Advertisement

Lok sabha Election: ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶಿವರಾಜ ತಂಗಡಗಿ

05:40 PM Aug 07, 2023 | Team Udayavani |

ಕೊಪ್ಪಳ: ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಲೋಕಸಭೆಯಲ್ಲಿ ಗೆಲ್ಲಿಸಬೇಕು ಎಂಬ ಟಾರ್ಗೆಟ್ ನೀಡಿದ್ದಾರೆ. ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿಜಯಪುರದಲ್ಲಿ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ರಾಘವೇಂದ್ರ ಹಿಟ್ನಾಳ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಪಕ್ಷ ಹೇಳಿದರೆ ನಾವು ಪಾಲಿಸಬೇಕಾಗುತ್ತದೆ. ಆದರೆ ಈಗ ಸದ್ಯ ಅಂತಹ ಚರ್ಚೆಯೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಿಸುವ ಟಾರ್ಗೆಟ್ ನೀಡಲಾಗಿದೆ ಎಂದರು.

ರಾಹುಲ್ ಗಾಂಧಿಯವರ ಅನರ್ಹಗೊಳಿಸಿದ್ದಕ್ಕೆ ಈಗ ಸತ್ಯಕ್ಕೆ ಗೆಲುವಾಗಿದೆ. ಬಿಜೆಪಿಯವರು ಇಂಥ ಕೃತ್ಯವನ್ನು ಮೊದಲಿನಿಂದ ಮಾಡುತ್ತಿದ್ದಾರೆ. ಖರ್ಗೆ ಹಾಗೂ ಖಂಡ್ರೆ ಅವರ ಬಗ್ಗೆ ಕೀಳಾಗಿ ಮಾತನಾಡಿದ ಆರಗ ಜ್ಞಾನೇಂದ್ರರನ್ನು ಹುಚ್ಚರ ಆಸ್ಪತ್ರೆಗೆ ಸೇರಿಸಬೇಕು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮೋದಿ ಹೆಸರು ಹೇಳಿದ್ದಕ್ಕೆ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ್ದರು. ಈಗ ಕಲ್ಯಾಣ ಕರ್ನಾಟಕ ಹಾಗು ಖರ್ಗೆ ಬಗ್ಗೆ ಮಾತನಾಡಿದ್ದಾರೆ. ಅಪಮಾನ ಮಾಡಿದ್ದಾರೆ. ಬಿಜೆಪಿಯವರನ್ನು ಈ ಭಾಗದಲ್ಲಿ ಓಡಾಡದಂತೆ ನೋಡಿಕೊಳ್ಳಬೇಕು ಎಂದರು.

ತಂಗಡಗಿ ವರ್ಗಾವಣೆ ಮಾಡಿಸುತ್ತಿದ್ದಾರೆ ಎಂಬ ದಡೇಸಗೂರು ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಮಾಡಿದ್ದು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ನಾನು ಮುಂಬೈ, ದೆಹಲಿಗೆ ಹೋಗಿದ್ದು ಇಲಾಖೆ ಕೆಲಸಕ್ಕೆ ಹೋಗಿದ್ದೆ‌. ದಡೇಸಗೂರು ಮೊದಲು ಕನ್ನಡ ಸರಿಯಾಗಿ ಮಾತನಾಡಲಿ. ಅವರನ್ನು ಕೇಳಿ ಕಾಲುವೆಗೆ ನೀರು ಬಿಡಲಾಗುವುದಿಲ್ಲ ಎಂದರು.

ತುಂಗಭದ್ರಾ ನಾಲೆಯ ವ್ಯಾಪ್ತಿಯ ರೈತರು ಆತಂಕ ಪಡುವುದು ಬೇಡ. ಈ ಬೆಳೆಗೆ ನೀರು ಬಿಡಲಾಗುತ್ತಿದೆ ಎಂದು ಹೇಳಿದರು.

Advertisement

ಹಿರಿಯರಾದ ಬಸವರಾಜ ರಾಯರಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಅಸಮಾಧಾನವಾಗಿಲ್ಲ. ಆದರೆ ನಾವೆಲ್ಲ ಈಗ ಅಧಿಕಾರಕ್ಕೆ ಬಂದಿದ್ದೇವೆ. ಅವರು ನಮಗೆ ಸಲಹೆ ನೀಡುತ್ತಿದ್ದಾರೆ. ರಾಯರಡ್ಡಿಯವರು ನಮ್ಮ ಲೀಡರ್, ಅವರು ಸಲಹೆ ಕೊಡುತ್ತಾರೆ ಎಂದರು.

ಎಸ್ ಸಿಪಿ, ಟಿಎಸ್ ಪಿ ಹಣವನ್ನು ನಾವು ಬೇರೆಯದಕ್ಕೆ ಬಳಸಿಲ್ಲ. ಶಕ್ತಿ ಯೋಜನೆಯಲ್ಲಿ ಈ ಹಣ ಬಳಸಿಕೊಳ್ಳಲು ಅವಕಾಶವಿದೆ ಬಳಸಿಕೊಳ್ಳಲಾಗಿದೆ. ಬಿಜೆಪಿಯವರು ಪ್ರತಿಭಟನೆ ಮಾಡುವುದೇ ಕೆಲಸ ಅದನ್ನು ಅವರು ಮುಂದುವರಿಸಲಿ ಎಂದರು.

ಗ್ಯಾರಂಟಿ ಯೋಜನೆಯು ಎಂಪಿ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ. ಲೋಕಸಭೆಯಲ್ಲಿ ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಧೂಳಿಪಟವಾಗುತ್ತಿದೆ. ಇದೇ ಕಾರಣ ಮೋದಿಯವರಿಗೆ ಈಗ ಭಯವಾಗಿದೆ. ನಮ್ಮ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ಗ್ಯಾರಂಟಿ ಯೋಜನೆ ಘೋಷಣೆಯಾಗಲಿವೆ ಎಂದರು.

ಕುಮಾರಸ್ವಾಮಿ ಅವರಿಗೆ ಈಗ ಕೆಲಸವಿಲ್ಲ. ಯಾವ ಕಡೆ ಬಂದರೂ ನಾನೇ ಎಂದುಕೊಂಡಿದ್ದರು. ಆದರೆ ವರ್ಗಾವಣೆ ಮಾಡುವದನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲ ಸರ್ಕಾರದಲ್ಲಿ ವರ್ಗಾವಣೆಯು ಸಹಜ ಕಾರ್ಯ ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next