Advertisement
ನನ್ನ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದರು. ಇದೇ ವೇಳೆ, ಬೆಳಗಾವಿ ರಾಜ ಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅವರೆಲ್ಲ ದೊಡ್ಡವರು. ಅವರ ಸುದ್ದಿ ನನಗೆ ಬೇಡ ಎಂದು ಹೇಳಿದರು.
ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರನ್ನು ನೇಮಕ ಮಾಡಿದೆ. ಅಥಣಿ, ಕಾಗವಾಡ-ಎಐಸಿಸಿ ಕಾರ್ಯದರ್ಶಿ, ಎಸ್.ಎ.ಸಂಪತ್‌ಕುಮಾರ್, ಗೋಕಾಕ್, ಯಲ್ಲಾಪುರ-ಎಐಸಿಸಿ ಕಾರ್ಯದರ್ಶಿ, ವಂಶಿಚಂದ ರೆಡ್ಡಿ, ಹಿರೆಕೆರೂರ, ರಾಣೆಬೆನ್ನೂರು-ಪೊನ್ನಂ ಪ್ರಭಾಕರ, ಮಾಜಿ ಸಂಸದ, ಚಿಕ್ಕಬಳ್ಳಾಪುರ, ಹೊಸಕೋಟೆ-ಎಂ.ಎಂ. ಪಲ್ಲಂರಾಜು-ಮಾಜಿ ಸಂಸದ, ಕೆ.ಆರ್.ಪುರ, ಶಿವಾಜಿನಗರ-ಮಯೂರ ಜಯಕುಮಾರ್, ತಮಿಳುನಾಡು ಪಿಸಿಸಿ ಕಾರ್ಯಾಧ್ಯಕ್ಷ, ಕೆ.ಆರ್.ಪೇಟೆ, ಹುಣಸೂರು-ವಿಶ್ವನಾಥನ್, ಮಾಜಿ ಸಂಸದ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ-ಸಂಜೀವ್ ಜೋಸೆಫ್, ಪ್ರಧಾನ ಕಾರ್ಯದರ್ಶಿ, ಕೇರಳ ಪಿಸಿಸಿ, ವಿಜಯನಗರ-ಎನ್. ತುಳಿಸಿ ರೆಡ್ಡಿ, ಮಾಜಿ ಸಂಸದ, ಹಾಗೂ ಎಐಸಿಸಿ ಕಾರ್ಯದರ್ಶಿ ಜೆ.ಡಿ. ಶೀಲಂ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ.