Advertisement

Infosys: 90 ಗಂಟೆ ದುಡಿಯುತ್ತಿದ್ದೆ- ಇನ್ಫೋಸಿಸ್‌ ನಾರಾಯಣ ಮೂರ್ತಿ

12:00 AM Dec 10, 2023 | Team Udayavani |

ಹೊಸದಿಲ್ಲಿ: “ಭಾರತದ ಏಳಿಗೆಗಾಗಿ ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡ ಬೇಕು” ಎಂಬ ತಮ್ಮ ಹೇಳಿಕೆಯನ್ನು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಪುನಃ ಸಮರ್ಥಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಇನ್ಫೋಸಿಸ್‌ ಕಂಪನಿಯಲ್ಲಿ ಕ್ರಿಯಾಶೀಲನಾಗಿದ್ದ ಸಮಯದಲ್ಲಿ, ಬೆಳಗ್ಗೆ 6.20ಕ್ಕೆ ಆಗಮಿಸಿ, ರಾತ್ರಿ 8.30ಕ್ಕೆ ಮನೆಗೆ ಮರಳುತ್ತಿದ್ದೆ.

Advertisement

ವೃತ್ತಿ ಜೀವನದ 40ಕ್ಕೂ ಹೆಚ್ಚು ವರ್ಷ ವಾರಕ್ಕೆ 70 ಗಂಟೆ ದುಡಿಯುತ್ತಿದ್ದೆ. 1994ರವರೆಗೆ, ವಾರಕ್ಕೆ ಕನಿಷ್ಠ 85ರಿಂದ 90 ಗಂಟೆ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥವಾಗಲಿಲ್ಲ’ ಎಂದು ತಿಳಿಸಿದ್ದಾರೆ. “ತುಂಬ ಕಠಿಣವಾಗಿ ದುಡಿದರೇ ಮಾತ್ರ ಬಡತನದಿಂದ ಹೊರಬರಬಹುದು ಎಂಬುದನ್ನು ಚಿಕ್ಕ ವಯಸ್ಸಿನಿಂದಲೂ ನನ್ನ ಪೋಷಕರು ನಮಗೆ ಕಲಿಸಿದರು’ ಎಂದು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next