Advertisement

Madhya Pradesh; ನಾನು ವಿರಾಟ್, ಸೆಹವಾಗ್ ರಂತೆ, ಭವಿಷ್ಯದ ಬಗ್ಗೆ ಯೋಚಿಸುವವನು..: ಸಿಂಧಿಯಾ

12:51 PM Sep 15, 2023 | Team Udayavani |

ಹೊಸದಿಲ್ಲಿ: ಸೇಡಿನ ರಾಜಕಾರಣ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.

Advertisement

ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಯ ರೇಸ್‌ ನಲ್ಲಿ ಇಲ್ಲ. ತಾನು ಮಧ್ಯಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ವ್ಯಕ್ತಿ ಮಾತ್ರ ಎಂದು ಸಿಂಧಿಯಾ ಹೇಳಿದ್ದಾರೆ.

ತಮ್ಮ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯ ಕುರಿತು ಮಾತನಾಡಿದ ಸಿಂಧಿಯಾ, “ನಾನು ಯಾವತ್ತೂ ಮುಖ್ಯಮಂತ್ರಿ ಕುರ್ಚಿಯ ರೇಸ್‌ ನಲ್ಲಿ ಇರಲಿಲ್ಲ. ನಾನೇನೂ ಹಿಂದೆಯೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿಲ್ಲ, ಇಂದು ಕೂಡ ಅಲ್ಲ.” ಎಂದರು.

“ಹೌದು, ನಾನು 2018ರ ಚುನಾವಣೆಯಲ್ಲಿ ಕೊಡುಗೆ ನೀಡಿದ್ದೇನೆ. ಫಲಿತಾಂಶಗಳು ಪ್ರಕಟವಾದ ನಂತರ, ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿತು, ನಾನು ಆ ನಿರ್ಧಾರವನ್ನು ಬೆಂಬಲಿಸಿದೆ. ಆದರೆ, ನಾನು ಎಂದಿಗೂ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯಾಗಿರಲಿಲ್ಲ’’ ಎಂದು ಸೇರಿಸಿದರು.

ಇದನ್ನೂ ಓದಿ:Heavy Rain: ದೆಹಲಿಯಲ್ಲಿ ಭಾರಿ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಟ್ರಾಫಿಕ್ ಜಾಮ್…

Advertisement

“ನಾನು ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹವಾಗ್ ಅವರಂತೆ ಆಡುತ್ತೇನೆ. ನಾನು ವಿರಾಟ್ ಮತ್ತು ಸೆಹವಾಗ್‌ ನಂತೆ ಆಡದಿದ್ದರೆ, ಕಾಂಗ್ರೆಸ್ ಸರ್ಕಾರ ಪತನ ಸಂಭವಿಸುತ್ತಿರಲಿಲ್ಲ. ನನ್ನ ಇತಿಹಾಸದ ಮೇಲೆ ಬದುಕಲು ಬಯಸುವುದಿಲ್ಲ” ಎಂದರು.

ಕಾಂಗ್ರೆಸ್ ತೊರೆಯುವ ತನ್ನ ನಿರ್ಧಾರವನ್ನು “ಬಲವಾದ ಸಂದೇಶ” ಎಂದು ಬಣ್ಣಿಸಿದ ಸಿಂಧಿಯಾ, ಬಿಜೆಪಿಯಲ್ಲಿ ಯಾವುದೇ ಅರ್ಹತೆಯ ಸಂಸ್ಕೃತಿಯಿಲ್ಲ. ಮಾಡಿದ ಎಲ್ಲಾ ಶ್ರಮವನ್ನು ಪಕ್ಷದ ನಾಯಕತ್ವ ಗುರುತಿಸಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಟಿಕೆಟ್ ಗಳನ್ನು ಆ ಅಭ್ಯರ್ಥಿಯ ಅರ್ಹತೆಯ ಆಧಾರದಿಂದ ನೀಡಲಾಗಿದೆ. ಯಾವುದೇ ವ್ಯಕ್ತಿಯ ಶಿಫಾರಸಿನಿಂದ ನೀಡಲಾಗಿಲ್ಲ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next