ಇಸ್ಲಾಮಾಬಾದ್:ಜಮ್ಮು-ಕಾಶ್ಮೀರದ ವಿಚಾರದಲ್ಲಿ ತೀರಾ ಹುಚ್ಚಾಟಕ್ಕೆ ಇಳಿದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಕಾಶ್ಮೀರಿ ಜನರ ಪರವಾಗಿ ಪಾಕಿಸ್ತಾನದ ಜನರು ಶುಕ್ರವಾರ ಮಧ್ಯಾಹ್ನ 12ಗಂಟೆಯಿಂದ 12-30ರವರೆಗೆ ಮನೆಯಿಂದ ಹೊರಬಂದು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಗುರುವಾರ ಟ್ವೀಟ್ ಮೂಲಕ ಕರೆ ನೀಡಿದ್ದಾರೆ!
ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯವನ್ನು ವಿರೋಧಿಸಿ ನಾವು ಭಾರತದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಕಾಶ್ಮೀರದಲ್ಲಿ ದಿನಂಪ್ರತಿ ನಾಗರಿಕರ, ಮಹಿಳೆಯರ, ಮಕ್ಕಳ ಹತ್ಯೆ ನಡೆಯುತ್ತಿದೆ. ಇದು ಮೋದಿ ಸರಕಾರದ ಹಿಡನ್ ಅಜೆಂಡ ಎಂದು ಖಾನ್ ವಾಗ್ದಾಳಿ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಶ್ಮೀರದ ಪರವಾಗಿ ನಮ್ಮ ದೇಶದ ನಿಲುವಿನ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ಪಾಕಿಸ್ತಾನದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅರ್ಧ ಗಂಟೆ ಕಾಲ ಮನೆಯಿಂದ ಹೊರಬಂದು ರೋಡ್ ಶೋ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕೆಂದು ಇಮ್ರಾನ್ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.