Advertisement

Maratha quota: ಭುಗಿಲೆದ್ದ ಮರಾಠಿ ಮೀಸಲಾತಿ ಕಿಚ್ಚು… ಎನ್‌ಸಿಪಿ ಶಾಸಕನ ಮನೆಗೆ ಬೆಂಕಿ

03:20 PM Oct 30, 2023 | |

ಮಹಾರಾಷ್ಟ್ರ: ಮರಾಠ ಕೋಟಾ ವಿಚಾರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಈ ಹಿನ್ನೆಲೆಯಲ್ಲಿ ಬೀಡ್ ಜಿಲ್ಲೆಯ ಮಹಾರಾಷ್ಟ್ರ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಗೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆದು ಬೆಂಕಿ ಹಚ್ಚಿದ್ದಾರೆ.

Advertisement

ಮರಾಠ ಕೋಟಾ ಪರ ಹೋರಾಟಗಾರ ಮನೋಜ್ ಪಾಟೀಲ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಯಿಂದ ಪ್ರತಿಭಟನಾಕಾರರು ಕೋಪಗೊಂಡರು ಶಾಸಕ ಪ್ರಕಾಶ್ ಸೋಲಂಕಿ ಅವರ ನಿವಾಸವನ್ನು ಮರಾಠಾ ಮೀಸಲಾತಿ ಚಳವಳಿಗಾರರು ಸುತ್ತುವರೆದು ಮನೆಗೆ ಕಲ್ಲುಗಳನ್ನು ಎಸೆದು, ಮನೆಯ ಕೆಳಗೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಇದರ ಪರಿಣಾಮ ವಾಹನಗಳಿಗೆ ಹಚ್ಚಿದ ಬೆಂಕಿ ಮನೆಗೆ ವ್ಯಾಪಿಸಿದೆ ಎನ್ನಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸೋಲಂಕಿ, ಘಟನೆ ನಡೆದಾಗ ನಾವೆಲ್ಲರೂ ಮನೆಯೊಳಗೇ ಇದ್ದೆವು “ಅದೃಷ್ಟವಶಾತ್, ನನ್ನ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ, ಆದರೆ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ” ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ”ಈ ಪ್ರತಿಭಟನೆ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ, ಇದು ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಮನೋಜ್ ಜೈರಂಗೇ ಪಾಟೀಲ್ (ಮರಾಠ ಕೋಟಾ ಕಾರ್ಯಕರ್ತ) ಗಮನಿಸಬೇಕು ಎಂದು ಹೇಳಿದರು.

ಶಿಂಧೆ ಅವರು ತಮ್ಮ ಸರ್ಕಾರವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಲಹಾ ಮಂಡಳಿಯನ್ನು ರಚಿಸಿದೆ ಎಂದು ಹೇಳಿಕೆ ನೀಡಿದ ಬಳಿಕ ಈ ಹಿಂಸಾಚಾರ ನಡೆದಿದೆ ಎಂದು ಹೇಳಲಾಗಿದೆ.

Advertisement

ಇದನ್ನೂ ಓದಿ: Pulwama: ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ವಲಸೆ ಕಾರ್ಮಿಕನ ಗುಂಡಿಕ್ಕಿ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next