Advertisement

ಟೀಂ ಇಂಡಿಯಾ ಜೊತೆಗೆ ಸೇರಲು ಮತ್ತೆ ಕಾಯುತ್ತಿದ್ದೇನೆ: ರೋಹಿತ್ ಶರ್ಮಾ

10:33 AM May 24, 2020 | keerthan |

ಮುಂಬೈ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕ್ರೀಡಾ ಚಟುವಟಿಕೆಗಳು ಸ್ಥಬ್ಧವಾಗಿದೆ. ಭಾರತದಲ್ಲೂ ಕ್ರಿಕೆಟ್ ನಡೆಯುತ್ತಿಲ್ಲ. ಕಳೆದ ಎರಡು ತಿಂಗಳಿನಿಂದ ಮನೆಯಲ್ಲಿಯೇ ಲಾಕ್ ಆಗಿರುವ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮತ್ತೆ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Advertisement

ಫುಟ್ ಬಾಲ್ ತಾರೆ ಜೋ ಮಾರಿಸನ್ ಜೊತೆ ಮಾತನಾಡಿದ ರೋಹಿತ್ ಶರ್ಮಾ, ನನ್ನ ಸಹ ಆಟಗಾರರೊಂದಿಗೆ ಸಮಯ ಕಳೆಯುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನ ನಾವು ಒಟ್ಟಿಗೆ ಇರುತ್ತೇವೆ. ಹೀಗಾಗಿ ನಾವು ಕುಟುಂಬದ ರೀತಿ ಇರುತ್ತೇವೆ ಎಂದು ರೋಹಿತ್ ಹೇಳಿದ್ದಾರೆ.

ಈ ಕೋವಿಡ್ ಲಾಕ್ ಡೌನ್ ಮುಗಿದೊಡನೆ ಇವರ ಜೊತೆ ಸೇರಿ ಕ್ರಿಕೆಟ್ ಆಡಲು ಕಾಯುತ್ತಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಬಿಸಿಸಿಐ ತನ್ನ ಆಟಗಾರರಿಗೆ ಸ್ಕಿಲ್ ಕ್ಯಾಂಪ್ ನಡೆಸಲು ಯೋಚಿಸಿದೆ. ಆದರೆ ಅದರಲ್ಲಿ ಮುಂಬೈನಲ್ಲಿ ಕೋವಿಡ್-19 ವೈರಸ್ ಕಾಟ ತೀವ್ರವಿರುವ ಕಾರಣ ರೋಹತ್ ಶರ್ಮಾ ಕ್ಯಾಂಪ್ ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next