Advertisement

ಉಮ್ರಾನ್‌ ಮಲಿಕ್‌ ಗುರಿ 155 ಕಿ.ಮೀ.

10:51 PM Apr 28, 2022 | Team Udayavani |

ಮುಂಬೈ: ಜಮ್ಮುಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌ ಈ ಐಪಿಎಲ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸೆನ್ಸೇಶನ್‌ ಆಗಿರುವ ಉಮ್ರಾನ್‌ ಅತಿ ವೇಗದಲ್ಲಿ ಎಸೆತಗಳನ್ನಿಕ್ಕುವ ಜತೆಗೆ ವಿಕೆಟ್‌ ಉಡಾಯಿಸುವ ಮೂಲಕವೂ ತಮ್ಮ ಬೌಲಿಂಗ್‌ ಸಾಮರ್ಥ್ಯವನ್ನು ತೆರೆದಿರಿಸುತ್ತಿದ್ದಾರೆ. ಇದಕ್ಕೆ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯ ಉತ್ತಮ ನಿದರ್ಶನ ಒದಗಿಸಿತು.

Advertisement

ಈ ಪಂದ್ಯದಲ್ಲಿ 25 ರನ್ನಿಗೆ 5 ವಿಕೆಟ್‌ ಉಡಾಯಿಸಿದ ಉಮ್ರಾನ್‌ ಮಲಿಕ್‌, ನಾಲ್ವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಅತ್ಯಂತ ಘಾತಕವಾಗಿ ಪರಿಣಮಿಸಿದರು. ಇವರ ಸಾಹಸದಿಂದ ಹೈದರಾಬಾದ್‌ ಗೆಲುವಿನ ಬಾಗಿಲಿಗೆ ಬಂದಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅಬ್ಬರಿಸಿದ ರಶೀದ್‌ ಖಾನ್‌ ಪಂದ್ಯವನ್ನು ಹೈದರಾಬಾದ್‌ ಕೈಯಿಂದ ಕಸಿದರು. ಇದರಿಂದ ಮಲಿಕ್‌ ಸಾಧನೆಯೇನೂ ಮಸುಕಾಗಲಿಲ್ಲ. ಎಲ್ಲರೂ ಇವರ ಬೌಲಿಂಗ್‌ ಪರಾಕ್ರಮವನ್ನು ಪ್ರಶಂಸಿಸುತ್ತ, ಬಹಳ ಬೇಗ ಟೀಮ್‌ ಇಂಡಿಯಾಕ್ಕೆ ಸೇರಿಸಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಉಮ್ರಾನ್‌ ಮಲಿಕ್‌, 155 ಕಿ.ಮೀ. ವೇಗದಲ್ಲಿ ಚೆಂಡನ್ನೆಸೆಯುವುದು ತನ್ನ ಗುರಿ, ಇದನ್ನು ಈ ಐಪಿಎಲ್‌ನಲ್ಲೇ ಸಾಧಿಸಬೇಕು ಎಂದಿದ್ದಾರೆ.

 ವೇಗವೇ ನನ್ನ ಅಸ್ತ್ರ:

ವೇಗವೇ ನನ್ನ ಅಸ್ತ್ರ. ಆದರೆ ವೇಗದಿಂದಲೇ ಎಲ್ಲವೂ ಸಾಧ್ಯವಿಲ್ಲ. ಜತಗೆ ಲೆಂತ್‌ ಕಾಪಾಡಿಕೊಳ್ಳಬೇಕು, ವಿಕೆಟ್‌ ಟಾರ್ಗೆಟ್‌ ಮಾಡಬೇಕು. ಒಟ್ಟಾರೆ ವೆರೈಟಿ ಇರಬೇಕು. ಹಾರ್ದಿಕ್‌ ಭಾç ಅವರನ್ನು ಬೌನ್ಸರ್‌ ಮೂಲಕ, ಸಾಹಾ ಅವರನ್ನು ಯಾರ್ಕರ್‌ ಮೂಲಕ ಬೌಲ್ಡ್‌ ಮಾಡಿದ್ದೆಲ್ಲ ಇದಕ್ಕೆ ಉದಾಹರಣೆ. ವೇಗವನ್ನು ವೃದ್ಧಿಸಿಕೊಂಡು 155 ಕಿ.ಮೀಟರ್‌ಗೆ ಹೆಚ್ಚಿಸಿಕೊಳ್ಳುವುದು ನನ್ನ ಗುರಿ. ದೇವರ ದಯೆ ಇದ್ದರೆ ಒಂದು ದಿನ ಇಲ್ಲಿಯೇ ಇದನ್ನು ಸಾಧಿಸುವೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಉಮ್ರಾನ್‌ ಮಲಿಕ್‌.

ಗುಜರಾತ್‌ ಎದುರಿನ ಪಂದ್ಯದಲ್ಲಿ ಹೈದರಾಬಾದ್‌ ಉರುಳಿಸಿದ್ದೇ 5 ವಿಕೆಟ್‌. ಇವೆಲ್ಲವೂ ಉಮ್ರಾನ್‌ ಮಲಿಕ್‌ ಪಾಲಾದದ್ದು ವಿಶೇಷ. ಇದರಲ್ಲಿ ಸಾಹಾ, ಗಿಲ್‌, ಮಿಲ್ಲರ್‌ ಮತ್ತು ಅಭಿನವ್‌ ಮನೋಹರ್‌ ಬೌಲ್ಡ್‌ ಆಗಿದ್ದರು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ ಅಗ್ರ ಕ್ರಮಾಂಕದ 5 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆ ಮಲಿಕ್‌ ಅವರದಾಯಿತು.

Advertisement

ಈ ಋತುವಿನ 8 ಪಂದ್ಯಗಳಿಂದ 15 ವಿಕೆಟ್‌ ಕೆಡವಿದ ಸಾಧನೆ ಉಮ್ರಾನ್‌ ಮಲಿಕ್‌ ಅವರದು. ಸರಾಸರಿ 15.93.

Advertisement

Udayavani is now on Telegram. Click here to join our channel and stay updated with the latest news.

Next