Advertisement

ಬಿಡ್ಡಿಂಗ್‌ನಿಂದ  ಐ ಸ್ಕ್ವೇರ್ಡ್‌ ವಿದಾಯ?

07:05 PM Nov 12, 2021 | Team Udayavani |

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಬಿಪಿಸಿಎಲ್‌) ಅನ್ನು ಖರೀದಿಸುವ ರೇಸ್‌ನಿಂದ ಅಮೆರಿಕದ ಖಾಸಗಿ ಷೇರು ಸಂಸ್ಥೆ ಐ ಸ್ಕ್ವೇರ್ಡ್‌ ಕ್ಯಾಪಿಟಲ್‌ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

Advertisement

ಒಪ್ಪಂದದ ಸಂಕೀರ್ಣ ನಿಯಮಗಳು ಹಾಗೂ ಈ ವಹಿವಾಟು ನಡೆಸಲು ಹಣಕಾಸಿನ ನೆರವು ನೀಡುವ ಸಂಸ್ಥೆಗಳ ಕೊರತೆಯಿಂದಾಗಿ ಕಂಪನಿ ಬಿಡ್ಡಿಂಗ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಬಿಪಿಸಿಎಲ್‌ ಕಂಪನಿಯಲ್ಲಿ ಭಾರತ ಸರ್ಕಾರ ಹೊಂದಿರುವ ಶೇ.53ರಷ್ಟು ಷೇರುಗಳನ್ನು ಖರೀದಿಸಲು ಮೂರು ಕಂಪನಿಗಳು ಆಸಕ್ತಿ ವಹಿಸಿದ್ದವು. ಆ ಪೈಕಿ ಐ ಸ್ಕ್ವೇರ್ಡ್‌ ಕ್ಯಾಪಿಟಲ್‌ನ ಭಾರತೀಯ ಅಂಗಸಂಸ್ಥೆ ಥಿಂಕ್‌ ಗ್ಯಾಸ್‌ ಕೂಡ ಒಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next