Advertisement
– ನಂದಿನಿ, ಎಸ್ಸೆಸ್ಸೆಲ್ಸಿ ಟಾಪರ್ಅವತ್ತು ನವೆಂಬರ್ 19, 2019. ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳೆಲ್ಲ ಖುಷಿಯಿಂದ ತೇಲುತ್ತಿದ್ದೆವು. ಯಾಕಂದ್ರೆ ಅವತ್ತು ಕ್ಲಾಸ್ ಟ್ರಿಪ್ ಇತ್ತು. ಬೆಳಗ್ಗೆ 6.30ರ ಹೊತ್ತಿಗೆ ಭದ್ರಾವತಿಯಿಂದ ಪ್ರವಾಸ ಹೊರಟಿದ್ದೆವು. ಅದೇನು ಖುಷಿ ಅಂತೀರಾ? ಪಂಜರದ ಹಕ್ಕಿಗಳನ್ನು ಆಕಾಶದಲ್ಲಿ ಹಾರಾಡಲು ಬಿಟಾØಗೆ ಆಗಿತ್ತು. ಊರು ಬಿಟ್ಟು ಸುಮಾರು ಒಂದು ಗಂಟೆ ಕಳೆದಿತ್ತೇನೋ ಅಷ್ಟೇ… ನಾವು ಕುಳಿತಿದ್ದ ಬಸ್ಸು ಎರಡು ಬಾರಿ ಇದ್ದಕ್ಕಿದ್ದಂತೆ ವಾಲಿದಂತಾಯಿತು. ಮೂರನೇ ಬಾರಿಯೂ ಹಾಗೆಯೇ ಆಗುತ್ತೆ ಅಂದುಕೊಂಡೆವು; ಆದರೆ, ಹಾಗಾಗಲಿಲ್ಲ. ಅದು ಉರುಳಿಯೇ ಬಿಟ್ಟಿತು. ಆ ನಂತರ ಏನಾಯಿತೆಂದು ಯಾರಿಗೂ ಗೊತ್ತೇ ಇಲ್ಲ.
Related Articles
– ಇಳಾ, 9ನೇ ತರಗತಿ, ಸೆð„ಬ್
ನಮ್ಮ ಶಾಲೆಯ ನಂದಿನಿ ಅಕ್ಕನನ್ನು ನೋಡಿ, ನನ್ನ ಮುಖ ಸಪ್ಪಗಾಯಿತು. “ಕೈಗಳಿಲ್ಲ, ಹ್ಯಾಗೆ ಬರೀತಾಳಪ್ಪಾ?’ ಅಂತ ಅನ್ನಿಸ್ತು. ಅದೇ ವೇಳೆಗೆ, ಪ್ರಿನ್ಸಿಪಾಲರು, ಶಿಕ್ಷಕರು ಬಂದು ಕೇಳಿದ್ರು… “ನಂದಿನಿಗೆ ಸೆð„ಬ್ ಆಗಿ, ಎಕ್ಸಾಮ್ ಬರೀತಿಯೇನಮ್ಮಾ…’ ಅಂತ. ನಂಗೆ ಮೊದಲಿಗೆ ಸ್ವಲ್ಪ ಭಯ ಆಯ್ತು; ಅವಳ ರಿಸಲ್ಟ್ಗೆ ಏನಾದ್ರೂ ತೊಂದರೆಯಾದ್ರೆ ಅಂತ. ಆಗ ಟೀಚರ್, “ನೀನೇನು ಭಯ ಪಡಬೇಡ. ನಾವು ಸಹಾಯ ಮಾಡ್ತೀವಿ’ ಅಂದ್ರು. ಅದೇ ಹೊತ್ತಿಗೆ ನನಗೆ 9ನೇ ತರಗತಿಯ ಪರೀಕ್ಷೆ. ಅಯ್ಯೋ, ಈಗೇನ್ ಮಾಡೋದು ಅನ್ನೋ ಚಿಂತೆ. ಆದರೆ, ಮನೆಯಲ್ಲಿ ಅಪ್ಪ- ಅಮ್ಮನ ಮಾತುಗಳು ಧೈರ್ಯ ಕೊಟ್ಟವು.
Advertisement
ನಿತ್ಯವೂ ನಂದಿನಿ ಅಕ್ಕನೊಂದಿಗೆ ಚರ್ಚಿಸುತ್ತಿದ್ದೆ. ಆಕೆಯ ಪರವಾಗಿ 10ನೇ ತರಗತಿಯ ಪ್ರಿಪರೇಟರಿ ಪರೀಕ್ಷೆ ಬರೆಯುವಾಗ ಅಳುಕಿತ್ತಾದರೂ, ಆಮೇಲೆ ನನ್ನೊಳಗೆ ಒಂದು ಕಾನ್ಫಿಡೆನ್ಸ್ ಹುಟ್ಟಿತು. ಕನ್ನಡ, ಇಂಗ್ಲಿಷ್‌ಗಳನ್ನೇನೋ ಬರೆದುಬಿಡಬಹುದು. ಆದರೆ, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕೇಳಿ, ಬರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ನಾನು ಒಂದಿಷ್ಟು ತಯಾರಿ ಮಾಡಿಕೊಳ್ಳಲೇಬೇಕಿತ್ತು. ಅಮ್ಮ, ವಿಜ್ಞಾನದ ಮಾಡೆಲ್‌ಗಳನ್ನು ತೋರಿಸುತ್ತಾ, ವಿವರಣೆ ಕೊಟ್ಟಳು. ಅಪ್ಪ ಗಣಿತದ ಒಳಹೊಕ್ಕು, ಲೆಕ್ಕವನ್ನು ಸುಲಭವಾಗಿಸುವ ಕಲೆ ಹೇಳಿಕೊಟ್ಟರು. ಹೀಗೆ ಕಲಿಯುತ್ತಲೇ, ನನ್ನ ಪಾಠಗಳು ಹಿಂದುಳಿದು, “ಏನ್ ನನ್ನ ಓದಲ್ವಾ?’ ಎನ್ನುವಂತೆ, ನನ್ನನ್ನೇ ದಿಟ್ಟಿಸುತ್ತಿರುವ ಹಾಗೆ ಅನ್ನಿಸುತ್ತಿತ್ತು. ಎಲ್ಲವನ್ನೂ ನಿಭಾಯಿಸುತ್ತಲೇ, ನಂದಿನಿ ಅಕ್ಕನಿಗೆ ಪರೀಕ್ಷೆ ಬರೆದುಕೊಟ್ಟೆ.
ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದ ದಿನ ನನಗೆ ಪುಕ್ಕಲು; ಏನಾದ್ರೂ ಹೆಚ್ಚುಕಮ್ಮಿ ಆಗಿಬಿಟ್ಟಿದ್ರೆ ಅಂತ… ಕಡೆಗೆ, ಅಕ್ಕನಿಗೆ 600 ಮಾರ್ಕ್ ಬಂದಿದೆ ಅಂತ ಗೊತ್ತಾದಾಗ, ಆಕೆಯ ಶ್ರಮ- ಸಾಧನೆ ನೋಡಿ ಖುಷಿಪಟ್ಟೆ. ಅವಳ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿತು.