ನವದೆಹಲಿ: ಪ್ರಸಕ್ತ ಸಾಲಿನಲ್ಲಿ 25.55 ಲಕ್ಷ ಆದಾಯ ತೆರಿಗೆದಾರರಿಗೆ 95,853 ಕೋಟಿ ರೂಪಾಯಿ ರೀಫಂಡ್ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ (ಆಗಸ್ಟ್ 26, 2020) ತಿಳಿಸಿದೆ.
23.01 ಲಕ್ಷ ಆದಾಯ ತೆರಿಗೆದಾರರ ವೈಯಕ್ತಿಕ ಆದಾಯ ತೆರಿಗೆ ರೀಫಂಡ್ 29,361 ಕೋಟಿ ರೂಪಾಯಿ ಸೇರಿದೆ. ಈ ಸಾಲಿನ 1.63 ಲಕ್ಷ ಆದಾಯ ತೆರಿಗೆದಾರರಿಗೆ 66,493 ಕೋಟಿ ಕಾರ್ಪೋರೇಟ್ ತೆರಿಗೆ ರೀಫಂಡ್ ಮಾಡಲಾಗಿದೆ ಎಂದು ಹೇಳಿದೆ.
2020ರ ಏಪ್ರಿಲ್ 1ರಿಂದ 2020ರ ಆಗಸ್ಟ್ 25ರವರೆಗೆ 25.55 ಲಕ್ಷಕ್ಕಿಂತಲು ಅಧಿಕ ಆದಾಯ ತೆರಿಗೆದಾರರಿಗೆ 95,853 ಕೋಟಿ ರೂಪಾಯಿ ರೀಫಂಡ್ ಮಾಡಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ. 29,361 ಕೋಟಿ ಆದಾಯ ತೆರಿಗೆ ರೀಫಂಡ್ ಹಾಗೂ 66,493 ಕೋಟಿ ಕಾರ್ಪೋರೇಟ್ ತೆರಿಗೆ ರೀಫಂಡ್ ಮಾಡಲಾಗಿದೆ ಎಂದು ತಿಳಿಸಿದೆ.