Advertisement
ನನಗೊಂದು ಆಸೆ ಇದೆ. ಏನ್ ಗೊತ್ತಾ? ನಂಗೊಬ್ಬ ಗೆಳೆಯ ಬೇಕು. ಅವನಿಗೆ ನಾನೇ ಪ್ರಪಂಚ ಆಗದಿದ್ದರೂ ಪರವಾಗಿಲ್ಲ, ನನ್ನನ್ನು ನಾನಿರುವಂತೆ ಒಪ್ಪಿಕೊಂಡರೆ ಸಾಕು. ಜೊತೆಗೆ, ಅವನು ಸಿಕ್ಕಾಪಟ್ಟೆ ತರ್ಲೆ ಮಾಡಬೇಕು, ನನ್ನನ್ನು ಯಾವಾಗ್ಲೂ ಗೋಳು ಹೊಯೊಬೇಕು. ಆದ್ರೆ, ಯಾವತ್ತಿಗೂ ನನ್ನನ್ನು ಅಳಿಸಬಾರದು.
Related Articles
Advertisement
ಏನು ಕಾಮಿಡಿ ಅನ್ಸುತ್ತಾ? ನಗು ಬರ್ತಿದ್ಯಾ? ನನ್ನ ಹುಡುಗನ ಬಗ್ಗೆ ಇಷ್ಟೆಲ್ಲಾ ಕನಸುಗಳಿವೆ ನನಗೆ. ಇದೆಲ್ಲಾ ನಡೆಯೋದು ಸಿನಿಮಾದಲ್ಲಿ ಮಾತ್ರ ಅಂತ ನಂಗೂ ಗೊತ್ತು. ಆದ್ರೂ, ಮೊದಲ ನೋಟದಲ್ಲೇ “ಇವನು ನನ್ನವನು’ ಅಂತ ಅನ್ನಿಸಬೇಕು. ನೋಡಲು ಸುರ ಸುಂದರಾಂಗನೇ ಆಗಿರಬೇಕು ಅಂತೇನಿಲ್ಲ. ಆದರೆ, ಆಂತರ್ಯದಲ್ಲಿ ಸುಂದರನಾಗಿರಬೇಕು. ಯಾರಿಗೂ ನೋವು ಕೊಡಬಾರದು. ತುಂಬಾ ಹೆಲ್ಪಿಂಗ್ ನೇಚರ್ ಇರಬೇಕು. ಮಕ್ಕಳೆಂದರೆ ಪ್ರಾಣ, ಬಡವರೆಂದರೆ ಕಾಳಜಿ ಇರಬೇಕು. ಎಲ್ಲರೂ ನಮ್ಮವರೇ ಎನ್ನುವ ವಿಶಾಲ ಮನೋಭಾವ, ಏನೇ ಕಷ್ಟ ಬಂದರೂ ತನ್ನತನವನ್ನು ಬಿಟ್ಟು ಕೊಡದ ಸ್ವಾಭಿಮಾನ ಇರಲೇಬೇಕು. ಕಷ್ಟ ಜೀವಿ, ನಿಸ್ವಾರ್ಥಿ, ಪ್ರಾಮಾಣಿಕನಾಗಿರಬೇಕು.
ಬಡವನಾದರೂ ಚಿಂತೆ ಇಲ್ಲ. ಈ ಬಡವಿಯ ಸಣ್ಣ ಪುಟ್ಟ ಆಸೆಗಳನ್ನು ತೀರಿಸಿದರೆ ಸಾಕು. ಅವನಿಗೆ ನೆರಳಾಗಿ, ಉಸಿರಾಗಿ ಜೊತೆಗಿರುತ್ತೇನೆ. ಇಷ್ಟು ಒಳ್ಳೆಯ ಹುಡುಗ ಸಿಕ್ಕರೆ, ಅವನನ್ನೂ, ಅವನ ಒಳ್ಳೆಯತನವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಜವಾಬ್ದಾರಿ ನನ್ನದು.
ಆದರೆ, ಇಂಥ ಹುಡುಗನನ್ನು ಎಲ್ಲಪ್ಪಾ ಹುಡುಕೋದು? ಆ ಮುದ್ದುಗುಮ್ಮ ಆದಷ್ಟು ಬೇಗ ನನಗೆ ಸಿಗಲಿ. ದೇವರೇ ಪ್ಲೀಸ್, ಇದೊಂದು ಆಸೆ ನೆರವೇರಿಸು. ಈ ಸಲ ಐವತ್ತು ರೂಪಾಯಿಯ ಎರಡು ಡೈರಿಮಿಲ್ಕ್ ಚಾಕೊಲೇಟ್, 2 ರೋಜಾ ಹೂ ಕೊಡ್ತೀನಿ. ಡೀಲ್ ಓಕೆನಾ? ಪ್ಲೀಸ್ ಮರೀಬೇಡ ಆಯ್ತಾ.
ತುಂಟ ಹುಡುಗನ ದಾರಿ ಕಾಯುತ್ತಿರೋ ರಾಜ…ಕುಮಾರಿ
ಅಪೂರ್ವ ನಾಗರಾಜ್