Advertisement

ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ: ಡಿಕೆಶಿ ವಿರುದ್ಧ ಅಸಮಧಾನ ತೋರಿದ ಅಖಂಡ ಶ್ರೀನಿವಾಸ್

01:35 PM Nov 11, 2020 | keerthan |

ಬೆಂಗಳೂರು: ನಮ್ಮ ಮನೆಗೆ ಬೆಂಕಿ ಬಿದ್ದು ಮೂರು ತಿಂಗಳಾಗಿದೆ. ಈ ಪ್ರಕರಣದಲ್ಲಿ ಸಂಪತ್ ರಾಜ್ ನೇರ ಆರೋಪಿ. ಸಂಪತ್ ರಾಜ್ ಪಿಎ ಅರುಣ್ ಮುಖಾಂತರ ಕಾಲ್ ಮಾಡಿದ್ದಾರೆ. ಸಂಪತ್ ರಾಜ್ ಗೆ ಎ1 ಆರೋಪಿ ಮಾಡಲೇಬೇಕು, ನನಗೆ ಅನ್ಯಾಯ ಆಗಿದೆ. ಆದರೆ ನನಗೆ ನ್ಯಾಯ ಸಿಗುತ್ತಿಲ್ಲ, ಆದರೆ ರಾಜ್ಯ ನಾಯಕರ ಮನಸಿನಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಸಮಾಧಾನ ತೋಡಿಕೊಂಡರು.

Advertisement

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಪ್ರಕರಣದ ಅಪರಾಧಿಗಳು ಹೊರಗಡೆ ಓಡಿ ಹೋಗಿದ್ದಾರೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸಾಹೇಬ್ರು ನನಗೆ ರಕ್ಷಣೆ ಕೊಡಬೇಕು. ಅಪರಾಧಿಗಳಿಗೆ ರಕ್ಷಣೆ ಸಿಗಬಾರದು, ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದರು.

ಶಾಸಕನಾಗಿ ನನಗೆ ಅನ್ಯಾಯ ಆಗಿದೆ. ಆದರೆ ನನಗೆ ನ್ಯಾಯ ಸಿಗುತ್ತಿಲ್ಲ. ಸೋನಿಯಾ ಗಾಂಧಿ ಮೇಡಂ, ರಾಹುಲ್ ಗಾಧಿ ಸರ್ ನನ್ನ ರಕ್ಷಣೆಗೆ ಬರಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next