Advertisement
ಸಂದರ್ಶನವೊಂದರಲ್ಲಿ ಮಾತನಾಡಿದ ರಹಾನೆ, “ಆಸ್ಟ್ರೇಲಿಯ ಸರಣಿಯಲ್ಲಿ ನಾನು ಮಾಡಿದ್ದೇನು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಅಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವನು ನಾನು. ಆದರೆ ಆ ಯಶಸ್ಸಿನ ಶ್ರೇಯಸ್ಸನ್ನು ಬೇರೆಯವರು ತೆಗೆದುಕೊಂಡರು’ ಎಂದು ಯಾರ ಹೆಸರನ್ನೂ ಉಲ್ಲೇಖೀಸಿದೆ ಹೇಳಿದರು. ಆದರೆ ಇದು ಅಂದಿನ ಕೋಚ್ ರವಿಶಾಸ್ತ್ರಿಗೆ ಎಸೆದ ಬೌನ್ಸರ್ ಎಂಬುದರಲ್ಲಿ ಅನುಮಾನವಿಲ್ಲ.
ಅಂದು ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 36 ರನ್‌ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಬಳಿಕ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹಿಂದೆ ಸರಿದಿದ್ದರು. ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರಹಾನೆ, ಉಳಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ -ದಬಾಂಗ್ ದಿಲ್ಲಿ ಪಂದ್ಯ ಟೈ
Related Articles
Advertisement
“ನನ್ನ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ ಎಂದು ಹೇಳುವವರನ್ನು ನೋಡಿ ನಗಬೇಕಷ್ಟೇ. ಕ್ರೀಡೆ ಬಗ್ಗೆ ತಿಳಿವಳಿಕೆಯುಳ್ಳವರು ಇಂಥ ಮಾತನ್ನು ಆಡುವುದಿಲ್ಲ. ಆಸ್ಟ್ರೇಲಿಯದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನನ್ನ ಕೊಡುಗೆ ಏನು ಎಂಬುದನ್ನೂ ತಿಳಿದಿ¨ªಾರೆ. ಕ್ರೀಡೆ ಬಗ್ಗೆ ಒಲವು ಇರುವವರು ಸಮಯೋಚಿತವಾಗಿ ಮಾತನಾಡುತ್ತಾರೆ’ ಎಂದರು.