Advertisement

ಎಲ್ಲೂ ಹೋಗಿಲ್ಲ, ಸದನದಲ್ಲಿ ಪಾಲ್ಗೊಳ್ಳುವೆ’

01:52 AM Feb 10, 2019 | |

ಬೆಂಗಳೂರು: ‘ನಾನು ವೈಯಕ್ತಿಕ ಕೆಲಸಕ್ಕೆ ಮೈಸೂರಿಗೆ ಹೋಗಿದ್ದೆ. ದೆಹಲಿ ಅಥವಾ ಮುಂಬೈಗೆ ಹೋಗಿರಲಿಲ್ಲ’ ಎಂದು ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳ ಗಾಗಿ ಮುಂಬೈನಲ್ಲಿದ್ದು ಕಾಂಗ್ರೆಸ್‌ ಶಾಸ ಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಮಜಾಯಿಷಿ ನೀಡಿದರು.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಬರಲು ಆಗುವುದಿಲ್ಲ. ಅನುಮತಿ ಕೊಡಿ ಎಂದು ಶುಕ್ರವಾರ ದೂರವಾಣಿ ಮೂಲಕ ಸಿದ್ದ ರಾಮಯ್ಯ ಅವರಿಗೆ ಬಿ.ಸಿ.ಪಾಟೀಲ್‌ ಮನವಿ ಸಲ್ಲಿಸಿ ದಾಗ, ನಾಳೆ ಬಂದು ನನ್ನನ್ನು ಭೇಟಿಯಾಗಬೇಕೆಂದು ಸೂಚಿಸಿದ್ದರು. ಹೀಗಾಗಿ, ಶನಿವಾರ ಬೆಳಗ್ಗೆ ಕಾವೇರಿಗೆ ಆಗಮಿಸಿದ ಬಿ.ಸಿ.ಪಾಟೀಲ್‌, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿ.ಸಿ.ಪಾಟೀಲ್‌, ‘ನಾನು ಆಪರೇಷನ್‌ ಕಮಲಕ್ಕೆ ಬಲಿಯಾಗಿಲ್ಲ. ಮುಂಬೈನ ಹೋಟೆಲ್‌ನಲ್ಲೂ ಇರಲಿಲ್ಲ. ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಸೋಮವಾರದಿಂದ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದೇನೆ’ ಎಂದು ತಿಳಿಸಿದರು.

ಸಿದ್ದು ಗರಂ: ಭೇಟಿ ವೇಳೆ ಬಿ.ಸಿ. ಪಾಟೀಲ್‌ ವಿರುದ್ಧ ಸಿದ್ದರಾಮಯ್ಯ ಗರಂ ಆಗಿ, ಎಷ್ಟು ಬಾರಿ ಹೇಳಿದ್ರೂ ಪದೇಪದೆ ಈ ರೀತಿ ತೊಂದರೆ ಕೊಡುತ್ತೀಯಾ. ನೀನು ನನ್ನ ಬೆಂಬಲಿಗ ಎಂದು ಬಿಂಬಿಸಿಕೊಂಡು ಇದೀಗ ಬಿಜೆಪಿ ಸಂಪ ರ್ಕದಲ್ಲಿ ಇದ್ದರೆ ಏನು ಅರ್ಥ. ಸಚಿವ ಸ್ಥಾನ ಸಿಗದೆ ಅನ್ಯಾಯ ಆಗಿರಬಹುದು. ಅದಕ್ಕೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನ್ಯಾಯ ಕೊಡಿಸಲಾಗುವುದು. ಆದರೆ, ಬಿಜೆಪಿ ಸಂಪರ್ಕ ಮಾಡಿದರೆ ಕ್ರಮ ಅನಿವಾರ್ಯ ಎಂದು ತಾಕೀತು ಮಾಡಿದರು ಎಂದು ಹೇಳಲಾಗಿದೆ. ಸದ್ಯಕ್ಕೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು, ಒಪ್ಪಿಕೋ. ಲೋಕಸಭೆ ಚುನಾ ವಣೆ ನಂತರ ಸಂಪುಟ ಪುನಾರಚನೆ ವೇಳೆ ಅವಕಾಶ ಸಿಗಲಿದೆ ಎಂಬ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

5ರಿಂದ 6 ಸಮಾವೇಶಕ್ಕೆ ಕಾಂಗ್ರೆಸ್‌ ತೀರ್ಮಾನ

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿ ವಿಪ್‌ ಉಲ್ಲಂಘಿಸಿದ್ದ ನಾಲ್ವರು ಶಾಸಕರ ಸದಸ್ಯತ್ವ ಅನರ್ಹತೆಗೊಳಿಸಲು ಸ್ಪೀಕರ್‌ಗೆ ಲಿಖೀತ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಜಂಟಿ ಅಧಿವೇಶನ ಹಾಗೂ ಬಜೆಟ್ ದಿನ ನಡೆದ ಶಾಸಕಾಂಗ ಪಕ್ಷದ ಸಭೆಗೂ ಗೈರಾದ ಹಿನ್ನೆಲೆಯಲ್ಲಿ ಈಗಾಗಲೇ ಅವರ ವಿರುದ್ಧ ಕ್ರಮಕ್ಕೆ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಮನವಿ ಮಾಡಲಾಗಿದೆ. ಸೋಮವಾರ ಲಿಖೀತವಾಗಿ ನಾಲ್ವರ ಸದಸ್ಯತ್ವ ಅನರ್ಹತೆಗೊಳಿಸಲು ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗಳನ್ನು ಗೆಲ್ಲುವ ವಿಶ್ವಾಸವಿದ್ದು, ಇದೇ ತಿಂಗಳು 5ರಿಂದ 6 ಸಮಾವೇಶ ನಡೆಸಲಿದ್ದೇವೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ದೆಹಲಿಯಲ್ಲಿ ರಾಹುಲ್‌ಗಾಂಧಿ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಯಾವಾಗ ಕರೆದರೂ ಬರುತ್ತೇನೆಂದು ರಾಹುಲ್‌ ಭರವಸೆ ನೀಡಿದ್ದಾರೆ. ಇದು ನಮ್ಮನ್ನು ಮತ್ತಷ್ಟು ಉತ್ಸಾಹಿತರನ್ನಾಗಿ ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next