂದ್ರದ ಈ ನಿಲುವಿನಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ), ಭಾರತಕ್ಕೆ ಮುಂದೆ ವಿಶ್ವ ಮಟ್ಟದ ಕ್ರೀಡಾಕೂಟದ ಆತಿಥ್ಯ ನೀಡುವುದಿಲ್ಲವೆಂದು ತಿಳಿಸಿದೆ. ತನ್ನ ಅಧೀನದಲ್ಲಿ ಬರುವ ವಿವಿಧ ಸಂಸ್ಥೆಗಳಿಗೂ ಅದೇ ಸೂಚನೆ ನೀಡಿದೆ.