ನವದೆಹಲಿ: ಆ್ಯಪಲ್ ಸಂಸ್ಥೆ ಜನಸ್ನೇಹಿ ಸ್ಮಾರ್ಟ್ ಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಚಿಸುತ್ತಿದ್ದು, ತೆಳು ಗಾತ್ರದ ಮತ್ತು ಬಳಕೆ ಮಾಡಲು ಹೆಚ್ಚು ಅನುಕೂಲಕರವಾದ ಐಫೋನ್ 12, ಮುಂದಿನ ವರ್ಷದ ವೇಳೆಗೆ ಗ್ರಾಹಕರ ಕೈಗೆಟುಕಲಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 2020 ರಲ್ಲೇ ಬಿಡುಗಡೆಯಾಗಲಿದೆ.
ಆ್ಯಪಲ್ ಸರಣಿಯ ಐಫೋನ್ 4 ಅಥವಾ ಐಫೋನ್ 5 ವಿನ್ಯಾಸವನ್ನು ಐಫೋನ್ 12 ಸರಣಿಯಲ್ಲಿ ಆಳವಡಿಸಿಕೊಳ್ಳಲಾಗಿದದ್ದು ಶಾರ್ಪರ್ ಎಡ್ಜ್ ಅನ್ನು ಹೊಂದಿದೆ. ಡಿಸ್ ಪ್ಲೇ ಗಾತ್ರ 5.8 ಇಂಚಿನಿಂದ 5.4 ಇಂಚಿಗೆ ಇಳಿಕೆ ಮಾಡಲಾಗಿದೆ.
ಐಫೋನ್ 12 ಸರಣಿಯು 5G ಕನೆಕ್ಟಿವಿಟಿಯನ್ನು ಹೊಂದಿದ್ದು 6 ಜಿಬಿ RAM ಅನ್ನು ಹೊಂದಿರುವ ಸಾಧ್ಯತೆಯಿದೆ. ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿರಲಿದ್ದು, ಹೆಚ್ಚುವರಿಯಾಗಿ, ಉತ್ತಮ ಛಾಯಾಗ್ರಹಣದ ಅನುಭವ ಪಡೆಯಲು 3D ಸೆನ್ಸಾರ್ ಇದೆ. ಈ ತಂತ್ರಜ್ಞಾನವು ಐಫೋನ್ 12 ಗೆ ಬರುವ ಮುನ್ನ ಐಪ್ಯಾಡ್ ಪ್ರೊನಲ್ಲಿ ಗೆ ಪರಿಚಯಿಸಲು ನಿರ್ಧರಿಸಲಾಗಿತ್ತು. ಆದರೇ ಅಧಿಕೃತವಾಗಿ ಐಫೋನ್ 12 ನಲ್ಲಿ ಅಳವಡಿಸಿಕೊಳ್ಳಲಾಗಿದೆ.
ಇದು ಎ13 ಚಿಪ್ ಅನ್ನು ಹೊಂದಿದ್ದು, ಐಫೋನ್ 11ನಲ್ಲಿ 3 ಜಿಬಿ RAM ಜೊತೆಗೆ ಈ ಮೊದಲೇ ಪರಿಚಯಿಸಲಾಗಿತ್ತು. ಈ ಸ್ಮಾರ್ಟ್ ಫೋನ್ ಸಿಲ್ವರ್ , ಸ್ಪೇಸ್ ಗ್ರೇ ಮತ್ತು ಕೆಂಪು ಈ ಮೂರು ಕಲರ್ ನಲ್ಲಿ ಲಭ್ಯವಾಗಲಿದೆ.
ಇದರ ಬೆಲೆ ಇತರ ಐಫೋನ್ ಸರಣಿಗಳಿಗಿಂತ ಭಾರೀ ಕಡಿಮೆಯಿದ್ದು ಮಧ್ಯಮ ವರ್ಗದ ಕೈಗೆಟುಕುವಂತಿದೆ. ಡಾಲರ್ ರೂಪದಲ್ಲಿ $399 (29 ಸಾವಿರ) ಇದರ ಮಾರುಕಟ್ಟೆ ದರ ಎಂದು ಪ್ರಮುಖ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.